180ಕ್ಕೂ ಹೆಚ್ಚು ಹುಡುಗಿಯರಿಗೆ ವಂಚನೆ, 350 ಅಶ್ಲೀಲ ವಿಡಿಯೋ...ಹೇಗಿತ್ತು ಕಾಮಪಿಶಾಚಿಯ ಮೋಡಸ್​ ಆಪರೆಂಡಿ? Ayan Ahmed Tanveer Case 
ದೇಶ

180ಕ್ಕೂ ಹೆಚ್ಚು ಹುಡುಗಿಯರಿಗೆ ವಂಚನೆ, 350 ಅಶ್ಲೀಲ ವಿಡಿಯೋ...ಹೇಗಿತ್ತು ಕಾಮಪಿಶಾಚಿಯ ಮೋಡಸ್​ ಆಪರೆಂಡಿ? Ayan Ahmed Tanveer Case

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿರುವ ಕ್ರೂರ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ
  • ನಾವು ಎಂತಹ ರಾಕ್ಷಸರ ನಡುವೆ ಬದುಕುತ್ತಿದ್ದೇವೆ ಎಂಬುದನ್ನು ಈ ಘಟನೆ ಬಯಲು ಮಾಡಿದೆ
  • ಒಳ್ಳೆಯವನಂತೆ ಕಾಣುವ ವ್ಯಕ್ತಿ ದುಷ್ಕೃತ್ಯ ಎಸಗಿದಾಗ ಅವನೊಳಗೆ ಎಂತಹ ವಿಕೃತ ಆಲೋಚನೆಗಳು ಅಡಗಿವೆ ಎಂಬುದು ಬಯಲಾಗುತ್ತೆ
  • ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಯಾನ್ ಅಹ್ಮದ್ ತನ್ವೀರ್ ಪ್ರಕರಣದ ಸ್ಫೋಟಕ ಮಾಹಿತಿ ಇಲ್ಲಿದೆ
Ayan Ahmed Tanveer Case : ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿರುವ ಕ್ರೂರ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ನಾವು ಎಂತಹ ರಾಕ್ಷಸರ ನಡುವೆ ಬದುಕುತ್ತಿದ್ದೇವೆ ಎಂಬುದನ್ನು ಈ ಘಟನೆ ಬಯಲು ಮಾಡಿದೆ. ಹೊರಗೆ ಒಳ್ಳೆಯವನಂತೆ ಕಾಣುವ ವ್ಯಕ್ತಿ ದುಷ್ಕೃತ್ಯ ಎಸಗಿದಾಗ ಅವನೊಳಗೆ ಎಂತಹ ವಿಕೃತ ಆಲೋಚನೆಗಳು ಅಡಗಿವೆ ಎಂಬುದು ಬಯಲಾಗುತ್ತದೆ. ಇಂತಹ ಘಟನೆಗಳು ನಂಬಿಕೆ ಅನ್ನೋ ಪದಕ್ಕೆ ಕೊಡಲಿ ಏಟು ನೀಡುತ್ತಿವೆ. 20 ವರ್ಷ ಕೂಡ ತುಂಬದ ಹುಡುಗನೊಬ್ಬ ಪ್ರೀತಿಯ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರನ್ನು ಬಲೆಗೆ ಬೀಳಿಸಿ, ಸುಳ್ಳು ಹೇಳಿ ಅವರನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ಅಲ್ಲದೆ, ಕಾಮದಾಟದ ವಿಡಿಯೋಗಳನ್ನು ಮಾಡಿ, ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದ. ಈತನ ಕಾಮದ ಕಣ್ಣಿಗೆ ಸಿಲುಕಿದ್ದು, ಒಬ್ಬಿಬ್ಬರಲ್ಲ, ಸುಮಾರು 180 ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ, 350ಕ್ಕೂ ಹೆಚ್ಚು ವಿಡಿಯೋಗಳನ್ನು ಮಾಡಿದ್ದಾನೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಯಾನ್ ಅಹ್ಮದ್ ತನ್ವೀರ್ ಎಂಬ 19 ವರ್ಷದ ಯುವಕ ಇಂತಹ ದೌರ್ಜನ್ಯ ಎಸಗಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇತ್ತೀಚೆಗೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳು ಮತ್ತು ಇತರೆ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯವು ಆತನನ್ನು ಈ ತಿಂಗಳ 21 ರವರೆಗೆ ರಿಮಾಂಡ್ ಮಾಡಿದೆ. ತನ್ವೀರ್ ಸುಮಾರು 180 ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದರೂ, ಪೊಲೀಸರು ಇಲ್ಲಿಯವರೆಗೆ ಕೇವಲ 8 ಸಂತ್ರಸ್ತರನ್ನು ಮಾತ್ರ ಗುರುತಿಸಿದ್ದಾರೆ.
ತನ್ವೀರ್​ನನ್ನು ಬಂಧಿಸಿದ ಪೊಲೀಸರು ಆತನ ಮೊಬೈಲ್ ಫೋನ್​ನಿಂದ ಹಲವಾರು ವಿಡಿಯೋಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಅಯಾನ್, ಅಪ್ರಾಪ್ತ ಬಾಲಕಿಯರನ್ನು ಗುರಿಯಾಗಿಸಿಕೊಂಡು ಅವರೊಂದಿಗೆ ಸ್ನೇಹ ಬೆಳೆಸಿ, ನಂತರ ಪ್ರೀತಿಯ ಹೆಸರಿನಲ್ಲಿ ಅವರನ್ನು ಬಲೆಗೆ ಬೀಳಿಸುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಹುಡುಗಿಯರನ್ನು ಲೈಂಗಿಕವಾಗಿ ಸಂಪರ್ಕಿಸಿ ಅವರ ವಿಡಿಯೋಗಳನ್ನು ಮಾಡಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಉಜರ್ ಖಾನ್ ಎಂಬ ಮತ್ತೊಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ತನ್ವೀರ್ ರೆಕಾರ್ಡ್ ಮಾಡಿದ ಅಶ್ಲೀಲ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪ ಆತನ ಮೇಲಿದೆ.
ಇದೀಗ ಈ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡಿದೆ. ಆರೋಪಿ ತನ್ವೀರ್, ಅಸಾದುದ್ದೀನ್ ಓವೈಸಿ ನೇತೃತ್ವದ ಮಜ್ಲಿಸ್ (AIMIM) ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪಗಳು ಬೆಳಕಿಗೆ ಬಂದಿರುವುದು ಇದಕ್ಕೆ ಕಾರಣ. ತನ್ವೀರ್ AIMIM ಜೊತೆ ಸಂಪರ್ಕ ಹೊಂದಿದ್ದಾನೆ ಮತ್ತು ಸ್ಥಳೀಯ ಚುನಾವಣೆಯ ಸಮಯದಲ್ಲಿ ಪಕ್ಷದ ಸಾಮಾಜಿಕ ಜಾಲತಾಣ ಚಟುವಟಿಕೆಗಳಲ್ಲಿಯೂ ಭಾಗಿಯಾಗಿದ್ದಾನೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಪರತ್ವಾಡ ಮತ್ತು ಅಚಲ್ಪುರ ಪ್ರದೇಶಗಳಲ್ಲಿ ಜನರು ತನ್ವೀರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಹಿಂದೂ ಸಂಘಟನೆಗಳ ಆಶ್ರಯದಲ್ಲಿ ಬಂದ್ ಕೂಡ ಆಚರಿಸಲಾಯಿತು. ಇದೇ ಸಮಯದಲ್ಲಿ, ಮಹಾರಾಷ್ಟ್ರ ಸರ್ಕಾರವು ಆರೋಪಿ ತನ್ವೀರ್ ಮನೆಯ ಮೇಲೆ ಬುಲ್ಡೋಜರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅವರ ಮನೆಯ ಜೊತೆಗೆ, ಸ್ಥಳೀಯ ಪುರಸಭೆ ಅಧಿಕಾರಿಗಳು ಹತ್ತಿರದ ಅಕ್ರಮ ಕಟ್ಟಡಗಳನ್ನು ಸಹ ಕೆಡವಿದರು. ಆದಾಗ್ಯೂ, ಆರೋಪಿ ತನ್ವೀರ್ ಅವರ ಮನೆ ಅಕ್ರಮ ನಿವಾಸ ಎಂದು ಹೇಳಿದ್ದರು.. ಮತ್ತು ಈ ಬಗ್ಗೆ ಈ ಹಿಂದೆ ನೋಟಿಸ್ ನೀಡಲಾಗಿತ್ತು.

ಮೋಡಸ್​ ಆಪರೆಂಡಿ ಹೇಗಿತ್ತು?

ಅಂದಹಾಗೆ, ಅಯಾನ್ ಅಹ್ಮದ್ ತನ್ವೀರ್ ಪ್ರಕರಣದಲ್ಲಿ ಆತನ ಕಾರ್ಯಾಚರಣೆಯ ವಿಧಾನ (Modus Operandi) ಅತ್ಯಂತ ವ್ಯವಸ್ಥಿತ ಮತ್ತು ವಂಚನೆಯಿಂದ ಕೂಡಿತ್ತು. ಈತ ಮೊದಲಿಗೆ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಅಪ್ರಾಪ್ತ ಬಾಲಕಿಯರನ್ನು ಮತ್ತು ಯುವತಿಯರನ್ನು ಸಂಪರ್ಕಿಸುತ್ತಿದ್ದ. ತನ್ನ ಅಸಲಿ ಗುರುತನ್ನು ಮರೆಮಾಚಿ, ಅವರೊಂದಿಗೆ ಸ್ನೇಹ ಬೆಳೆಸಿ ನಂಬಿಕೆ ಗಳಿಸುತ್ತಿದ್ದ. ಒಮ್ಮೆ ಸ್ನೇಹ ಗಾಢವಾದ ನಂತರ, ಅವರೊಂದಿಗೆ ವಿಡಿಯೋ ಕರೆಗಳಲ್ಲಿ ಮಾತನಾಡುವಾಗ ಅಥವಾ ಖಾಸಗಿ ಭೇಟಿಯ ಸಂದರ್ಭದಲ್ಲಿ ಅವರಿಗೆ ತಿಳಿಯದಂತೆ ಆಕ್ಷೇಪಾರ್ಹ ದೃಶ್ಯಗಳನ್ನು ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದನು.
ಹೀಗೆ ಸಂಗ್ರಹಿಸಿದ ವಿಡಿಯೋಗಳನ್ನು ಬಳಸಿಕೊಂಡು, ತನ್ನ ಅಸಲಿ ರೂಪವನ್ನು ತೋರಿಸುತ್ತಿದ್ದ. ಸಂತ್ರಸ್ತೆಯರು ತನ್ನ ಇಷ್ಟದಂತೆ ನಡೆದುಕೊಳ್ಳದಿದ್ದರೆ ಅಥವಾ ಹಣ ನೀಡದಿದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಅಥವಾ ಅವರ ಕುಟುಂಬ ಸದಸ್ಯರಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದ. ಇದೇ ಭಯವನ್ನು ಬಂಡವಾಳ ಮಾಡಿಕೊಂಡು ಆತ ಹಲವು ಬಾಲಕಿಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮತ್ತು ಬ್ಲ್ಯಾಕ್‌ಮೇಲ್ ಮೂಲಕ ಹಣವನ್ನು ಕೂಡ ವಸೂಲಿ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ, (ಏಜೆನ್ಸೀಸ್​).