ಅಯೋಧ್ಯೆಯ ಪವಿತ್ರ ಸರಯೂ ನದಿಯ ಗುಪ್ತಾರ್ ಘಾಟ್‌ನಲ್ಲಿ ಮಟನ್ ಹಾಗೂ ಬಿಯರ್ ಪಾರ್ಟಿ
- ಅಯೋಧ್ಯೆಯ ಪವಿತ್ರ ಸರಯೂ ನದಿಯ ಗುಪ್ತಾರ್ ಘಾಟ್‌ನಲ್ಲಿ ಮಟನ್ ಹಾಗೂ ಬಿಯರ್ ಪಾರ್ಟಿ
- ವಿಡಿಯೋ ಹಂಚಿಕೊಂಡಿದ್ದ ಮೂವರು ಯುವಕರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್
- ಮೂವರು ಯುವಕರ ಬಂಧನ; ಒಬ್ಬ ಪರಾರಿ
ಅಯೋಧ್ಯೆ: ಭಾರತದಲ್ಲಿರುವ ಪುಣ್ಯ ಕ್ಷೇತ್ರಗಳಲ್ಲಿ ಅಯೋಧ್ಯಾ ರಾಮ, ಮಥುರಾದ ಕೃಷ್ಣ ಹಾಗೂ ಕಾಶಿಯ ಮಹಾದೇವ (ಶಿವ) ನ ದೇವಸ್ಥಾನಗಳು ಪ್ರತಿಯೊಬ್ಬ ಹಿಂದೂವಿಗೆ ಧಾರ್ಮಿಕವಾಗಿ ಅತ್ಯಂತ ಪವಿತ್ರವಾದ ಸ್ಥಳಗಳಾಗಿವೆ.
ಆದರೆ, ಇತ್ತೀಚೆಗೆ ಅಯೋಧ್ಯಾ ರಾಮ ಮಂದರಿ ನೆಲೆ ನಿಂತಿರುವ ಸರಯೂ ನದಿಯಲ್ಲಿ ಯುವಕರ ಗುಂಪೊಂದು, ಮಟನ್ ಹಾಗೂ ಬಿಯರ್ ಕುಡಿಯುತ್ತಾ ಪಾರ್ಟಿ (Beer Party in Sarayu River) ಮಾಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.
ಈ ಘಟನೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾದ ಹಿನ್ನಲೆಯಲ್ಲಿ ವಿಡಿಯೋದಲ್ಲಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಮೂವರ ಬಂಧನ; ಒಬ್ಬ ಪರಾರಿ!
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಲವ್ಕುಶ ನಿಶಾದ್, ರಾಜಕುಮಾರ್ ನಿಶಾದ್ ಮತ್ತು ಜಿತೇಂದ್ರ ನಿಶಾದ್ ಎನ್ನುವವರು ಬಂಧಿತ ಆರೋಪಿಗಳಾಗಿದ್ದು, ಅಮರ್‌ಜೀತ್ ನಿಶಾದ್ ಎನ್ನುವವನು ತಲೆ ಮರೆಸಿಕೊಂಡಿದ್ದಾನೆಂದು ಹೇಳಿದ್ದಾರೆ.
ಮಾಹಿತಿ ಪ್ರಕಾರ, ಈ ನಾಲ್ವರು ಯುವಕರು ಸರಿಯೂ ನದಿಯ ಗುಪ್ತಾರ್ ಘಾಟ್‌ನಲ್ಲಿ ದೋಣಿಯೊಂದನ್ನು ಏರಿ ನದಿ ಮಧ್ಯದಲ್ಲಿ ಮಟನ್ ಬೇಯಿಸಿಕೊಂಡು, ತಣ್ಣನೆಯ ಬಿಯರ್ ಹಿರಿದ್ದಾರೆ. ಹಾಗೂ ಇದನ್ನು ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರ ಧಾರ್ಮಿಕ ಭಾವನೆಗೆ ಘಾಸಿ ಉಂಟಾದ ಹಿನ್ನಲೆಯಲ್ಲಿ ಈ ಯುವಕರ ಮೇಲೆ ದೂರು ದಾಖಲಾಗಿತ್ತು. ದೂರನ್ನು ಆಧರಿಸಿ ತನಿಖೆ ನಡೆಸಿದ ಉತ್ತರ ಪ್ರದೇಶ ಪೊಲೀಸರು ವಿಡಿಯೋನಲ್ಲಿದ್ದ ಮೂವರು ಯುವಕರನ್ನು ಬಂಧಿಸಿದ್ದು, ನಾಲ್ಕನೆಯವನಿಗಾಗಿ ಬಲೆ ಬೀಸಿದ್ದಾರೆಂದು ಹೇಳಲಾಗುತ್ತಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ಯುವಕರು ಬಿಯರ್ ಹೀರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿತ್ತು. ಏ..ಹುಚ್ಚರ ನೀವು ಪ್ರಭು ಶ್ರೀರಾಮನ ಆಸ್ಥಾನದಲ್ಲಿ ಬಿಯರ್ ಕುಡಿಯುತ್ತಿದ್ದಿರಿ, ನಿಮಗೆ ಖಂಡಿತ ತಕ್ಕ ಶಿಕ್ಷೆಯಾಗುತ್ತೆ ಎಂದು ಒಬ್ಬರು ಕಮೆಂಟ್ ಮಾಡಿದ್ದರು.
ಉತ್ತರ ಪ್ರದೇಶ ಪೊಲೀಸರು ನಿಮ್ಮನ್ನು ಖಂಡಿತ ಸುಮ್ಮನೆ ಬಿಡುವುದಿಲ್ಲ ಎಂದು ಇನ್ನೊಬ್ಬರು ಹೇಳಿದ್ದರು. ಆಯ್ತು ಬಿಯರ್ ಕುಡಿಯಿರಿ, ಮಟನ್ ತಿನ್ನಿರಿ; ಆದರೆ ಇದನ್ನು ಸೋಷಿಯಲ್ ಮೀಡಿಯಾನಲ್ಲಿ ಏಕೆ ಹಂಚಿಕೊಳ್ಳುತ್ತಿರಿ. ಮುಂದೆ ತೊಂದತೆಯಾದರೆ ಯಾರು ಸಹಾಯಕ್ಕೆ ಬರುತ್ತಾರೆ? ಎಂದು ಮತ್ತೊಬ್ಬರು ಅಂದು ಪ್ರಶ್ನಿಸಿದ್ದರು, (ಏಜನ್ಸೀಸ್).