Bengaluru Mumbai Vande Bharat
- ಬೆಂಗಳೂರು-ಮುಂಬೈ ನಡುವೆ ವಂದೇಭಾರತ್ ಸ್ಲೀಪರ್ ರೈಲಿಗೆ ಗ್ರೀನ್ ಸಿಗ್ನಲ್
- ಹೆಚ್ಚಾಗಿ ರಾತ್ರಿ ಸಮಯದಲ್ಲೇ ಎರಡು ರಾಜ್ಯಗಳ ನಡುವೆ ರೈಲು ಪ್ರಯಾಣಿಸಲಿದೆ
- ವಂದೇ ಭಾರತ್ ವೇಳಾಪಟ್ಟಿ, ಶುಲ್ಕ, ಎಲ್ಲೆಲ್ಲಿ ನಿಲುಗಡೆ ಇರಲಿದೆ ಎನ್ನುವ ಮಾಹಿತಿ ಶೀಘ್ರವೇ ಬಿಡುಗಡೆ
Vande Bharat sleeper train: ಬೆಂಗಳೂರು ಐಟಿ-ಬಿಟಿ ಕಂಪನಿಗಳಿಗಳಿಂದ ಕೂಡಿದ್ರೆ, ಮುಂಬೈ ಭಾರತದ ಆರ್ಥಿಕ ನಗರಿ. ಪ್ರತಿನಿತ್ಯ ಇಲ್ಲಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚೇ ಇರುತ್ತದೆ. ಹಲವರು ಸಾವಿರಾರು ಕನಸು ಹೊತ್ತು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಪ್ರಯಾಣಿಸುತ್ತಾರೆ. ಹೊಸ ಜೀವನ, ಕೆಲಸ ಕಂಡುಕೊಳ್ಳಲು ಆಶಿಸುತ್ತಾರೆ. ಆದ್ರೆ ಮುಂಬೈನಲ್ಲಿ ಕಿಕ್ಕಿರಿದು ಹತ್ತುವ ಜನರ ದಟ್ಟಣೆಯಿಂದಾಗಿ ಸಾವು ನೋವು ಸಂಭವಿಸಿದ್ದು ಇದೆ. ಸದ್ಯ ರೈಲು ಸಂಖ್ಯೆ ಹೆಚ್ಚಿಸಿ ಎನ್ನುವ ಪ್ರಯಾಣಿಕರ ಕರೆಗೆ ಭಾರತೀಯ ರೈಲ್ವೆ ಇಲಾಖೆ ಮಣಿದಿದೆ.
ಹೌದು,'ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್' ರೈಲು ಯೋಜನೆಗೆ ಅಧಿಕೃತವಾಗಿ ಅನುಮೋದನೆ ಸಿಕ್ಕಿದೆ, ಶೀಘ್ರದಲ್ಲೇ ಹಳಿ ಮೇಲೆ ಓಡಲು ಸಜ್ಜಾಗಿದೆ. ಈಗಾಗಲೇ ಇರುವ ವಂದೇಭಾರತ್ ರೈಲಿಗಿಂತ ವಿಭಿನ್ನವಾಗಿ ಸ್ಲೀಪರ್ ರೈಲನ್ನು ತಯಾರಿಸಲಾಗಿದೆ. ಇದು ದೀರ್ಘಕಾಲ ಪ್ರಯಾಣಕ್ಕೆ ಸರಿದೂಗುವಂತೆ ನಿರ್ಮಿಸಲಾಗಿದೆ. ಸೆಮಿ ಹೈಸ್ಪೀಡ್ ರೈಲು ಇದಾಗಿದೆ. ದೇಶದ ಪ್ರಮುಖ ಆರ್ಥಿಕ ನಗರಿಯಾದ ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
ರೈಲಿನ ಸಂಖ್ಯೆ ಹೆಚ್ಚಳಕ್ಕೆ ಸಿದ್ಧತೆ
ಬೆಂಗಳೂರು ಮತ್ತು ಮುಂಬೈನಲ್ಲಿ ನೆರೆ ರಾಜ್ಯಗಳಿಂದ ಬಂದಂತಹ ಪ್ರಯಾಣಿಕರು ಇಲ್ಲಿ ನೆಲೆಯೂರಿ ಹುದ್ದೆಯನ್ನು ಕಂಡುಕೊಂಡಿರುತ್ತಾರೆ. ಕೆಲಸ ಹರಸಿ ಇಲ್ಲಿಗೆ ಪ್ರಯಾಣಿಸುವವರ ಸಂಖ್ಯೆಯೂ ಅಧಿಕ. ಹೀಗಾಗಿ ಈ ಎರಡು ರಾಜ್ಯಗಳ ನಡುವಿನ ಪ್ರಯಾಣಕ್ಕೆ ವಂದೇ ಭಾರತ್ ರೈಲಿಗಾಗಿ ಹೆಚ್ಚೇ ಬೇಡಿಕೆ ಇತ್ತು. ಎರಡು ರಾಜ್ಯದ ನಡುವೆ ಪ್ರಯಾಣಿಸುವ ಈ ರೈಲುಗಳಿಗೆ ನಿಖರವಾದ ಸಮಯ ನಿಗದಿ ಪಡಿಸಿಲ್ಲ. ಆದರೆ, ಹೆಚ್ಚಾಗಿ ರಾತ್ರಿ ಸಮಯದಲ್ಲೇ ಪ್ರಯಾಣಿಸುತ್ತದೆ ಎನ್ನಲಾಗಿದೆ. ಏಕೆಂದರೆ ಪ್ರಯಾಣಿಕರು ರಾತ್ರಿಯಿಡೀ ರೈಲಿನಲ್ಲಿ ಪ್ರಯಾಣಿಸಿ ಮುಂಜಾನೆ ತಮ್ಮ ಗಮ್ಯ ಸ್ಥಾನಕ್ಕೆ ತಲುಪಬಹುದು ಎನ್ನುವುದು ಇದರ ಉದ್ದೇಶವಾಗಿದೆ.
ಹೇಗಿರಲಿದೆ ಸ್ಲೀಪರ್ ರೈಲಿನ ವ್ಯವಸ್ಥೆ?
ಸದ್ಯ ಸೇವೆ ನೀಡುತ್ತಿರುವ ವಂದೇ ಭಾರತ್ ರೈಲುಗಳಲ್ಲಿ ಕುಳಿತು ಪ್ರಯಾಣಿಸುವ ವಿನ್ಯಾಸದಲ್ಲಿದೆ. ಆದರೆ, ಮುಂಬೈ ಮತ್ತು ಬೆಂಗಳೂರು ನಡುವಣ ಪ್ರಯಾಣಿಸುವ ರೈಲು ಸೀಟುಗಳ ವಿನ್ಯಾಸ ಹೊಸ ರೀತಿಯಲ್ಲಿರುತ್ತದೆ. ರಾತ್ರಿ ಮಲಗಿ ಪ್ರಯಾಣಿಸಲು ಸುಸ್ಸಜ್ಜಿತ ಸ್ಲೀಪರ್ ಬರ್ತ್ ಇರಲಿದೆ. ಕಡಿಮೆ ಶಬ್ಧದ ಪ್ರಯಾಣ, ಆಧುನಿಕ ಶೌಚಾಲಯ, ಒಳಾಂಗಣ ವಿನ್ಯಾಸ, ಭದ್ರತೆ ಇರಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಶುಲ್ಕವೆಷ್ಟು ವೇಳಾಪಟ್ಟಿ ಹೇಗಿರಲಿದೆ?
ಮುಂಬೈನಿಂದ ಬೆಂಗಳೂರಿಗೆ ಯಾವ ಸಮಯದಲ್ಲಿ ವಂದೇಭಾರತ್ ರೈಲು ಪ್ರಯಾಣಿಸುತ್ತದೆ. ಬೆಂಗಳೂರಿನಿಂದ ಮುಂಬೈಗೆ ತಲುಪೋದು ಯಾವ ಸಮಯಕ್ಕೆ ಎನ್ನುವ ಪೂರ್ಣ ಪ್ರಮಾಣದ ವೇಳಾಪಟ್ಟಿ ಇನ್ನು ಬಿಡುಗಡೆಯಾಗಿಲ್ಲ. ಜೊತೆಗೆ ರೈಲು ಯಾವ್ಯಾವ ನಿಲ್ದಾಣದಲ್ಲಿ ನಿಲ್ಲಲಿದೆ. ದರ ಎಷ್ಟು ಎಂಬ ಮಾಹಿತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ.
ಭಾರತೀಯ ರೈಲ್ವೆಯ ಆಧುನೀಕರಣದ ಭಾಗವಾಗಿ ಈ ಸ್ಲೀಪರ್ ರೈಲುಗಳನ್ನು ಪರಿಚಯಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ದೇಶದ ಇತರೆ ಪ್ರಮುಖ ನಗರಗಳಿಗೂ ಇಂತಹ ಸೇವೆ ವಿಸ್ತರಣೆಯಾಗುವ ಸಾಧ್ಯತೆಯಿದೆ, (ಏಜೆನ್ಸೀಸ್)