ಇನ್ಸ್ಟಾಗ್ರಾಮ್ ಲೈವ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಲ್ 
ದೇಶ

ಇದು ನನ್ನ ಕೊನೆ ರೈಡ್: ಲೈವ್​ ಸ್ಟ್ರೀಮಿಂಗ್​ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಬಿಗ್​ ಬಾಸ್​ ಸ್ಪರ್ಧಿ! Anurag Dobhal

ಪ್ರಮುಖ ಮುಖ್ಯಾಂಶಗಳು

  • ಇನ್ಸ್ಟಾಗ್ರಾಮ್ ಲೈವ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಲ್
  • ಮಾನಸಿಕವಾಗಿ ಕುಗ್ಗಿದ್ದ ಅನುರಾಗ್ ದೋಭಲ್
  • ದೆಹಲಿ- ಮೀರಟ್​ ಹೈವೇನಲ್ಲಿ ನಡೆದ ಅಫಘಾತ
ನವದೆಹಲಿ: ಇನ್‌ಸ್ಟಾಗ್ರಾಮ್ ಲೈವ್‌ಸ್ಟ್ರೀಮಿಂಗ್​ನಲ್ಲಿ ಯುಕೆ 07 ಖ್ಯಾತಿಯ ಮೋಟೋ ವ್ಲಾಗರ್​​ ಹಾಗೂ ಮಾಜಿ ಬಿಗ್​ಬಾಸ್​ ಸ್ಪರ್ಧಿ, ಅನುರಾಗ್ ದೋಭಲ್ (Anurag Dobhal) ಕಾರನ್ನು ವೇಗವಾಗಿ ಚಲಾಯಿಸಿ ಅಫಘಾತ ಮಾಡಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ (ಮಾ.7) ದೆಹಲಿ-ಮೀರಟ್​ ಹೈವೇನಲ್ಲಿ ತಮ್ಮ ಟೊಯೋಟಾ ಫಾರ್ಚೂನರ್ ಕಾರನ್ನು ಸುಮಾರು 150 ಕೀ/ಗಂ ವೇಗದಲ್ಲಿ ಚಲಾಯಿಸುತ್ತಾ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಅಫಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಮಾನಸಿಕವಾಗಿ ನೊಂದಿದ್ದ ಅನುರಾಗ್

ಈ ಘಟನೆ ನಡೆಯುದಕ್ಕೂ ಒಂದೆರಡು ದಿನಗಳ ಹಿಂದೆ ಅನುರಾಗ್, ನನ್ನ ಮನೆಯವರು ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ನಾನು ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಕಾರಣ ನನ್ನ ಮೇಲೆ ಕೋಪಗೊಂಡಿರುವ ಮನೆಯವರು ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ನನಗೇನಾದರೂ ಆದರೆ ಅದಕ್ಕೆ ತನ್ನ ಕುಟುಂಬ ವರ್ಗವೇ ಕಾರಣ ಎಂದು ಅನುರಾಗ್ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಇದು ನನ್ನ ಕೊನೆ ರೈಡ್!
ಶನಿವಾರ (ಮಾ.7) ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂಧಿರುವ ಅನುರಾಗ್, ಇದು ನನ್ನ ಕೊನೆ ರೈಡ್​ ಆಗಲಿದೆ ಎಂದು ಹೇಳುತ್ತಾ ಕಾರನ್ನು ಓಡಿಸಲು ಪ್ರಾರಂಭಿಸಿದ್ದಾನೆ. ಕಾರನ್ನು ಚಲಾಯಿಸುತ್ತಾ ಭಾವುಕನಾದ ಅನುರಾಗ್, ಅಮ್ಮ ಐ ಲವ್​ ಯೂ ಅಮ್ಮಾ, ನೀವು ನನಗೆ ಈ ಜನ್ಮದಲ್ಲಿ ಪ್ರೀತಿಯನ್ನು ನೀಡಲಿಲ್ಲ. ಸಾಧ್ಯವಾದರೆ ಮುಂದಿನ ಜನ್ಮದಲ್ಲಿ ನನ್ನನ್ನು ಪ್ರೀತಿಸಿ ಎಂದು ಹೇಳುತ್ತಾ ಕಣ್ಣೀರನ್ನು ಸುರಿಸಿದ್ದಾರೆ.
ಈ ಲೈವ್​ ವಿಡಿಯೋವನ್ನು ಸುಮಾರು 82,000 ಜನ ನೋಡುತ್ತಿದ್ದು, ಅವರು ಅನುರಾಗ್​ಗೆ ಸಮಾದಾನ ಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮಾನಸಿಕವಾಗಿ ಬಹಳ ಜರ್ಜರಿತನಾಗಿದ್ದ ಅನುರಾಗ್ ಕಾರನ್ನು ಮಿತಿ ಮೀರಿದ ವೇಗದಲ್ಲಿ ಚಲಾಯಿಸಿ ಆತ್ಮಹತ್ಯಗೆ ಪ್ರಯತ್ನಿಸಿದ್ದಾರೆ.

ಯಾರು ಈ ಅನುರಾಗ್ ದೋಭಲ್?

ಅನುರಾಗ್ ದೋಭಲ್ (Anurag Dobhal) ಅವರು ಭಾರತದ ಪ್ರಮುಖ ಯೂಟ್ಯೂಬರ್, ಮೋಟೋ ವ್ಲೋಗರ್ ಮತ್ತು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದಾರೆ. ಇವರು ತಮ್ಮ ಯೂಟ್ಯೂಬ್ ಚಾನೆಲ್ UK07 Rider ಮೂಲಕ ಜನಪ್ರಿಯತೆಯನ್ನು ಗಳಿಸಿದ್ದರು.
ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಜನಿಸಿದ ಅನುರಾಗ್, ತಮ್ಮ ಐಷಾರಾಮಿ ಬೈಕ್‌ಗಳ ಸಂಗ್ರಹ ಮತ್ತು ಸಾಹಸಮಯ ವ್ಲಾಗ್‌ಗಳ ಮೂಲಕ ಯುವಜನತೆಯಲ್ಲಿ ಭಾರಿ ಕ್ರೇಜ್ ಸೃಷ್ಟಿಸಿದ್ದರು. ಇವರು ಭಾರತದ ಅತಿದೊಡ್ಡ ಮೋಟೋ ವ್ಲೋಗರ್‌ಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಅನುರಾಗ್ ದೋಭಲ್ ಅವರು 2023 ರಲ್ಲಿ ಬಿಗ್ ಬಾಸ್ ಹಿಂದಿ ಸೀಸನ್ 17 ರ ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಕಿರುತೆರೆಯಲ್ಲೂ ಗುರುತಿಸಿಕೊಂಡರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಅಪ್ರತಿಮ ಆಟ ಮತ್ತು ನೇರ ನುಡಿಯ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇವರ ಶೈಲಿ ಮತ್ತು ಜೀವನಶೈಲಿ ಅನೇಕರಿಗೆ ಇಷ್ಟವಾಗುತ್ತದೆ. ಸದ್ಯ ಇವರು ತಮ್ಮ ಯೂಟ್ಯೂಬ್ ವ್ಲಾಗ್ಸ್, ಮ್ಯೂಸಿಕ್ ವಿಡಿಯೋಗಳು ಮತ್ತು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ಸಕ್ರಿಯವಾಗಿದ್ದಾರೆ,(ಏಜನ್ಸೀಸ್​).