ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆದ ಈ ಲವ್ ಫೈಟ್ ವಿಡಿಯೋ ವೈರಲ್​ 
ದೇಶ

ಬಾಯ್‌ಫ್ರೆಂಡ್ ವಿಚಾರಕ್ಕೆ ಬೆಸ್ಟ್ ಫ್ರೆಂಡ್ಸ್ ಜಗಳ: ಕಾಲೇಜ್​ ಕ್ಯಾಪಂಸ್​ನಲ್ಲಿ ಹೊಡೆದಾಡಿಕೊಂಡ ಹುಡುಗಿಯರು; ವಿಡಿಯೋ ವೈರಲ್​! Viral Video

ಪ್ರಮುಖ ಮುಖ್ಯಾಂಶಗಳು

  • ನೋಯ್ಡಾದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯದಲ್ಲಿ ಹೈಡ್ರಾಮಾ
  • ತನ್ನ ಬಾಯ್‌ಫ್ರೆಂಡ್‌ಗೆ ಲೈನ್ ಹೊಡೆದಿದ್ದಕ್ಕೆ ಬೆಸ್ಟ್ ಫ್ರೆಂಡ್ ಅನ್ನೇ ಅಟ್ಟಾಡಿಸಿ ಹೊಡೆದ ಯುವತಿ
  • ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆದ ಈ ಲವ್ ಫೈಟ್ ವಿಡಿಯೋ ವೈರಲ್​
  • ನೆಟ್ಟಿಗರಿಂದ ತೀವ್ರ ತರಾಟೆ
ನೋಯ್ಡಾ: ಭಾರತದಲ್ಲಿ ಇಂಟರ್ನೆಟ್​ ಕ್ರಾಂತಿಯಾದ ದಿನದಿಂದ ಒಂದಲ್ಲ ಒಂದು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಅಗುತ್ತಿರುತ್ತವೆ. ಈದೀಗ ನೋಡ್ಡಾದ ಖ್ಯಾತ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಘಟನೆಯ ವಿಡಿಯೋ ಈಗ ಸೋಶಿಯಲ್​ ಮೀಡಿಯಾನಲ್ಲಿ ವೈರಲ್​ (Viral Video) ಆಗುತ್ತಿದೆ.
ಕೆಲ ತಿಂಗಳಿನ ಹಿಂದೆ ದೆಹಲಿಯಲ್ಲಿ ನಡೆದಿದ್ದ ಇಂಡಿಯಾ ಇಂಪಾಕ್ಟ್​ ಎಐ ಸಮಿತ್​ನಲ್ಲಿ ಈ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಚೈನಾ ನಿರ್ಮಿತ ರೊಬೊವೊಂದನ್ನು ಪ್ರದರ್ಶಿಸಿ ತೀವ್ರ ಮುಖಭಂಗವನ್ನು ಅನುಭವಿಸಿತ್ತು.
ಈಗ ಈ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಪ್ರೇಮ ಪ್ರಸಂಗಕ್ಕೆ ಕುರಿತಾದ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೀಕ್ಷಣೆ ಪಡೆಯುತ್ತಿದೆ.

ಗೆಳತಿಯ ಬಾಯ್​ಫ್ರೆಂಡ್​ಗೆ ಲೈನ್​ ಹೊಡೆದ ಹುಡುಗಿ!

ವೈರಲ್​ ಆಗುತ್ತಿರುವ ವಿಡಿಯೋನಲ್ಲಿರುವ ಮಾಹಿತಿ ಪ್ರಕಾರ, ಈ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯದಲ್ಲಿ ಇಬ್ಬರು ಗೆಳತಿಯರು ವಿದ್ಯಾಭ್ಯಾಸ ಮಾಡುತ್ತಿದ್ದು, ಒಬ್ಬ ಗೆಳತಿ ಇನ್ನೊಬ್ಬಳ ಬಾಯ್​ಫ್ರೆಂಡ್​ನ ಮೇಲೆ ಆಸೆ ಪಟ್ಟಿರುವುದು ಈ ಜಗಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಕ್ಯಾಂಪಸ್​ನಲ್ಲೇ ಬಡಿದಾಡಿಕೊಂಡ ಬೆಸ್ಟ್​ಫ್ರೆಂಡ್ಸ್​!
ತನ್ನ ಬಾಯ್​ಫ್ರೆಂಡ್​​ ಮೇಲೆ ತನ್ನ ಗೆಳತಿ ಕಣ್ಣಾಕಿರುವುದು ತಿಳಿದ ನಂತರ, ಕೋಪ ತಡಿದುಕೊಳ್ಳದ ಇನ್ನೊಬ್ಬ ಗೆಳತಿ ತನ್ನ ಪ್ರಾಣ ಸ್ನೇಹಿತೆಯನ್ನು ಮನಸೋ ಇಚ್ಛೆ ತಳಿಸಿದ್ದಾಳೆ. ಯುನಿವರ್ಸಿಟಿ ಕ್ಯಾಂಪಸ್​ ಎನ್ನುವುದನ್ನು ಲೆಕ್ಕಿಸದೇ ಬಾಯಿಗೆ ಬಂದ ಹಾಗೆ ಬಯ್ಯುತ್ತಾ, ಕೈ-ಕೈ ಮೀಲಾಯಿಸಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್​ ಆಗುತ್ತಿವೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಶಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರ ಕಿವಿ, ಕಣ್ಣು ಮತ್ತು ಕೈ ಬೆರಳುಗಳು ಆಕ್ಟಿವ್​ ಆಗಿದೆ. ಆ ಹುಡುಗಿ ಮಾಡಿದ್ದು ಸರಿ ಇದೆ. ತನ್ನ ಹುಡುಗನ ಮೇಲೆ ಬೇರೆ ಹುಡುಗಿ ಆಸೆ ಪಟ್ಟರೆ ಯಾರು ತಾನೆ ಸಹಿಸಿಕೊಳ್ಳತ್ತಾರೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.
ಈ ವಿಶ್ವವಿದ್ಯಾಲಯದಲ್ಲಿಒ ವಿದ್ಯಾಭ್ಯಾಸದ ಹೊರತಾಗಿ ಬೇರೆಲ್ಲಾ ಕೆಲಸಗಳು ನಡೆಯುತ್ತವೆ ಎಂದು ಇನ್ನೊಬ್ಬರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಓದುವ ಸಮಯದಲ್ಲಿ ಸರಿಯಾಗಿ ಓದಿಕೊಳ್ಳಿ ಈ ಪ್ರೀತಿ-ಪ್ರೇಮ ಇದರಲ್ಲಿ ಬಿದ್ದರೆ ಮುಂದೆ ಊಟಕ್ಕೆ ಕೂಳಿರುವುದಿಲ್ಲ ಎಂದು ಮತ್ತೊಬ್ಬರು ಬುದ್ಧಿಮಾತನ್ನು ಹೇಳಿದ್ದಾರೆ,(ಏಜನ್ಸೀಸ್​).