ಬುರ್ಖಾಧರಿಸಿ ಬಂದ ಮಹಿಳೆಯಿಂದ ಕಳ್ಳತನ 
ದೇಶ

ಗನ್ ತೋರಿಸಿ ಚಿನ್ನ ದೋಚಿದ ಬುರ್ಖಾಧಾರಿ ಮಹಿಳೆ: ಅಯೋಧ್ಯೆಯ ದರೋಡೆ ವಿಡಿಯೋ ಫುಲ್​ ವೈರಲ್​!Burqa Robbery

ಪ್ರಮುಖ ಮುಖ್ಯಾಂಶಗಳು

  • ಬುರ್ಖಾಧರಿಸಿ ಬಂದ ಮಹಿಳೆಯಿಂದ ಕಳ್ಳತನ
  • ಜುವೆಲ್ಲರಿ ಅಂಗಡಿಯವನಿಗೆ ಗನ್​ ತೋರಿಸಿ ದರೋಡೆ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​
ಉತ್ತರ ಪ್ರದೇಶ: ಜುವೆಲ್ಲರಿ ಅಂಗಡಿಗೆ ಬುರ್ಖಾ ಧರಿಸಿ (Burqa Robbery) ಬಂದೂಕುಧಾರಿಯಾಗಿ ಎಂಟ್ರಿ ಕೊಟ್ಟ ಮಹಿಳೆ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ವರದಿಯಾಗಿದೆ. ಈ ಘಟನೆಯು ಗುರುವಾರ (ಏ.2) ಮಧ್ಯಾಹ್ನ ಸುಮಾರು 2 ಗಂಟೆಗೆ ನಡೆದಿದ್ದು, ಈ ದರೋಡೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಬುರ್ಖಾ ಧರಿಸಿ ಅಂಗಡಿಯನ್ನು ಪ್ರವೇಶಿಸಿದ ಮಹಿಳೆ ಕೌಂಟರ್​​ ಮೇಲೆ ಇರಿಸಿದ್ದ ಒಂದು ಚಿನ್ನದ ನೆಕ್​ಲೆಸ್​ನ್ನು ಕೈಯಿಂದ ಬಾಚಿಕೊಂಡಿದ್ದಾಳೆ. ಮಾಲೀಕ ಏರು ಧ್ವನಿಯಲ್ಲಿ ಮಾತನಾಡಿದ ಕೂಡಲೇ ಬುರ್ಖಾದಲ್ಲಿ ಅಡಗಿಸಿಟ್ಟ ಬಂದೂಕನ್ನು ಮಾಲೀಕನಿಗೆ ತೋರಿಸಿ ಅಲ್ಲಿಂದ ಓಟಕಿತ್ತಿದ್ದಾಳೆ.
ಪೊಲೀಸರಲ್ಲಿ ದೂರು ದಾಖಲು
ಈ ದರೋಡೆ ನಂತರ ಅಂಗಡಿ ಮಾಲೀಕ, ಹತ್ತಿರದ ಪೊಲೀಸ್​ ಠಾಣೆಯಾದ ರುಡೌಲಿ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾನೆ. ದೂರಿನ ಪ್ರಕಾರ, ಕದ್ದೊಯ್ದ ನೆಕ್​ಲೆಸ್​ ಸುಮಾರು 26 ಗ್ರಾಂ ಇದ್ದು, ಇದರ ಬೆಲೆ 3,80,000 ಎಂದು ನಮೂದಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಫೂಟೆಜ್​ ಮೂಲಕ ಕಳ್ಳಿಯನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ಕಳ್ಳತನದ ವಿಡಿಯೋ ಸೋಶಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ಗಳ ಮಳೆಯನ್ನು ಸುರಿಸಿದ್ದಾರೆ. ನೋಡಿ ಬುರ್ಖಾ ಧರಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಎಂದು ಒಬ್ಬರು ತಮಾಷೆ ಮಾಡಿದರೆ, ಮೊದಲು ಈ ಬುರ್ಖಾವನ್ನು ಬ್ಯಾನ್​ ಮಾಡಿ ಎಂದು ಇನ್ನೊಬ್ಬರು ಆಕ್ರೋಶ ಹೊರಹಾಕಿದ್ದಾರೆ,(ಏಜನ್ಸೀಸ್​).