ನೃತ್ಯ ಮಾಡುತ್ತಿರುವುದು 
ದೇಶ

ಬಿಜೆಪಿಯ ಕಂಗನಾ, ಟಿಎಂಸಿಯ ಮಹುವಾ ಮೊಯಿತ್ರಾ, ಎನ್​ಸಿಪಿಯ ಸುಪ್ರಿಯಾ ಸುಳೆ ಒಟ್ಟಿಗೆ ಡ್ಯಾನ್ಸ್; ಅಬ್ಬಬ್ಬಾ ಇಲ್ಲಿ ನೋಡಿ | Dance

ನವದೆಹಲಿ: ಬಿಜೆಪಿ ಸಂಸದೆ ಕಂಗನಾ ರನೌತ್, ಟಿಎಂಸಿ ಫೈರ್ ಬ್ರಾಂಡ್ ಮಹುವಾ ಮೊಯಿತ್ರಾ ಹಾಗೂ ಎನ್​ಸಿಪಿ ನಾಯಕಿ ಸುಪ್ರಿಯಾ ಸುಳೆ ಮದುವೆಯೊಂದರಲ್ಲಿ ಒಟ್ಟಿ ಡ್ಯಾನ್ಸ್(Dance) ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಕೈಗಾರಿಕೋದ್ಯಮಿ ಮತ್ತು ರಾಜಕಾರಣಿ ನವೀನ್ ಜಿಂದಾಲ್ ಅವರ ಮಗಳ ವಿವಾಹ ಸಂಭ್ರಮದಲ್ಲಿ ಬಿಜೆಪಿ ಸಂಸದೆ ಕಂಗನಾ ರನೌತ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮತ್ತು ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ನೃತ್ಯ ಮಾಡಿದ್ದಾರೆ.
ಈ ಮೂವರು 'ಓಂ ಶಾಂತಿ ಓಂ' ಚಿತ್ರದ ಜನಪ್ರಿಯ ಬಾಲಿವುಡ್ ಹಾಡಿಗೆ ನೃತ್ಯ ಪ್ರದರ್ಶನ ನೀಡಿದ್ದು, ಪ್ರದರ್ಶನದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ವಾರದ ಆರಂಭದಲ್ಲಿ ಮೂವರು ನೃತ್ಯ ಅಭ್ಯಾಸ ಮಾಡುವ ಫೋಟೋಗಳನ್ನು ಕಂಗನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಸಹ ಸಂಸದರೊಂದಿಗೆ ಸಿನಿಮೀಯ ಕ್ಷಣಗಳು ಹ ಹ.ನವೀನ್ ಜಿಂದಾಲ್ ಅವರ ಮಗಳ ಮದುವೆ ಸಂಗೀತಕ್ಕಾಗಿ ಪೂರ್ವಾಭ್ಯಾಸ ಮಾಡುತ್ತಿದ್ದೇನೆ ಎಂದು ಕ್ಯಾಪ್ಷನ್ ನೀಡಿದ್ದರು (ಏಜೆನ್ಸೀಸ್).