ಸ್ನ್ಯಾಪ್‌ಚಾಟ್ ಪ್ರೀತಿಗಾಗಿ ಗಡಿ ದಾಟಿ ಬಂದ ಪಾಕ್ ಯುವಕ! 
ದೇಶ

ಮತ್ತೊಂದು 'ಸೀಮಾ ಹೈದರ್' ಶೈಲಿಯ ಲವ್ ಸ್ಟೋರಿ: ಸ್ನ್ಯಾಪ್‌ಚಾಟ್ ಪ್ರೀತಿಗಾಗಿ ಗಡಿದಾಟಿದ ಪಾಕ್ ಪ್ರೇಮಿ; ಬಂಧಿಸಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದ ಭಾರತೀಯ ಸೈನಿಕರು! PoK Man Crossed Border

ಪ್ರಮುಖ ಮುಖ್ಯಾಂಶಗಳು

  • ಮತ್ತೊಂದು ಸೀಮಾ ಹೈದರ್ ಮಾದರಿಯ ಲವ್ ಸ್ಟೋರಿ!
  • ಸ್ನ್ಯಾಪ್‌ಚಾಟ್ ಪ್ರೀತಿಗಾಗಿ ಗಡಿ ದಾಟಿ ಬಂದ ಪಾಕ್ ಯುವಕ!
  • ಉರಿ ನಿವಾಸಿ ಇರಾಂಗಾಗಿ ಎಲ್‌ಒಸಿ ದಾಟಿದ ಜೀಶನ್‌ನನ್ನು ಬಂಧಿಸಿದ ಸೇನೆ
  • ಮಾನವೀಯತೆಯಿಂದ ಮರಳಿ ಪಾಕಿಸ್ತಾನಕ್ಕೆ ಕಳುಹಿಸಿದ ಭಾರತೀಯ ಸೇನೆ.
ಜಮ್ಮು-ಕಾಶ್ಮೀರ: ಪ್ರೀತಿಗೆ ಯಾವುದೇ ಗಡಿಯಿಲ್ಲ, ಪ್ರೇಮಕ್ಕೆ ಯಾವುದೇ ತಡೆಯಿಲ್ಲ ಎಂಬ ಮಾತನ್ನು ನಾವು ಕೇಳಿರುತ್ತೆವೆ. ಆದರೆ ಈ ಪ್ರೀತಿ ಎನ್ನುವುದು ಶತ್ರುದೇಶದ ಗಡಿಯನ್ನು (PoK Man Crossed Border) ದಾಟುವಂತೆ ಮಾಡುತ್ತದೆ ಎನ್ನುವುದು ಈಗ ಮತ್ತೊಮ್ಮೆ ಸಾಭೀತಾಗಿದೆ.
ಕೆಲ ವರ್ಷಗಳ ಹಿಂದೆ ಸೀಮಾ ಹೈದರ್​ ಎಂಬ ಪಾಕಿಸ್ತಾನದ ಮಹಿಳೆ, ನೋಯ್ಡಾ ನಿವಾಸಿ ಸಚಿನ್​ ಎಂಬಾತನನ್ನು ಆನ್​ಲೈನ್​ ಗೇಮ್​ ಮೂಲಕ ಪರಿಚಯ ಮಾಡಿಕೊಂಡು ಅಕ್ರಮವಾಗಿ ಗಡಿದಾಟಿ ನಂತರ ಸಚಿನ್​ನನ್ನು ಮದುವೆಯಾದ ಘಟನೆ ಎಲ್ಲರಿಗೂ ನೆನಪಿದೆ. ಈಗ ಸಹ ಇಂತಹದ್ದೆ ಒಂದು ಘಟನೆ ಜಮ್ಮು-ಕಾಶ್ಮೀರದಲ್ಲಿ ಜರುಗಿದೆ.

ಸ್ನ್ಯಾಪ್‌ಚಾಟ್​​ನಲ್ಲಿ ಪರಿಚಯ ಗಡಿದಾಟಿದ ಹೈದ!

ಪಾಕ್​ ಆಕ್ರಮಿತ ಕಾಶ್ಮೀರದ ಮುಜಫರಾಬಾದ್​ ನಿವಾಸಿ ಜೀಶಾನ್ ಮೀರ್ ಎಂಬ ಯುವಕ ಜಮ್ಮುವಿನ ಉರಿ ನಿವಾಸಿ ಇರಾಂ ಮಾಜೀದ್​ ಎಂಬ ಯುವತಿಯನ್ನು ಸ್ನ್ಯಾಪ್‌ಚಾಟ್​​ನಲ್ಲಿ ಪರಿಚಯ ಮಾಡಿಕೊಂಡಿದ್ದ.
ಈ ಪರಿಚಯ ಸ್ನೇಹವಾಗಿ ಬೆಳೆದು, ಸ್ನೇಹ ಪ್ರೀತಿ ರೂಪವನ್ನು ಪಡೆದುಕೊಂಡಿದೆ. ನಂತರ ತನ್ನ ಪ್ರೀಯತಮೆಯನ್ನು ಸೇರಲು ಈ ಜೀಶಾನ್ ಲೈನ್​ ಆಫ್​ ಕಂಟ್ರೋಲ್​ ದಾಟಲು ಮುಂದಾಗಿದ್ದಾನೆ.

ಭಾರತೀಯ ಸೇನೆಯಿಂದ ಬಂಧನ; ಪಾಕ್​ ಗೆ ರವಾನೆ!

ಈ ಜೀಶಾನ್​, ಜಮ್ಮುವಿನ ಇರಾಂ ಮಾಜೀದ್​ಳನ್ನು ಭೇಟಿ ಮಾಡಲು ಮೇ. 31 ರಂದು ಎಲ್​ಒಸಿ ದಾಟಲು ಮುಂದಾಗಿದ್ದಾನೆ. ಆದರೆ ಆ ಸಮಯದಲ್ಲಿ ಗಡಿ ಕಾಯುತ್ತಿದ್ದ ಭಾರತೀಯ ಸೇನೆಯ 12 ನೇ ಗ್ರೇನೇಡಿಯರ್​ ತುಕಡಿಯ ಸೈನಿಕರು ಈ ಜೀಶಾನ್​ನನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ತೆಗೆದುಕೊಂಡ ಬಳಿಕ ಆತನ ಕಥೆಯನ್ನು ಕೇಳಿಸಿಕೊಂಡಿದ್ದಾರೆ. ಅಕ್ರಮವಾಗಿ ಗಡಿ ದಾಟುವಂತಿಲ್ಲ ಎಂದು ತಿಳಿಹೇಳಿ ಕೆಲ ದಿನಗಳವರೆಗೆ ಸೇನೆ ಬಂಧನದಲ್ಲಿ ಇಟ್ಟುಕೊಂಡಿದ್ದಾರೆ. ಬಂಧನದ ಸಮಯದಲ್ಲಿ ಮಾನವೀಯ ದೃಷ್ಟಿಯಿಂದ ಊಟ-ಉಪಚಾರವನ್ನು ಸೇನೆ ಮಾಡಿದೆ.
ನಂತರ ಪಾಕಿಸ್ತಾನದ ಸೇನೆ ಜೊತೆ ಸಂಪರ್ಕ ಸಾಧಿಸಿದ ಭಾರತೀಯ ಸೈನಿಕರು ಈ ಜೀಶಾನ್​ ಮೀರ್​ ಗಡಿ ದಾಟಲು ಪ್ರಯತ್ನಿಸಿದ ಹಾಗೂ ತಮ್ಮ ವಶದಲ್ಲಿರುವ ಕುರಿತು ತಿಳಿಸಿದ್ದಾರೆ. ನಂತರ ಉಭಯ ದೇಶಗಳ ಅಧಿಕಾರಿಗಳು ಮಾತುಕತೆ ನಡೆಸಿ ಜುಲೈ 4 ರಂದು ಜೀಶಾನ್​ನನ್ನು ಪಾಕಿಸ್ತಾನ ಸೇನೆಗೆ, ಭಾರತೀಯ ಸೇನೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆಂದು ತಿಳಿದು ಬಂದಿದೆ, (ಏಜನ್ಸೀಸ್​).