ದೇಶ

ಆತ್ಮಚರಿತ್ರೆಯಲ್ಲಿ ಸಾವರ್ಕರ್ ಕುರಿತು ವಿಕೃತ ಚಿತ್ರಣ ಆರೋಪ: ಸೋನಿಯಾ ಗಾಂಧಿಗೆ ಲೀಗಲ್ ನೋಟಿಸ್ ಕಳುಹಿಸಿದ ಮೊಮ್ಮಗ | Sonia Gandhi

ಕಾಂಗ್ರೆಸ್ ಅಧಿನಾಯಕಿ ಸೋನಿಯ ಗಾಂಧಿಯವರಿಗೆ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಮೊಮ್ಮಗನ ಮಗ (grandnephew), ಸತ್ಯಕಿ ಸಾವರ್ಕರ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ಮಂಗಳವಾರ(ನ. 24) ವರದಿಯಾಗಿದೆ.

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯ ಗಾಂಧಿಯವರಿಗೆ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಮೊಮ್ಮಗನ ಮಗ (grandnephew), ಸತ್ಯಕಿ ಸಾವರ್ಕರ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ಮಂಗಳವಾರ(ನ. 24) ವರದಿಯಾಗಿದೆ.

ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕೃತಿಯಲ್ಲಿ ಸಾವರ್ಕರ್ ಅವರನ್ನು ವಿಕೃತವಾಗಿ ಚಿತ್ರಿಸಲಾಗಿದೆ ಎಂದು ಮೊಮ್ಮಗ ಸತ್ಯಕಿ ಸಾವರ್ಕರ್ ಆರೋಪಿಸಿದ್ದಾರೆ. ಮತ್ತು ಈ ಸಂಬಂಧ ಬೇಷರತ್ ಕ್ಷಮೆಯಾಚಿಸಿ ಸ್ಪಷ್ಟನೆ ನೀಡಬೇಕು. ಪುಸ್ತಕದಲ್ಲಿ ತಿದ್ದುಪಡಿ ಮಾಡಬೇಕು ಎಂದು ಕೋರಿದ್ದಾರೆ.

ವಕೀಲ ಸಂಗ್ರಾಮ್ ಕೊಲ್ಹಟ್ಕರ್ ನೋಟಿಸ್ ಕಳುಹಿಸಲಾಗಿದ್ದು, ಅದರಲ್ಲಿ ಪುಸ್ತಕದ 201 ಮತ್ತು 443ನೇ ಪುಟಗಳಲ್ಲಿರುವ ಹೇಳಿಕೆಗಳು ವಾಸ್ತವಿಕವಾಗಿ ತಪ್ಪಾಗಿವೆ, ಐತಿಹಾಸಿಕವಾಗಿ ದಾರಿತಪ್ಪಿಸುವಂತಿವೆ. ಮತ್ತು ವಿ.ಡಿ. ಸಾವರ್ಕರ್ ಅವರ ಘನತೆ ಮತ್ತು ಪರಂಪರೆಗೆ ಹಾನಿಯುಂಟುಮಾಡುವಂತಿವೆ ಎಂದು ಆರೋಪಿಸಲಾಗಿದೆ.

ಈ ನೋಟಿಸ್ ಸ್ವೀಕರಿಸಿದ ದಿನದಿಂದ 15 ದಿನಗಳ ಒಳಗಾಗಿ ಬೇಷರತ್ ಕ್ಷಮೆಯಾಚಿಸಿ ಸ್ಪಷ್ಟನೆ ನೀಡಬೇಕು. ಪುಸ್ತಕದಲ್ಲಿ ತಿದ್ದುಪಡಿ ಮಾಡಬೇಕು. ಇಲ್ಲದಿದ್ದರೆ, ಸತ್ಯಕಿ ಸಾವರ್ಕರ್ ಅವರು "ಸೂಕ್ತ ಕಾನೂನು ಕ್ರಮ" ಕೈಗೊಳ್ಳಬಹುದು ಮತ್ತು ಸಮರ್ಥ ನ್ಯಾಯಾಲಯ ಅಥವಾ ಪ್ರಾಧಿಕಾರದ ಮೊರೆ ಹೋಗಬಹುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸೋನಿಯಾ ಗಾಂಧಿ ಬರೆದಿರುವುದೇನು?

ಸೋನಿಯಾ ಗಾಂಧಿಯವರು ತಮ್ಮ ಪುಸ್ತಕದ 201ನೇ ಪುಟದಲ್ಲಿ, ಬ್ರಿಟಿಷ್ ಆಡಳಿತಗಾರರಿಂದ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರು ಹಲ್ಲೆ ಮತ್ತು ಸೆರೆವಾಸವನ್ನು ಅನುಭವಿಸುತ್ತಿದ್ದಾಗ, ವಿನಾಯಕ ದಾಮೋದರ ಸಾವರ್ಕರ್ ಅವರಂತಹ ಆರ್‌ಎಸ್‌ಎಸ್‌ನ ಹಿರಿಯ ಸಿದ್ಧಾಂತಿಗಳು ತಮ್ಮ ವಸಾಹತುಶಾಹಿ ಯಜಮಾನರಿಗೆ ಕ್ಷಮಾದಾನ ಕೋರುವ ಅರ್ಜಿಗಳನ್ನು ಬರೆಯುತ್ತಿದ್ದರು. ಅಲ್ಲದೆ, ಆರ್‌ಎಸ್‌ಎಸ್‌ನ ಸದಸ್ಯರು ಬ್ರಿಟಿಷ್ ಅಧಿಕಾರಿಗಳೊಂದಿಗೆ ಶಾಮೀಲಾಗಿ, ಅವರಿಗೆ ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಬರೆದಿದ್ದಾರೆ.

ಇನ್ನೂ 443ನೇ ಪುಟದಲ್ಲಿ, ಗಾಂಧೀಜಿಯವರ ಸಮಕಾಲೀನರಾಗಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರು ಮಂಡಿಸಿದ ಭಿನ್ನವಾದ ದೃಷ್ಟಿಕೋನವೊಂದು ಭಾರತವನ್ನು ಪ್ರಧಾನವಾಗಿ ಹಿಂದೂಗಳು ಸರ್ವೋಚ್ಚರಾಗಿರುವ ರಾಷ್ಟ್ರವನ್ನಾಗಿ ನೋಡುತ್ತದೆ. 'ಹಿಂದುತ್ವ' ಎಂದು ಕರೆಯಲ್ಪಡುವ ಸಿದ್ಧಾಂತದ ಸ್ಥಾಪಕರಾದ ಸಾವರ್ಕರ್ ಅವರ ಈ ನಿಲುವನ್ನು ಆರ್‌ಎಸ್‌ಎಸ್, ಬಿಜೆಪಿ ಮತ್ತು ದೇಶಾದ್ಯಂತದ ಅವರ ಹಲವಾರು ಅಂಗಸಂಸ್ಥೆಗಳು ಒಟ್ಟಾಗಿ 'ಸಂಘ ಪರಿವಾರ್' ಅಥವಾ 'ಆರೆಸ್ಸೆಸ್ ಕುಟುಂಬ' ಎಂದು ಕರೆಯಲ್ಪಡುವ ದೃಷ್ಟಿಕೋನವನ್ನು ಪ್ರತಿಪಾದಿಸುತ್ತವೆ ಎಂದು ಬರೆದಿದ್ದಾರೆ (ಏಜೆನ್ಸೀಸ್).