ನಿಮಗಂತು ಪ್ರಧಾನಿ ಆಗುವ ಸರದಿ ಬರೋದೇ ಇಲ್ಲ! ರಾಹುಲ್​ ಗಾಂಧಿ ಸರಣಿ ಆರೋಪ ಬೆನ್ನಲ್ಲೇ ಅಮಿತ್ ಶಾ ವಾಗ್ದಾಳಿ  
ದೇಶ

ನಿಮಗಂತು ಪ್ರಧಾನಿ ಆಗುವ ಸರದಿ ಬರೋದೇ ಇಲ್ಲ! ರಾಹುಲ್​ ಗಾಂಧಿ ಸರಣಿ ಆರೋಪ ಬೆನ್ನಲ್ಲೇ ಅಮಿತ್ ಶಾ ವಾಗ್ದಾಳಿ

ನವದೆಹಲಿ: ನಗರದ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮನ್ನು ಗುರಿಯಾಗಿಸಿಕೊಂಡು ಆರೋಪಿಸಿರುವ ಕಾಂಗ್ರೆಸ್​ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಇದೀಗ ಕೇಂದ್ರ ಗೃಹಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

"2024ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಹಾಗೂ ಮತದಾರರ ಪಟ್ಟಿ ದುರ್ಬಳಕೆ ಮಾಡಿಕೊಂಡು 'ಮತಗಳ ಕಳವು' ನಡೆಸಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದು, ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಅವರು ಜೈಲು ಸೇರುವುದು ಖಚಿತ" ಎಂದು ಗುಡುಗಿದರು.

ಗಾಯಗಳ ಮೇಲೆ ಉಪ್ಪು ಹಾಕಿ ಉಜ್ಜಿದಂತಿದೆ

"ಈ ಮತಗಳ ಕಳುವು ಸಾಮಾನ್ಯ ಕಳುವಲ್ಲ. ಇದು ಭಾರತದ ಪ್ರತಿಯೊಬ್ಬ ಪ್ರಜೆಯ ಧ್ವನಿಯನ್ನು ಕದಿಯುವ ಹುನ್ನಾರ. ಇದನ್ನು ದೇಶದ್ರೋಹ ಎಂದು ಕರೆಯುತ್ತಾರೆ. ಜ್ಞಾನೇಶ್ ಕುಮಾರ್ ಇಲ್ಲ ಎಂದಿದ್ದರೆ, ನರೇಂದ್ರ ಮೋದಿ ಪ್ರಧಾನಿ ಆಗುತ್ತಿರಲಿಲ್ಲ ಮತ್ತು ಅಮಿತ್ ಶಾ ಕೇಂದ್ರ ಗೃಹ ಸಚಿವರಾಗುತ್ತಿರಲಿಲ್ಲ. 2024ರ ಲೋಕಸಭಾ ಚುನಾವಣೆ ಸಂಪೂರ್ಣವಾಗಿ ಅಕ್ರಮವಾಗಿತ್ತು. ಚುನಾವಣೆಯ ನಂತರ ಶೇ.15ರಷ್ಟು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿತು" ಎಂದು ಆರೋಪಿಸಿದ್ದಾರೆ.

ಪಿಟಿಐ ವರದಿ ಪ್ರಕಾರ, ರಾಹುಲ್ ಗಾಂಧಿಯ ಸರಣಿ ಆರೋಪಗಳಿಗೆ ಚಂಡೀಗಢದಲ್ಲಿ ಪ್ರತಿಕ್ರಿಯಿಸಿರುವ ಅಮಿತ್​ ಶಾ, ಇದು 1984ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರ ಗಾಯಗಳ ಮೇಲೆ ಉಪ್ಪು ಹಾಕಿ ಉಜ್ಜಿದಂತಿದೆ. ರಾಹುಲ್​ಗೆ ದೇಶದ ಪ್ರಧಾನಮಂತ್ರಿ ಆಗುವ ಸರದಿ ಇನ್ಯಾವತ್ತೂ ಬರುವುದೇ ಇಲ್ಲ. ನೀವು ಪ್ರಧಾನಿಯಾಗಲು ಬಯಸಿದರೆ, ನಿಮ್ಮ ಇಡೀ ಜೀವನ ಅಣಕು ಸಂಸತ್ತಿನಲ್ಲಿ ಉಳಿಯಬೇಕು ಎಷ್ಟೇ ಎಂದು ಲೇವಡಿ ಮಾಡಿದರು.

ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ

ಇಂಡಿಯಾ ಮೈತ್ರಿಕೂಟದ ರ್ಯಾಲಿಯನ್ನು ತೀವ್ರವಾಗಿ ಟೀಕಿಸಿದ ಅಮಿತ್​ ಶಾ, ನಿಮ್ಮ ಪ್ರತಿಭಟನೆಗೆ ನಿಗದಿ ಮಾಡಿಕೊಂಡಿರುವ ದಿನಾಂಕವು ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಹೋರಾಟದ ಹೆಸರಿನಲ್ಲಿ, ಜನರ ವ್ಯಾಪಾರಗಳಿಗೆ ತೊಂದರೆ ಮಾಡುತ್ತಿದ್ದೀರಿ. ಇದನ್ನು ದೇಶದ ಜನತೆ ಕ್ಷಮಿಸುವುದಿಲ್ಲ ಮತ್ತು ಮರೆಯುವುದೂ ಇಲ್ಲ ಎಂದು ಹೇಳಿದ್ದಾರೆ.

"ನಾವು ನವೆಂಬರ್ 1, 2, 3ರಂದು ರ್ಯಾಲಿಯನ್ನು ಆಯೋಜಿಸದಂತೆ ಮತ್ತು ಸಿಖ್ ವಿರೋಧಿ ದಂಗೆಯ ಸಂತ್ರಸ್ತರ ಭಾವನೆಗಳಿಗೆ ಧಕ್ಕೆ ತರದಂತೆ ಕೇಳಿಕೊಂಡಿದ್ದೆವು. ಆದರೆ, ಕಾಂಗ್ರೆಸ್​ನವರು ಮಾತ್ರ ಇದನ್ನು ಮುಂದುವರೆಸಿದರು. ಸಾವಿರಾರು ಸಿಖ್ಖರನ್ನು ಸಜೀವ ದಹನ ಮಾಡಿದ ಅದೇ ದಿನ ರ್ಯಾಲಿಯನ್ನು ಆಯೋಜಿಸಲು ಅವರಿಗೆ ವಿದೇಶದಿಂದ ಆದೇಶ ಬಂದಿದೆ. ಈ ಹೇಯ ಪ್ರಯತ್ನವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಭಾರತ ಮತ್ತು ಪಂಜಾಬ್ ಇದನ್ನು ಯಾವತ್ತಿಗೂ ಮರೆಯಲ್ಲ" ಎಂದು ಗೃಹಸಚಿವರು ಕಿಡಿಕಾರಿದರು.

ಕಾಂಗ್ರೆಸ್​ ಗಂಭೀರ ಆರೋಪ

"ಈ ಮತಗಳ ಕಳುವು ಸಾಮಾನ್ಯ ಕಳುವಲ್ಲ. ಇದು ಭಾರತದ ಪ್ರತಿಯೊಬ್ಬ ಪ್ರಜೆಯ ಧ್ವನಿಯನ್ನು ಕದಿಯುವ ಹುನ್ನಾರ. ಇದನ್ನು ದೇಶದ್ರೋಹ ಎಂದು ಕರೆಯುತ್ತಾರೆ. ಜ್ಞಾನೇಶ್ ಕುಮಾರ್ ಇಲ್ಲ ಎಂದಿದ್ದರೆ, ನರೇಂದ್ರ ಮೋದಿ ಪ್ರಧಾನಿ ಆಗುತ್ತಿರಲಿಲ್ಲ ಮತ್ತು ಅಮಿತ್ ಶಾ ಕೇಂದ್ರ ಗೃಹ ಸಚಿವರಾಗುತ್ತಿರಲಿಲ್ಲ. 2024ರ ಲೋಕಸಭಾ ಚುನಾವಣೆ ಸಂಪೂರ್ಣವಾಗಿ ಅಕ್ರಮವಾಗಿತ್ತು. ಚುನಾವಣೆಯ ನಂತರ ಶೇ.15ರಷ್ಟು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿತು" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

"ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಶೇ.3 ರಷ್ಟು ಮಾತ್ರ ವ್ಯತ್ಯಾಸವಿತ್ತು. ಇದನ್ನು ಚುನಾವಣಾ ಆಯೋಗದ ದತ್ತಾಂಶಗಳೇ ಹೇಳುತ್ತಿವೆ. ಆರ್‌ಎಸ್‌ಎಸ್ (RSS) ಸಂಸ್ಥೆಯು ದೇಶದ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ತನಿಖಾ ಸಂಸ್ಥೆಗಳವರೆಗೆ ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದರಿಂದಾಗಿ ರೈತರು, ಕಾರ್ಮಿಕರು ಮತ್ತು ಯುವಕರಿಗೆ ಸೂಕ್ತ ಹಕ್ಕುಗಳು ಸಿಗುತ್ತಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಕೊನೆಯವರೆಗೂ ಹೋರಾಡುವುದಾಗಿ" ಹೇಳಿದರು,(ಏಜೆನ್ಸೀಸ್).