ಪಶ್ಚಿಮ ಬಂಗಾಳ: ಜಾರ್ಖಂಡನ ತಂತಾನಗರದಿಂದ ಪಶ್ಚಿಮ ಬಂಗಾಳದ ಹೌರಾಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 1.40 ಕೋಟಿ ಹಣವನ್ನು ಮಿಡ್ನಾಪುರದ ಖರಗ್‌ಪುರ, ರೈಲ್ವೆ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಮಾಹಿತಿ ಪ್ರಕಾರ, ರಾಹುಲ್ ಸೋನಿ ಎಂಬ ಪ್ರಯಾಣಿಕ, ಜಾರ್ಖಂಡನ ತಂತಾನಗರದಿಂದ, ಜನ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಮೂಲಕ ಪಶ್ಚಿಮ ಬಂಗಾಳದ ಹೌರಾ ಪಟ್ಟಣಕ್ಕೆ ಪ್ರಯಾಣ ಬೆಳೆಸಿದ್ದ. ರೈಲು ಖರಗ್‌ಪುರ ನಿಲ್ದಾಣವನ್ನು ತಲುಪಿದಾಗ, ಎಂದಿನಂತೆ ರೈಲ್ವೆ ಪೊಲೀಸರು ಗಸ್ತನ್ನು ಆರಂಭಿದ್ದಾರೆ.
ಆ ಸಮಯದಲ್ಲಿ ಈ, ರಾಹುಲ್ ಸೋನಿಯ ವರ್ತನೆ ಹಾಗೂ ಹಾವಭಾವದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಇವನ ಮೇಲೆ ಅನುಮಾನ ವ್ಯಕ್ತವಾಗಿದೆ. ನಂತರ ರೈಲ್ವೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಇತನು ಸರಿಯಾದ ಉತ್ತರಿಸಿದೇ, ಗಾಬರಿಯಾಗಿದ್ದನೆ. ನಂತರ ಇವನ ಬ್ಯಾಗ್ಅನ್ನು ಪರೀಕ್ಷಿಸಿದಾಗ ಅದರಲ್ಲಿ 500 ರ ಮುಖಬೆಲೆಯ ಕಂತೆ-ಕಂತೆ ನೋಟುಗಳು ಪತ್ತೆಯಾಗಿವೆ.
ಇನ್ನೂ ಈ ಘಟನೆ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೆಯಾಗುತ್ತಿದ್ದಂತೆ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದೆ. ರೈಲ್ವೆ ಪೊಲೀಸರು ಹೇಳುವಂತೆ, ಈ ರಾಹುಲ್ ಸೋನಿ ಬ್ಯಾಗ್ನಿಂದ ಒಟ್ಟು 500 ರ ನೋಟುಗಳ 280 ಬಂಡಲ್ಗಳು ಪತ್ತೆಯಾಗಿದೆ. ಹಣದ ಮೂಲದ ಬಗ್ಗೆ ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡದ ಹಿನ್ನಲೆ ರೈಲ್ವೆ ಪೊಲೀಸರು ಆದಾಯ ತೆರಿಗೆ (IT) ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ರಾಹುಲ್ ಸೋನಿ ಮೇಲೆ ದೂರನ್ನು ದಾಖಲಿಸಿಕೊಂಡಿದ್ದಾಗಿ ಹೇಳಿದ್ದಾರೆ. ರೈಲ್ವೆ ಪೊಲೀಸರು, ಇತನ ಬ್ಯಾಗ್ನಿಂದ ಕಂತೆ-ಕಂತೆ ನೋಟುಗಳನ್ನು ಪ್ಲಾಟ್ಫಾರ್ಮ್ನಲ್ಲಿಯೇ ಚೆಲ್ಲಿಕೊಂಡು ಲೆಕ್ಕ ಹಾಕುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾ ಟ್ರೆಂಡ್ ಆಗಿ ಬದಲಾಗಿದೆ.
ಇನ್ನು ಹಣದ ಕಂತೆಯನ್ನು ಲೆಕ್ಕ ಹಾಕಿರುವ ರೈಲ್ವೆ ಪೊಲೀಸರು ಇದರಲ್ಲಿ ಒಟ್ಟು 1.40 ಕೋಟಿ ರೂ. ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ತಾವು ವಶಕ್ಕೆ ಪಡೆದಿದ್ದ, ರಾಹುಲ್ ಸೋನಿ ಹಾಗೂ ಆತನ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಿದ್ದಾಗಿ ತಿಳಿದುಬಂದಿದೆ. ಇನ್ನು ಈ ರಾಹುಲ್ ಸೋನಿ ಯಾರು? ಇವನ ಬಳಿ ಇಷ್ಟು ಹಣ ಹೇಗೆ ಬಂದಿತು? ಇದನ್ನು ಎಲ್ಲಿಗೆ? ಯಾರಿಗೆ ನೀಡಲು ಹೋಗುತ್ತಿದ್ದ? ಅವರಿಗೆ ಈ ಹಣ ಏಕೆ ಬೇಕಿತ್ತು? ಎಂಬೆಲ್ಲಾ ಪ್ರಶ್ನೆಗಳಿಗೆ ತನಿಖೆ ನಂತರವೇ ಉತ್ತರ ದೊರೆಯಬೇಕಿದೆ, (ಏಜೆನ್ಸೀಸ್).