Aishwarya Mohanraj Joke On Male Babies 
ದೇಶ

ಪ್ರಣೀತ್ ಮೊರೆ, ಮಧುರ್ ವಿರ್ಲಿ ನಂತ್ರ Aishwarya Mohanraj ಸರದಿ; 'ಗಂಡು ಶಿಶುವಿನ ಬಗ್ಗೆ ಮಾತಾಡಿದ ಹಳೇ ವಿಡಿಯೋ ವೈರಲ್

ಪ್ರಮುಖ ಮುಖ್ಯಾಂಶಗಳು

  • ಪ್ರಣೀತ್​ ಮೋರೆ ನಂತರ, ಮಧುರ್ ವಿರ್ಲಿ ನಂತರ ವಿವಾದಕ್ಕೊಳಗಾದ ಮಹಿಳಾ ಕಾಮಿಡಿಯನ್​
  • ಗಂಡು ಶಿಶುವಿನ ಗುಪ್ತಾಂಗದ ಬಗ್ಗೆ ಮಾತನಾಡಿ ಟ್ರೋಲ್​ಗೆ ಒಳಗಾದ ಐಶ್ವರ್ಯಾ ಮೋಹನ್​ರಾಜ್​
  • ಪುರುಷರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳೋದ್ಯಾಕೆ ಎಂದು ಕಿಡಿಕಾರಿದ ನೆಟ್ಟಿಗರು
Aishwarya Mohanraj Joke On Male Babies: ಪ್ರಣೀತ್​ ಮೋರೆ ನಂತರ, ಮಧುರ್ ವಿರ್ಲಿ ಅವರ ಸ್ಟಾಂಡ್ ಅಪ್​ ಕಾಮೊಡಿ ಶೋನ ವಿಡಿಯೋಗಳು ಟೀಕೆಗೆ ಗುರಿಯಾಗಿತ್ತು. ಈಗದೆ ಸಾಲಿನಲ್ಲಿ ಮತ್ತೊಬ್ಬ ಮಹಿಳಾ ಕಾಮಿಡಿಯನ್​​ನ ವಿಡಿಯೋ ತುಣುಕೊಂದು ಟ್ರೋಲ್​​ಗೆ ಗುರಿಯಾಗಿದೆ. ಹೌದು, ಭಾರತದ ಜನಪ್ರಿಯ ಸ್ಟಾಂಡ್​ಅಪ್​ ಕಾಮಿಡಿಯನ್​ ಬರಹಗಾರ್ತಿ ಹಾಗೂ ಯೂಟ್ಯೂಬರ್​​ ಆದ  ಐಶ್ವರ್ಯಾ ಮೋಹನರಾಜ್  ವಿವಾದಕ್ಕೆ ಗುರಿಯಾಗಿದ್ದಾರೆ.
ತಮ್ಮ ತಾಯಿಗೆ ಗಂಡು ಮಗು ಅಂದರೆ, ಸಹೋದರ ಹುಟ್ಟಿದಾಗ ಅವರ ಭಾವನೆ ಹೇಗಿತ್ತು ಎನ್ನುವ ಬಗ್ಗೆ ಮಾತನಾಡಿದ ಅವರು, ತಮ್ಮ  ತಾಯಿಗೆ ಇದ್ದ ಆಸೆಯೊಂದನ್ನು ತಾವು ಈಡೇರಿಸುವುದಾಗಿ ಕೊಟ್ಟಿರುವ ಹೇಳಿಕೆಯ ವಿಡಿಯೋವೊಂದು ಸದ್ಯ ವೈರಲ್​​ ಆಗಿದೆ. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು  ಮಹಿಳೆಯರು ಹೀಗೆಲ್ಲ ಮಾತನಾಡಿದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳೋದಿಲ್ಲ. ಪುರುಷರು ಹೀಗೆ ಮಾತನಾಡಿದರೆ ಇಷ್ಟೊತ್ತಿಗೆ ಜೈಲಿನಲ್ಲಿರುತ್ತಿದ್ದರು ಎಂದು ಕಿಡಿಕಾರುತ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ? 
ಹಳೆಯ ಕಾಮಿಡಿ ಶೋವೊಂದರಲ್ಲಿ  ಐಶ್ವರ್ಯಾ ಮೋಹನರಾಜ್  ಮಾತನಾಡಿದ್ದು ಹೀಗೆ, ನಾನು ನನ್ನ ತಾಯಿಯ ಬಗ್ಗೆ ಹೇಳಲು ಇಚ್ಚಿಸುತ್ತೇನೆ. ಆಕೆ ಪುರುಷರೆಂದರೆ ತಿರಸ್ಕಾರ ಭಾವನೆ ಹೊಂದಿರುವವಳು. ಅದು ಹೇಗೆ ಎಂದರೆ, ಒಮ್ಮೆ ನನ್ನ ಅಮ್ಮನಿಗೆ ಮಗ ಹುಟ್ಟಿದ್ದ ಅಂದರೆ ನನ್ನ ಸಹೋದರ. ಆಗ ಆಕೆ ಆಸ್ಪತ್ರೆಯಲ್ಲಿ ಜೋರಾಗಿ ಅಳುತ್ತಾ ಕುಳಿತಿದ್ದಳು. ನರ್ಸ್​​ಗೆ ಮಗುವಿನ ಶಿಶ್ನ ಕತ್ತರಿಸಿ ಬಿಡಿ ಎಂದಳು ಆಗ ನರ್ಸ್​​ ಆಗ ಅದನ್ನು ವಿರೋಧಿಸಿದ್ದರು.  ಆದರೆ, ನಾನು ಹಾಗಲ್ಲ. ನನಗೆ ನನ್ನ ತಾಯಿಯೇ ರೋಲ್​ ಮಾಡೆಲ್​​​.. ಅಂದು ಆಕೆ ಈಡೇರಿಸಿಕೊಳ್ಳಲಾಗದ ಕನಸನ್ನು ನಾನು ಆಕೆಗಾಗಿ ನಾನು ಈಡೇರಿಸುತ್ತೇನೆ ಎಂದು ಹೇಳಿದರು. ಅವರ ಈ ಹೇಳಿಕೆಯನ್ನು ವೇದಿಕೆಯಲ್ಲಿದ್ದ  ಪ್ರೇಕ್ಷಕರು ವಿರೋಧ ವ್ಯಕ್ತಪಡಿಸಿಲ್ಲ ಬದಲಾಗಿ ನಕ್ಕರು.

ನೆಟ್ಟಿಗರು ಏನಂದ್ರು? 

ವೇಣಂ ಎಂಬುವವರು ಈ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡು, ಒಬ್ಬ ಪುರುಷನು ತನ್ನ ಮಗಳ ಬಗ್ಗೆ ಇಂತಹ ವಿಕೃತ ಮನಸ್ಥಿತಿ ಎಂದಿಗೂ ಹೊಂದಿರುವುದಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸ್ತ್ರೀವಾದಿ ಎಂದು ಹೇಳಿಕೊಳ್ಳುವ  ಮಹಿಳೆಯರು ಪುರುಷರ ಮೇಲಿನ ದ್ವೇಷದಲ್ಲಿ ಎಷ್ಟು ಕುರುಡರಾಗಿದ್ದಾರೆಂದರೆ ಅವರು ಮಗುವನ್ನು ಸಹ ಬಿಡುವುದಿಲ್ಲ. ಇದು ಸಬಲೀಕರಣವೇ? ಜನರು ಇದನ್ನು ನೋಡಿ ಏಕೆ ನಗುತ್ತಿದ್ದಾರೆ?. ಗಂಡು ಶಿಶುಗಳನ್ನು ನೋಯಿಸುವ ಬಗ್ಗೆ ಮಾತನಾಡುವುದು ಹಾಸ್ಯ ಎನಿಸುತ್ತದೆಯೇ ಎಂದು ಕಿಡಿಕಾರಿದ್ದಾರೆ. 
ಅತ್ಯಾಚಾರ, ಸತ್ತ ಗಂಡು ದೇಹ ಶಿಶ್ನ, ಹಾಗೂ ಜನಾಂಗ ಛೇದನದ ಬಗ್ಗೆ  ಜೋಕ್ ಮಾಡುತ್ತಾ ಮಾತನಾಡುವುದು  ಹೇಗೆ. ಇಲ್ಲ ಏನೋ ತಪ್ಪಾಗಿದೆ. ಇದು ಗಂಭೀರ ವಿಚಾರ. ಆಕೆಯಲ್ಲಿ ಏನೋ ತಪ್ಪಾಗಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಡ್ವೋಕೇಟ್ ಹೋಮಿ ದೇವಾಂಗ್​ ಕಪೂರ್​​ ಎನ್ನುವವರು ಕಾಮೆಂಟ್ ಮಾಡಿದ್ದು,  ಐಶ್ವರ್ಯ ಮೋಹನರಾಜ್ ಅವರು ಮಗನ ಖಾಸಗಿ ಅಂಗಾಗ ವಿರೂಪಗೊಳಿಸುವ ಬಗ್ಗೆ ಹಾಸ್ಯ ಮಾಡುತ್ತಾರೆ. ಇದಕ್ಕೆ ಅಲ್ಲೇ ಕುಳಿತಿರುವ ಜನರು ನಗಾಡುತ್ತಿದ್ದಾರೆ. ಅಕಸ್ಮಾತ್​​  ಒಬ್ಬ ಪುರುಷ ಮಗಳ ಬಗ್ಗೆ ಹೀಗೆ ಮಾತನಾಡಿದರೆ ಹೇಗಾಗುತ್ತದೆ ಎಂದು ಚಿಂತಿಸಿ.  ಪಾಪಾ ಅವನು ತನ್ನ ವೃತ್ತಿಯನ್ನೇ ಕಳೆದುಕೊಳ್ಳುತ್ತಾನೆ.  ಎನ್​ಸಿ ಡಬ್ಲ್ಯೂ, ಮುಂಬೈ ಪೊಲೀಸರಿಗೆ ಟ್ಯಾಗ್​ ಮಾಡಿ ನೀವು ಈ ವಿರುದ್ಧ  ಕ್ರಮ ಕೈಗೊಳ್ಳೋದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ, (ಏಜೆನ್ಸೀಸ್).