ದೇಶ

ರಾಜ್ಯಸಭಾ ಟಿಕೆಟ್ ನಿರಾಕರಣೆ ಬೆನ್ನಲ್ಲೇ ಎಸ್​ಪಿ ಸೇರಿದ ಬಿಜೆಪಿ ನಾಯಕ ಧರ್ಮೇಂದ್ರ ಕಶ್ಯಪ್ | Dharmendra Kashyap

ಜನಸಂಖ್ಯೆ ದೃಷ್ಟಿಯಲ್ಲಿ ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯಲ್ಲಿ ನಡೆಯಲಿದ್ದು, ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸಿನಿಂದ ಸಾಗಿದೆ. ಇತ್ತೀಚೆಗೆ ರಾಜ್ಯಸಭೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಬಿಜೆಪಿ ಹಿರಿಯ ನಾಯಕ ಧರ್ಮೇಂದ್ರ ಕಶ್ಯಪ್ ಅವರು ಇಂದು(ಅ. 27) ಪಕ್ಷ ಬಿಟ್ಟು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಲಖನೌ: ಜನಸಂಖ್ಯೆ ದೃಷ್ಟಿಯಲ್ಲಿ ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯಲ್ಲಿ ನಡೆಯಲಿದ್ದು, ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸಿನಿಂದ ಸಾಗಿದೆ. ಇತ್ತೀಚೆಗೆ ರಾಜ್ಯಸಭೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಬಿಜೆಪಿ ಹಿರಿಯ ನಾಯಕ ಧರ್ಮೇಂದ್ರ ಕಶ್ಯಪ್ ಅವರು ಇಂದು(ಅ. 27) ಪಕ್ಷ ಬಿಟ್ಟು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಲಖನೌದ ಸಮಾಜವಾದಿ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಓಬಿಸಿ ನಾಯಕರಾದ ಧರ್ಮೇಂದ್ರ ಕಶ್ಯಪ್ ಅವರು ಮಾಜಿ ಸಿಎಂ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಎಸ್​ಪಿ ಸೇರ್ಪಡೆಯಾಗಿದ್ದಾರೆ.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿರುವ ಕಶ್ಯಪ್, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಜನರು ಬೇಸತ್ತಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಅವರ ಜಾತಿಯ ಜನರ ಮೇಲೆ ಓಡಲಿಲ್ಲ, ಬಡವರನ್ನು ಗುರಿಯಾಗಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಳಿಕ ಮಾತನಾಡಿರುವ ಅಖಿಲೇಶ್ ಯಾದವ್, ಧರ್ಮೇಂದ್ರ ಕಶ್ಯಪ್ ಬಿಜೆಪಿಯನ್ನು ತೊರೆದ ಬಳಿಕ ಅವರು ನಮ್ಮ ಪಕ್ಷ ಸೇರಬೇಕೆಂದು ಬಯಸಿದ್ದೆವು. ಅವರ ಆಗಮನವು ಉತ್ತರ ಪ್ರದೇಶದಲ್ಲಿ ಎಸ್​ಪಿ ಬಲಪಡುತ್ತದೆ. ಕಶ್ಯಪ್ ಅವರಿಗೆ ರಾಜಕೀಯವಾಗಿ ಗೌರವ ಮತ್ತು ಸ್ಥಾನಮಾನ ನೀಡಲಾಗುವುದು ಎಂದಿದ್ದಾರೆ.

ಮಾಜಿ ಸಚಿವರಾಗಿರುವ ಕಶ್ಯಪ್ ಅವರು ಬಿಜೆಪಿಯಲ್ಲಿ ರಾಜ್ಯಸಭಾ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯೂ ಬರೇಲಿ ಜಿಲ್ಲೆಯಿಂದ ರಾಜ್ಯ ಸಚಿವ ಧರಂಪಾಲ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಮತ್ತು ಜಾರ್ಖಂಡ್ ಮಾಜಿ ಗವರ್ನರ್ ಸಂತೋಷ್ ಗಂಗ್ವಾರ್ ಅವರ ಪುತ್ರಿ ಶ್ರುತಿ ಗಂಗ್ವಾರ್ ಅವರನ್ನು ಕಣಕ್ಕೀಳಿಸಿದೆ.

ಪಟ್ಟಿ ಘೋಷಣೆಯಾದ ಬಳಿಕ ಅ. 07ರಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದ ಧರ್ಮೇಂದ್ರ ಅವರು, ಸಮುದ್ರ ತೀರದ ಸೂರ್ಯಾಸ್ತದ ಚಿತ್ರವನ್ನು ಹಾಕಿ ಅದಕ್ಕೆ ಟಾಟಾ ಬೈ-ಬೈ ಎಂದು ಕ್ಯಾಪ್ಷನ್ ಬರೆದಿದ್ದರು. ಇದು ಅವರು ಎಸ್​ಪಿ ಸೇರ್ಪಡೆಯ ಬಗ್ಗೆ ಊಹಾಪೋಹ ಎದ್ದಿತ್ತು. ಅದರಂತೆ ಇಂದು ಸೇರ್ಪಡೆಗೊಂಡಿದ್ದಾರೆ.

ಕಶ್ಯಪ್ ಅವರನ್ನು ರೋಹಿಲ್‌ಖಂಡ್ (ವಾಯುವ್ಯ ಉತ್ತರ ಪ್ರದೇಶ)ದ ಕಶ್ಯಪ್ ಸಮುದಾಯದ ಪ್ರಮುಖ ರಾಜಕೀಯ ಮುಖಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಮೇ 2013ರಲ್ಲಿ ಎಸ್‌ಪಿ ತೊರೆದು ಬಿಜೆಪಿ ಸೇರಿದ್ದರು. 2014 ಮತ್ತು 2019 ರಲ್ಲಿ ಅಯೋನ್ಲಾದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮತ್ತು 2024ರ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದಾರೆ (ಏಜೆನ್ಸೀಸ್).