ಘಟನೆಯ ಸ್ಥಳ 
ದೇಶ

ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಶಂಕಿತ ಆರೋಪಿಯೊಬ್ಬನ್ನು ಎನ್​ಕೌಂಟರ್ ಮಾಡಿ ಹತ್ಯೆಗೈದ ಪೊಲೀಸರು | Encounter

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬರುಯಿಪುರದ  11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ(ಜು. 07) ರಾತ್ರಿ ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ಎನ್​ಕೌಂಟರ್(Encounter) ಮಾಡಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. 
ಪ್ರವಾಶ್ ಮಂಡಲ್ ಎನ್​ಕೌಂಟರ್​ನಲ್ಲಿ ಹತ್ಯೆಯಾದ ಆರೋಪಿ. ಬರುಯಿಪುರ ಉಪನಗರದಲ್ಲಿ ಮಧ್ಯರಾತ್ರಿಯ ಸುಮಾರಿಗೆ ಪ್ರವಾಶ್ ಮಂಡಲ್‌ನನ್ನು ಸ್ಥಳಕ್ಕೆ ಕರೆದೊಯ್ದು, ಸ್ಥಳಮಹಜರು ಮಾಡುವ ಜೊತೆ ಅಪರಾಧ ಮರುಸೃಷ್ಟಿ ಮಾಡುವ ಸಮಯದಲ್ಲಿ ಪೊಲೀಸರಿಂದ ಬಂದೂಕನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಪೊಲೀಸರು ಮತ್ತು ಆರೋಪಿ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಆತ್ಮ ರಕ್ಷಣೆಗೋಸ್ಕರ್ ಪೊಲೀಸರು ಎನ್​ನೌಂಟರ್ ಮಾಡಿದ್ದಾರೆ ಎನ್ನಲಾಗಿದೆ. ಕೊಳದಲ್ಲಿ ಬಾಲಕಿಯ ಶವ ಸಿಕ್ಕ ಬಳಿಕ ಬಂಧಿಸಲಾದ ಮೂವರು ಶಂಕಿತರಲ್ಲಿ ಮೊಂಡಲ್ ಕೂಡ ಸೇರಿದ್ದಾರೆ. ನ್ನಿಬ್ಬರನ್ನು ಆನಂದ ಸರ್ದಾರ್ ಮತ್ತು ದಿಬಾಕರ್ ಸರ್ದಾರ್ ಎಂದು ಗುರುತಿಸಲಾಗಿದೆ.
ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಪಶ್ಚಿಮ ಬಂಗಾಳದಲ್ಲಿ ಭಾರಿ ಸಂಚಲನ ಮೂಡಿಸಿದೆ. ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಈ ಪ್ರಕರಣವನ್ನಿಟ್ಟುಕೊಂಡು ಟಿಎಂಸಿ ಹೋರಾಟ ಆರಂಭಿಸಿದೆ. ಮತ್ತು ಅಲ್ಲಲ್ಲಿ  ಹಿಂಸಾತ್ಮಕ ಪ್ರತಿಭಟನೆಗಳ ನಡೆದಿದೆ. ಕೋಪಗೊಂಡ ಸ್ಥಳೀಯರು ರೈಲ್ವೆ ಹಳಿಗಳು ಮತ್ತು ಪೊಲೀಸ್ ವಾಹನಗಳಿಗೆ ಹಾನಿ ಮಾಡಿದ್ದಾರೆ. ವಿಧ್ವಂಸಕ ಕೃತ್ಯಗಳಲ್ಲಿ ನಡೆಸಿದ ಆರೋಪದ ಮೇಲೆ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ (ಏಜೆನ್ಸೀಸ್).