ರಯಾನ್ ಡಸ್ಕ್ವೆಟ್, ಗೌತಮ್ ಗಂಭೀರ ಹಾಗೂ ಟಿ. ದಿಲೀಪ್  
ದೇಶ

ಗೌತಮ್ ಗಂಭೀರ್​ಗೆ ಬಿಗ್ ಶಾಕ್ ನೀಡಿದ ಬಿಸಿಸಿಐ; ಇಬ್ಬರು ಸಹಾಯಕ ಕೋಚ್​​ಗಳು ಔಟ್ | BCCI

BCCI: ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಕೋಚ್​ ಗೌತಮ್ ಗಂಭೀರ್​ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಶಾಕ್ ನೀಡಿದ್ದು, ಗಂಭೀರ ನೇಮಕ ಮಾಡಿಕೊಂಡಿದ್ದ ಓರ್ವ ಸಹಾಯಕ ಕೋಚ್ ಸೇರಿ ಇಬ್ಬರು ರಾಜೀನಾಮೆಯನ್ನು ಅಂಗೀಕರಿಸಿದೆ.
ಗೌತಮ್ ಗಂಭೀರ್ ನೇಮಕ ಮಾಡಿಕೊಂಡಿದ್ದ ರಯಾನ್ ಡಸ್ಕ್ವೆಟ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ಟಿ. ದಿಲೀಪ್ ಅವರ ಒಪ್ಪಂದವೂ ಕೊನೆಗೊಂಡಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ಕೈಯಲ್ಲಿ ವೈಟ್‌ವಾಶ್ ಆದ ಹಿನ್ನೆಲೆ ಬಿಸಿಸಿಐ ಇಬ್ಬರ ರಾಜೀನಾಮೆಯನ್ನು ಅಂಗೀಕರಿಸಿದೆ.
ಬಿಸಿಸಿಐ ಜೊತೆಗಿನ ಎರಡು ವರ್ಷಗಳ ಒಪ್ಪಂದ ಮುಗಿದ ಹಿನ್ನೆಲೆ ಸಹಾಯಕ ಕೋಚ್ ರಯಾನ್ ಡಸ್ಕ್ವೆಟ್ ಅವರು ಮುಂದುವರಿಯಲು ಇಷ್ಟಪಡದ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ಗೌತಮ್ ಗಂಭೀರ್ ಅವರಿಗೂ ಈ ವಿಷಯವನ್ನು ಬಿಸಿಸಿಐ ತಿಳಿಸಿದ್ದು, ಅವರ ಹುದ್ದೆಯನ್ನು ಕೊನೆಗೊಳಿಸಿದೆ ಎನ್ನಲಾಗಿದೆ.
ಅದೇ ರೀತಿ ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗಿನಿಂದಲೂ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲೀಪ್ ಅವರನ್ನು ಭಾರತೀಯ ಮಂಡಳಿ ಕೈಬಿಟ್ಟಿದೆ. ನೆದರ್ಲ್ಯಾಂಡ್ಸ್ ತಂಡದ ಮಾಜಿ ಆಟಗಾರ ಡಶೆಟ್ ಎರಡು ವರ್ಷಗಳ ಹಿಂದೆ ಭಾರತೀಯ ತಂಡಕ್ಕೆ ಸಹಾಯಕ ಕೋಚ್ ಆಗಿ ಸೇರಿಕೊಂಡರು. ಅವರು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು ಮತ್ತು ಗೌತಮ್ ಗಂಭೀರ್ ಅವರನ್ನು ಕರೆತಂದಿದ್ದರು (ಏಜೆನ್ಸೀಸ್).