ಪ್ರಿಯಕರನ ಜೊತೆ ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ಅತ್ತೆ AI Image WEB
ದೇಶ

ಪ್ರಿಯಕರನ ಜೊತೆ ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ಅತ್ತೆ ! ಅತ್ತೆಯನ್ನೇ ಹತ್ಯೆಗೈದ ಸೊಸೆ | Bihar crime

ಗುಟ್ಟು ರಟ್ಟಾಗುವ ಭಯದಲ್ಲಿ ಸೊಸೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತವಳಂತಿದ್ದ ಅತ್ತೆಯನ್ನೇ ಮುಗಿಸಿರುವ ಘೋರ ಕೃತ್ಯ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಮ್ಮ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡಿದ್ದ 69 ವರ್ಷದ ರಾಮ್ಲಾ ದೇವಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸದ್ಯ ಸೊಸೆ ಗುಡ್ಡಿ ಕುಮಾರಿ ಮತ್ತು ಪ್ರಿಯಕರ ರಿಷಿ ಕುಮಾರ್‌ನನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.Bihar crime

ಪಾಟ್ನಾ: ಗುಟ್ಟು ರಟ್ಟಾಗುವ ಭಯದಲ್ಲಿ ಸೊಸೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತವಳಂತಿದ್ದ ಅತ್ತೆಯನ್ನೇ ಮುಗಿಸಿರುವ ಘೋರ ಕೃತ್ಯ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಮ್ಮ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡಿದ್ದ 69 ವರ್ಷದ ರಾಮ್ಲಾ ದೇವಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸದ್ಯ ಸೊಸೆ ಗುಡ್ಡಿ ಕುಮಾರಿ ಮತ್ತು ಪ್ರಿಯಕರ ರಿಷಿ ಕುಮಾರ್‌ನನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಮಧ್ಯರಾತ್ರಿ ಕೋಣೆಗೆ ಬಂದ ಅತ್ತೆಗೆ ಕಾದಿತ್ತು ಆಪತ್ತು

ನವೆಂಬರ್ 25ರಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಟಿಕಾಪಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ನಯಾ ನಂದಗೋಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ತನಿಖೆಯ ಪ್ರಕಾರ, ಗುಡ್ಡಿ ಕುಮಾರಿ ಮತ್ತು ರಿಷಿ ಕುಮಾರ್ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎನ್ನಲಾಗಿದೆ.

ಘಟನೆಯ ರಾತ್ರಿ ರಾಮ್ಲಾ ದೇವಿ ಕೋಣೆಯೊಳಗೆ ಪ್ರವೇಶಿಸಿದಾಗ ಸೊಸೆ ಗುಡ್ಡಿ ಮತ್ತು ರಿಷಿ ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡಿದ್ದಾರೆ. ತಮ್ಮ ಸಂಬಂಧ ಬಯಲಾಗುವ ಭೀತಿಯಿಂದ ಇಬ್ಬರೂ ಸೇರಿ ಅತ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಿದಿರಿನ ಬೇರಿನಿಂದ ತಯಾರಿಸಿದ ಭಾರವಾದ ಮರದ ದೊಣ್ಣೆಯಂತಹ ಆಯುಧದಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ರಾಮ್ಲಾ ದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆಯ ಹೊಣೆ ನೆರೆಮನೆಯವರ ಮೇಲೆ ಹಾಕಲು ಯತ್ನ

ಹತ್ಯೆಯ ಬಳಿಕ ಆರೋಪಿಗಳು ಪೊಲೀಸರ ದಿಕ್ಕು ತಪ್ಪಿಸಲು ಮತ್ತೊಂದು ತಂತ್ರ ರೂಪಿಸಿದ್ದರು ಎನ್ನಲಾಗಿದೆ. ಹಳೆಯ ಭೂ ವಿವಾದವನ್ನು ಮುಂದಿಟ್ಟುಕೊಂಡು ನೆರೆಮನೆಯ ನಿತೀಶ್ ಕುಮಾರ್ ಮತ್ತು ಆತನ ತಾಯಿಯ ಮೇಲೆ ಕೊಲೆಯ ಆರೋಪ ಹೊರಿಸಲಾಗಿತ್ತು. ಮೃತ ಮಹಿಳೆಯ ಮಗ ಅಬೋಧ್ ಪಾಸ್ವಾನ್ ಕೂಡ ನೆರೆಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ. ದೂರಿನ ಆಧಾರದ ಮೇಲೆ ಪೊಲೀಸರು ಆರಂಭದಲ್ಲಿ ಅವರನ್ನೇ ಬಂಧಿಸಿದ್ದರು.

ವಿಶೇಷ ತನಿಖಾ ತಂಡದಿಂದ ಬಯಲಾಯ್ತು ಸತ್ಯ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೂರ್ಣಿಯಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೌರ್ಯ ಸುಮನ್ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದರು. ತನಿಖೆ ವೇಳೆ ಗುಡ್ಡಿ ಮತ್ತು ರಿಷಿ ನಡುವಿನ ಸಂಬಂಧದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಕೃತ್ಯಕ್ಕೆ ಬಳಸಿದ ಮುಂಗ್ರಾ ಎಂಬ ಭಾರವಾದ ಮರದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ.

ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಆರಂಭದಲ್ಲಿ ಅನುಮಾನಕ್ಕೆ ಗುರಿಯಾಗಿದ್ದ ನೆರೆಮನೆಯವರ ಪಾತ್ರವನ್ನೂ ಪೊಲೀಸರು ಪರಿಶೀಲಿಸಿದ್ದಾರೆ.