ಉತ್ತರಾಖಂಡ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ರೇಖಾ ಆರ್ಯ 
ದೇಶ

ವಂಚನೆ, ಹಲ್ಲೆ ಮತ್ತು ಕೊಲೆ ಬೆದರಿಕೆ ಆರೋಪ: ಪತಿ ವಿರುದ್ಧ ಎಫ್​ಐಆರ್ ದಾಖಲಿಸಿದ ಉತ್ತರಾಖಂಡ್ ಸಚಿವೆ ರೇಖಾ | Minister Rekha

ವಂಚನೆ, ಹಲ್ಲೆ, ಜಾತಿ ನಿಂದನೆ ಹಾಗೂ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಉತ್ತರಾಖಂಡ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ಆರ್ಯ ಅವರು ತಮ್ಮ ಪತಿ ಗಿರ್ಧಾರಿ ಲಾಲ್ ಸಾಹು ಅಲಿಯಾಸ್ ಪಪ್ಪು ಗಿರ್ಧಾರಿ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಡೆಹ್ರಾಡೂನ್: ವಂಚನೆ, ಹಲ್ಲೆ, ಜಾತಿ ನಿಂದನೆ ಹಾಗೂ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಉತ್ತರಾಖಂಡ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ಆರ್ಯ ಅವರು ತಮ್ಮ ಪತಿ ಗಿರ್ಧಾರಿ ಲಾಲ್ ಸಾಹು ಅಲಿಯಾಸ್ ಪಪ್ಪು ಗಿರ್ಧಾರಿ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಡೆಹ್ರಾಡೂನ್‌ನ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಗುರುವಾರ(ಅ. 15) ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಪತಿ ಗಿರ್ಧಾರಿ ಲಾಲ್ ಸಾಹು ಅವರು ತಾನು ಅವಿವಾಹಿತ ಎಂದು ಹೇಳಿ ನನ್ನನ್ನು ಮದುವೆ ಮಾಡಿಕೊಂಡು ವಂಚಿಸಿದ್ದರು ಎಂದು ಆರೋಪಿಸಿದ್ದಾರೆ.

ಎಫ್‌ಐಆರ್ ಪ್ರಕಾರ, 2004 ಆರ್ಯ ಜುಲೈ 6ರಂದು ಉತ್ತರ ಪ್ರದೇಶದ ಬರೇಲಿ ನಿವಾಸಿ ಸಾಹು ಅವರನ್ನು ನಾನು ಹಿಂದೂ ಆಚರಣೆಗಳ ಪ್ರಕಾರ ವಿವಾಹವಾಗಿದ್ದೇನೆ. ಆದ್ರೆ ಮದುವೆಯ ಸಮಯದಲ್ಲಿ ಪತಿ ಗಿರ್ಧಾರಿ ಲಾಲ್ ಸಾಹು ಅವರು ತಾನು ಅವಿವಾಹಿತ ವಂಚನೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಕೆಲವು ವರ್ಷಗಳ ಬಳಿಕ ಸಾಹು ಈಗಾಗಲೇ ಮದುವೆಯಾಗಿದ್ದಾನೆ ಮತ್ತು ಆತನಿಗೆ ಮಕ್ಕಳಿದ್ದಾರೆ ಎಂದು ತಿಳಿಯಿತು. ಕುಟುಂಬ ಸದಸ್ಯರ ಸಲಹೆಯ ಮೇರೆಗೆ ಮತ್ತು ತನ್ನ ಸ್ವಂತ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತಾನು ಮೌನವಾಗಿದ್ದೇನೆ. ಆದರೆ ಪತಿಗೆ ಇತರೆ ಮಹಿಳೆಯರೊಂದಿಗೂ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ, ಆರಂಭದಲ್ಲಿ ತಪ್ಪನ್ನು ಒಪ್ಪಿಕೊಂಡು, ಕ್ಷಮೆಯಾಚಿಸಿದ್ದರಿಂದ ಸುಮ್ಮನಾದೆ. ಅಲ್ಲದೇ ಈಗಲೂ ಅದೇ ವರಸೆಯನ್ನು ಮುಂದುವರೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತಿ ತನ್ನನ್ನು ಹೊಡೆದಿದ್ದು, ನಿಂದಿಸಿದ್ದಾರೆ. ಹಾಗೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ತಾನು ಉತ್ತರಾಖಂಡದ ಅಧಿಸೂಚಿತ ಪರಿಶಿಷ್ಟ ಜಾತಿಗೆ ಸೇರಿದ್ದೇನೆ ಎಂದು ಹೇಳಿಕೊಂಡಿರುವ ಸಚಿವ ರೇಖಾ ಆರ್ಯ, ಅಧಿಕೃತ ನಿವಾಸದಲ್ಲಿ, ಸಿಬ್ಬಂದಿಗಳ ಮುಂದೆಯೂ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ತನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ (ಏಜೆನ್ಸೀಸ್).