Hyderabad Cyber Crime 
ದೇಶ

ಪ್ರಧಾನಿ ಮೋದಿ AI ತಿರುಚಿದ ವಿಡಿಯೋ ಕೇಸ್: ಮೆಟಾ ಇಂಡಿಯಾ ಮುಖ್ಯಸ್ಥನ ವಿರುದ್ಧ ಎಫ್‌ಐಆರ್ ದಾಖಲು..Meta India head

ಪ್ರಮುಖ ಮುಖ್ಯಾಂಶಗಳು

  • ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ AI-ಸೃಷ್ಟಿತ ವಿಡಿಯೋ ವೈರಲ್
  • ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್ ವಿರುದ್ಧ ಎಫ್‌ಐಆರ್ ದಾಖಲು
  • ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತನಿಖೆ
ಹೈದರಾಬಾದ್​: ಪ್ರಧಾನಿ ನರೇಂದ್ರ ಮೋದಿ ಅವರ ಕೃತಕ ಬುದ್ಧಿಮತ್ತೆ (AI) ಬಳಸಿ ತಿರುಚಿದ ವಿಡಿಯೋಗಳ ಹಂಚಿಕೆಗೆ ಸಂಬಂಧಿಸಿದಂತೆ ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್ ಮತ್ತು ಸೋಶಿಯಲ್​ ಮೀಡಿಯಾ ಬಳಕೆದಾರರ ವಿರುದ್ಧ ಹೈದರಾಬಾದ್​ ಸೈಬರ್​ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.
ಜಾಗತಿಕ ತಂತ್ರಜ್ಞಾನ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಒಳಗೊಂಡ ಅತ್ಯಂತ ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಒಂದಾಗಿದೆ ಎಂದು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಹೇಳಿದರು. ಇದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಹುನ್ನಾರವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಂದುವರೆದ ತನಿಖೆ

ಸದ್ಯ ಕೇಸ್​ ಅನ್ನು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಸಂಭಾವ್ಯ ಉಲ್ಲಂಘನೆಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಎಐ ಸಹಾಯದಿಂದ ನಿರ್ಮಾಣವಾದ ವಿಡಿಯೋಗಳು ಎಲ್ಲಿಂದ ರಿಲೀಸ್ ಆದವು. ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು ಹೇಗೆ? ಮೆಟಾದ ಸುರಕ್ಷತಾ ಕ್ರಮ ಏನಿದೆ?. ಈ ತಿರುಚಿದ ವಿಷಯವನ್ನು ರಚಿಸಿದ, ಅಪ್‌ಲೋಡ್ ಮಾಡಿದ ಅಥವಾ ಹಂಚಿಕೊಂಡ ಆರೋಪ ಹೊತ್ತಿರುವ ವ್ಯಕ್ತಿಗಳ ಪಾತ್ರವನ್ನೂ ಸಹ ತನಿಖೆಯು ಪರಿಶೀಲಿಸಲಿದೆ.

ಮೆಟಾಗೆ ನೋಡಿಸ್

AI-ನಿರ್ಮಿತ ವಂಚನೆಗಳು, ನಕಲಿ ಜಾಹೀರಾತ್ತುಗಳು ಮತ್ತು ಇತರ ತಿರುಚಿದ ವಿಷಯಗಳನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು ಕಂಪನಿಯು ಹೊಂದಿರುವ ಕಾರ್ಯವಿಧಾನಗಳ ಬಗ್ಗೆ ವಿವರಣೆ ನೀಡುವಂತೆ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಮೆಟಾ ಪ್ರತಿನಿಧಿಗಳಿಗೆ ಸಮನ್ಸ್ ಜಾರಿಗೊಳಿಸಿದ ಕೆಲವೇ ದಿನಗಳಲ್ಲಿ ಈ ಎಫ್‌ಐಆರ್ ದಾಖಲಾಗಿದೆ. ಮೆಟಾ ಪ್ರತಿನಿಧಿಯೊಬ್ಬರು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಕಂಪನಿಯ ಮಾಡೋರೇಶನ್​ ಕ್ರಮ ಮತ್ತು ಅನುಸರಣೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
AI-ನಿರ್ಮಿತ ತಪ್ಪು ಮಾಹಿತಿಯ ಹರಡುವಿಕೆ ಮತ್ತು ಹಾನಿಕಾರಕ ವಿಷಯಗಳ ಪ್ರಸಾರವನ್ನು ತಡೆಯುವ ಮಧ್ಯವರ್ತಿಗಳ ಜವಾಬ್ದಾರಿಯ ಕುರಿತು ಸಾಮಾಜಿಕ ಜಾಲತಾಣಗಳ ಮೇಲಿನ ಹೆಚ್ಚುತ್ತಿರುವ ತೀವ್ರ ಪರಿಶೀಲನೆಯನ್ನು ಈ ಪ್ರಕರಣವು ಒತ್ತಿಹೇಳುತ್ತದೆ. ತನಿಖೆಯು ಇನ್ನೂ ಪ್ರಾಥಮಿಕ ಹಂತದಲ್ಲಿದೆ ಮತ್ತು ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾಗುವ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ, (ಏಜೆನ್ಸೀಸ್).