ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪುತ್ರ ಅಮೀನ್ ಕಾರು ಅಫಘಾತ
- ಕಾಠಿಪರಾ ಫ್ಲೈಓವರ್‌ನಲ್ಲಿ ಸಂಭವಿಸಿದ ಕಾರು ಅಪಘಾತ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪುತ್ರ ಅಮೀನ್‌ಗೆ ಗಾಯ
- ರೆಹಮಾನ್ ಪುತ್ರ ಅಮೀನ್ ಕಾರು ಜಖಂ. ಆಸ್ಪತ್ರೆಗೆ ದಾಖಲು
ಚೆನ್ನೈ: ಸೋಮವಾರ (ಆ.10) ಗಿಂಡಿಯಲ್ಲಿರುವ ಕಾಠಿಪರಾ ಫ್ಲೈಓವರ್‌ನಲ್ಲಿ ಅಫಘಾತ ಸಂಭವಿಸಿದ್ದು, ಈ ಅಫಘಾತದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪುತ್ರ ಎ.ಆರ್. ಅಮೀನ್
( A R Rehman son Ameen
) ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ವಿರುದ್ಧ ದಿಕ್ಕಿನಲ್ಲಿ ಬಂದತಹ ವಾಹನಕ್ಕೆ ಅಮೀನ್ ಅವರ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಆದರೆ, ಅದೃಷ್ಟವಶಾತ್ ರೆಹಮಾನ್ ಪುತ್ರ ಅಮೀನ್‌ಗೆ ಚಿಕ್ಕ-ಪುಟ್ಟ ಗಾಯಗಳಾಗಿದ್ದು, ಪ್ರಾಣಕ್ಕೇನು ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ.
ಆಸ್ಪತ್ರೆಗೆ ದಾಖಲು; ಚಿಂತೆ ಇಲ್ಲ!
ಈ ಘಟನೆಯು ಕಾಠಿಪರಾ ಫ್ಲೈಓವರ್‌ನಲ್ಲಿ ನಡೆದಿದ್ದು, ಎದುರಿಗೆ ಬಂದ ವ್ಯಗನ್-ಆರ್ ಕಾರಿಗೆ ಅಮೀನ್ ಅವರ ಕಾರು ಡಿಕ್ಕಿಯಾಗಿದೆ. ಸದ್ಯ ಎರಡು ಕಾರಿನಲ್ಲಿದ್ದ ಜನರನ್ನು ಕಲೈನಾರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.
ಎರಡೂ ಪಕ್ಷದವರಿಗೆ ಹೆಚ್ಚಿನ ಗಾಯಗಳೇನು ಆಗದ ಹಿನ್ನಲೆ, ಆಸ್ಪತ್ರೆಯಿಂದ ಡಿಸಾರ್ಜ್ ಮಾಡಲಾಗಿದೆ ಎಂದು ತಿಳಿದಿದೆ. ಸದ್ಯ ಉಭಯ ವಾಹನ ಮಾಲೀಕರು ಅಡ್ಯಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಅದರೆ ಈ ಘಟನೆ ಬಗ್ಗೆ ಅಮೀನ್ ಆಗಲೀ ಅಥವಾ ಎ.ಆರ್. ರೆಹಮಾನ್ನಿಂದ ಇಲ್ಲಿವರೆಗೆ ಯಾವುದೇ ಹೇಳಿಕೆಗಳು ಹೊರಬಂದಿಲ್ಲ,
(ಏಜನ್ಸೀಸ್).