ಸೂರತ್ನ ಬಂಗಲೆಯ ಸ್ಟೀಲ್ ಗ್ರಿಲ್ನಲ್ಲಿ ಸಿಕ್ಕಿಬಿದ್ದ ವ್ಯಕ್ತಿ
- ಬೀಗ ಹಾಕಿದ್ದ ಬಂಗಲೆಗೆ ನುಗ್ಗಲು ಯತ್ನಿಸಿದ ವ್ಯಕ್ತಿ
- ಮನೆಯ ಸ್ಟೀಲ್ ಗ್ರಿಲ್ನಲ್ಲಿ ಸಿಕ್ಕಿಬಿದ್ದು ಒದ್ದಾಡಿದ ಕಳ್ಳ?
- ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
Person trapped in the grill: ಸೂರತ್ನಲ್ಲಿ ಬೀಗ ಹಾಕಿದ್ದ ಬಂಗಲೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬ ಸ್ಟೀಲ್ ಗ್ರಿಲ್ನಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಸ್ಥಳೀಯರು ಆತನಿಗೆ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.
ಕಪೋದ್ರಾ ಪೊಲೀಸರ ಪ್ರಕಾರ, ನಾನಾ ವರಾಚ್ಛಾದ ರಾಜಾರಾಮ್ ನಗರ ಸೊಸೈಟಿಯ ಬಂಗಲೆಯಲ್ಲಿ ಈ ಘಟನೆ ಸುಮಾರು 15 ದಿನಗಳ ಹಿಂದೆ ನಡೆದಿದೆ. ಆದರೆ, ಇದರ ವಿಡಿಯೋ ಎರಡು-ಮೂರು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಟೀಲ್ ಗ್ರಿಲ್ನಲ್ಲಿ ಸಿಕ್ಕಿಬಿದ್ದು ವ್ಯಕ್ತಿ ಪರದಾಟ
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸ್ಟೀಲ್ ಗ್ರಿಲ್ನಲ್ಲಿ ಸಿಕ್ಕಿಬಿದ್ದು ಹೊರಬರಲು ಪರದಾಡುತ್ತಿರುವುದು ಕಾಣಿಸಿದೆ. ಸುತ್ತ ಸೇರಿದ್ದ ಕೆಲವರು ಆತನಿಗೆ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ. ಆತ ಕಳ್ಳತನದ ಉದ್ದೇಶದಿಂದಲೇ ಬಂಗಲೆಗೆ ನುಗ್ಗಿದ್ದನಾ ಎಂಬುದು ಇನ್ನೂ ಖಚಿತವಾಗಿಲ್ಲ. ವ್ಯಕ್ತಿಯ ಗುರುತು ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಗಲೆಯ ಮಾಲೀಕ ಕಿಶೋರ್ಭಾಯಿ ಅವರನ್ನೂ ಪೊಲೀಸರು ವಿಚಾರಿಸಿದ್ದು, ಮನೆಯಿಂದ ಏನೂ ಕಳುವಾಗಿಲ್ಲ ಎಂದು ತಿಳಿಸಿದ್ದಾರೆ. ಬೀಗ ಅಥವಾ ಬಾಗಿಲು ಮುರಿದಿರುವ ಗುರುತು ಕೂಡ ಕಂಡುಬಂದಿಲ್ಲ. ಹೀಗಾಗಿ ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. (ಏಜೆನ್ಸೀಸ್)