ತಿರುವನಂತಪುರಂ: ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (CMRL) ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬಸ್ಥರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅವರ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಸೋಮವಾರ(ಅ. 26) ಪಿಣರಾಯಿ ವಿಜಯನ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ದ್ವಿಸದಸ್ಯ ಪೀಠವು, ವಿಜಯನ್, ಅವರ ಪುತ್ರಿ ವೀಣಾ ಟಿ ಹಾಗೂ ಅಳಿಯ ಸಿಪಿಎಂ ಶಾಸಕ ಪಿ.ಎ. ಮೊಹಮ್ಮದ್ ರಯಾನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಎಫ್ಐಆರ್ಗೆ ತಡೆ ನೀಡಿ ಆದೇಶ ಹೊರಡಿಸಿದೆ.
ಪ್ರಕರಣದ ಬಗ್ಗೆ ವಿವರವಾದ ಪರಿಶೀಲನೆ ಅಗತ್ಯವಾಗಿದೆ ಎಂದು ಹೇಳಿ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಅಂತಿಮ ತೀರ್ಪು ಬರುವವರೆಗೂ ವಿಜಿಲೆನ್ಸ್ ಇಲಾಖೆ ದಾಖಲಿಸಿದ್ದ ಎಫ್ಐಆರ್ಗೆ ತಡೆ ನೀಡಿತು. ಮತ್ತು ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.
ಅಕ್ಟೋಬರ್ 09ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತಕ್ಷಣ ಎಫ್ಐಆರ್ ದಾಖಲಿಸುವಂತೆ ರಾಜ್ಯ ಹೈಕೋರ್ಟ್ನ ಏಕಸದಸ್ಯ ಪೀಠವು, ವಿಜಿಲೆನ್ಸ್ ಇಲಾಖೆಗೆ ನಿರ್ದೇಶನ ನೀಡಿತ್ತು. ಅದರ ಪ್ರಕಾರ ರಾಜ್ಯ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದರು.
ಐಟಿ ಸಲಹಾ ಸೇವೆಗಳ ಸೋಗಿನಲ್ಲಿ CMRL ವೀಣಾ ವಿಜಯನ್ ಅವರ ಎಕ್ಸಲಾಜಿಕ್ ಸೊಲ್ಯೂಷನ್ಸ್ಗೆ 2.78 ಕೋಟಿ ರೂಪಾಯಿಗಳ ಅಕ್ರಮ ಪಾವತಿಗಳನ್ನು ಮಾಡಿದೆ ಎಂದು ಇಡಿ ಆರೋಪಿಸಿ, ರಾಜ್ಯ ವಿಜಿಲೆನ್ಸ್ ಇಲಾಖೆಗೆ ಪತ್ರ ಬರೆದಿತ್ತು (ಏಜೆನ್ಸೀಸ್).