- ಏಪ್ರಿಲ್ 15 ರಿಂದ ದೇಶದ 554 ಬ್ಯಾಂಕ್ ಶಾಖೆಗಳಲ್ಲಿ ಅಮರನಾಥ ಯಾತ್ರೆಗೆ ನೋಂದಣಿ ಆರಂಭ
- ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ, 13 ರಿಂದ 70 ವರ್ಷದವರಿಗೆ ಅವಕಾಶ
- ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳ ಮೂಲಕ ಪ್ರಯಾಣಿಸಬಹುದು
Amarnath Yatra 2026: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿರುವ ಹಿಂದೂ ದೇವಾಲಯವಾದ ಅಮರನಾಥನ ದೇಗುಲ ಭಾರಿ ಪ್ರಸಿದ್ಧ. ಇದು ಒಂದು ಗುಹೆಯಾಗಿದ್ದು, ಹಿಮ ನದಿ, ಪರ್ವತದಿಂದ ಆವೃತವಾಗಿದೆ. ಮಹಾಮಾಯ ಶಕ್ತಿ ಪೀಠದ ವಾಸಸಾಸ್ಥಾನವಾದ ಈ ಗುಹೆ, ಭಾರತದ 51 ಶಕ್ತಿ ಪೀಠಗಳಲ್ಲಿ ಒಂದು. ಇಲ್ಲಿಗೆ ಪ್ರತಿ ವರ್ಷವು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಯಾತ್ರೆ ಕೈಗೊಳ್ಳುತ್ತಾರೆ. ನೀವೇನಾದರೂ ಅದೆ ಪ್ಲಾನ್ನಲ್ಲಿದ್ದರೆ ನಿಮಗೊಂದು ಸಿಹಿಸುದ್ದಿ.
ಅಮರನಾಥ ಯಾತ್ರೆ ಕೈಗೊಳ್ಳಲು ಏಪ್ರಿಲ್ 15ರಿಂದ ನೋಂದಣಿ ತೆರೆಯಲಾಗಿದೆ. ಒಂದೇ ಸಮಯಕ್ಕೆ ಬುಕ್ಕಿಂಗ್ ಆರಂಭವಾಗಿದ್ದು, ಯಾತ್ರಿಕರು ತಮ್ಮ ಲೈಸೆನ್ಸ್ ಪಡೆಯಬಹದು ಎಂದು ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್ (SASB) ತಿಳಿಸಿದೆ.
ಎಲ್ಲೆಲ್ಲಿ ರಿಜಿಸ್ಟ್ರೇಷನ್ ಲಭ್ಯ?
ಮೊದಲು ಬಂದವರಿಗೆ ಮೊದಲ ಆದ್ಯತೆಯ ತತ್ವದ ಮೇಲೆ ನೋಂದಣಿ ಮಾಡಿಸಿಕೊಂಡವರಿಗೆ ಲೈಸೆನ್ಸ್ ನೀಡಲಾಗುತ್ತಿದೆ. ಆ ಮೂಲಕ ಭಕ್ತಾಧಿಗಳು ಸಂಸ್ಥೆ ಸದ್ಯ ಗೊತ್ತು ಮಾಡಿರುವ 550 ನಿಯೋಜಿತ ಬ್ಯಾಂಕ್ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು SASB ಅಧಿಕೃತ ಮಾಹಿತಿ ನೀಡಿದೆ.
ರಿಜಿಸ್ಟ್ರೇಶನ್ ಹೇಗೆ?
ಯಾತ್ರಗೆ ಹೋಗಲು ಬಯಸುವ ಭಕ್ತರು ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್ನ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲೇ ನೋಂದಣಿ ಮಾಡಿಕೊಳ್ಳಬಹುದು ಅಥವಾ ಬ್ಯಾಂಕ್ಗಳಲ್ಲಿ ಆಫ್ಲೈನ್ನಲ್ಲೇ ನೋಂದಣಿ ಲಭ್ಯ ಎಂದು ಹೇಳಲಾಗಿದೆ. ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಮಾಡಿಕೊಂಡಿದ್ದರೆ ಮಾತ್ರ ಲೈಸೆನ್ಸ್ ನೀಡಲಾಗುವುದು ಎನ್ನಲಾಗಿದೆ.
ಯಾರ್ಯಾರು ಯಾತ್ರೆಗೆ ಅರ್ಹರು?
6 ವಾರಗಳ ಒಳಗಿನ ಗರ್ಭಿಣಿಯರು ಮಾತ್ರ ಅಮರನಾಥ ಯಾತ್ರೆ ಕೈಗೊಳ್ಳಲು ಅವಕಾಶ ಮತ್ತು ಅವರಿಗಷ್ಟೇ ಲೈಸೆನ್ಸ್ ನೀಡಲಾಗುತ್ತದೆ. ಜೊತೆಗೆ 13ವರ್ಷ ಮೇಲ್ಪಟ್ಟವರು ರಿಂದ 70 ವರ್ಷದ ಒಳಗಿನ ವಯೋಮಿತಿ ಇರುವವರಿಗೆ ಮಾತ್ರ ಯಾತ್ರೆಗೆ ಅವಕಾಶ ಎಂದು ದೃಢಪಡಿಸಿದೆ.
ಯಾತ್ರೆ ಸಾಗೋದು ಯಾವ ದಾರಿಲಿ?
3,6880 ಮೀಟರ್ ಎತ್ತರದಲ್ಲಿ ಇರುವ ಗುಹೆ ತಲುಪಲು ಇರುವುದು ಎರಡು ಮಾರ್ಗ ಒಂದು ಪಹಲ್ಗಾಮ್ ದಾರಿ. ಇದು ಸುಮಾರು 32 ಕಿ.ಮೀ ಉದ್ದವಿದೆ. ಇನ್ನೊಂದು 14 ಕಿ.ಮೀನ ಬಾಲ್ಟಾಟ್ ಮಾರ್ಗ.
ಯಾತ್ರಾರ್ಥಿಗಳು ಏನು ಮಾಡಬೇಕು?, ಮಾಡಬಾರದು?
ಅಮರನಾಥ ಯಾತ್ರೆಗೆ ಹಾಜರಾಗುವ ಯಾತ್ರಾರ್ಥುಗಳು ಜಮ್ಮು-ಕಾಶ್ಮೀರದ ನಿಯೋಜಿತ ಕೇಂದ್ರಗಳಿಂದ RFID ಪಡೆದುಕೊಳ್ಳುವುದು.
- ಯಾತ್ರೆಗೆ ತೆರಳುವ ಸಮಯದಲ್ಲಿ ಕೊರಳಿನಲ್ಲಿ ಆ ಟ್ಯಾಗ್ ಧರಿಸುವುದು
- ಹಿಮಾಲಯದಲ್ಲಿ ಅತೀ ಶೀತವಲಯ ಇರುವ ಕಾರಣ ಬೆಚ್ಚಗಿನ ಬಟ್ಟೆ ಧರಿಸಬೇಕು, ಜೊತೆಯಲ್ಲಿಟ್ಟುಕೊಳ್ಳಬೇಕು
- ರೇನ್ ಕೋಟ್, ಛತ್ರಿ, ಶೂ ಧರಿಸಬೇಕು.
- RFID ಕಾರ್ಡ್ ಧರಿಸದೇ ಹಾಜರಾಗುವಂತಿಲ್ಲ
- ಮದ್ಯಪಾನ, ಧೂಮಪಾನ ನಿಷೇಧಿಸಲಾಗಿದೆ.
- ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ, (ಏಜೆನ್ಸೀಸ್)