ಕೆಂಪು ಕೋಟೆ ಪ್ರದೇಶದಲ್ಲಿ ಹೈ ಅಲರ್ಟ್​ ಘೋಷಣೆ 
ದೇಶ

ಲಷ್ಕರ್-ಎ-ತೊಯ್ಬಾ ಬೆನ್ನಲ್ಲೇ ಈಗ ಖಲಿಸ್ತಾನಿಗಳ ಬೆದರಿಕೆ! ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ | Delhi High Alert

ಪ್ರಮುಖ ಮುಖ್ಯಾಂಶಗಳು

  • ಲಷ್ಕರ್-ಎ-ತೊಯ್ಬಾ ಬೆನ್ನಲ್ಲೇ ಈಗ ಖಲಿಸ್ತಾನಿಗಳ ಬೆದರಿಕೆ
  • ದೆಹಲಿಯ ಕೆಂಪು ಕೋಟೆ ಮತ್ತು ಸಚಿವಾಲಯದ ಮೇಲೆ ಬಾಂಬ್​ ಬೆದರಿಕೆ
  • ದೆಹಲಿಯಾದ್ಯಂತ ಹೈ ಅಲರ್ಟ್​ ಘೋಷಣೆ
  • ಪೊಲೀಸರಿಂದ ಮುಂದುವರಿದ ಶೋಧ ಕಾರ್ಯ
ನವದೆಹಲಿ: ನವದೆಹಲಿಯಲ್ಲಿರುವ ಕೆಂಪು ಕೋಟೆ ಮತ್ತು ದೆಹಲಿ ಸಚಿವಾಲಯಗಳ ಮೇಲೆ ಬಾಂಬ್ ದಾಳಿ ನಡೆಸುವ ಬೆದರಿಕೆ ಇಮೇಲ್​ಗಳು ಬಂದಿದ್ದು, ದೆಹಲಿಯಾದ್ಯಂತ ಹೈ ಅಲರ್ಟ್ (Delhi High Alert) ಘೋಷಣೆ ಮಾಡಲಾಗಿದೆ.
ಮಾಹಿತಿಗಳ ಪ್ರಕಾರ, ಈ ಬೆದರಿಕೆಯು ಖಲಿಸ್ತಾಲಿ ಪ್ರತ್ಯೇಕವಾದಿ ಗುಂಪುಗಳಿಂದ ಬಂದಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಸಚಿವಾಲಯದ ಸುತ್ತ-ಮುತ್ತ ಶೋಧಕಾರ್ಯವನ್ನು ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.

ಗುಪ್ತಚರ ಮಾಹಿತಿ ನಂತರ ದೆಹಲಿ ಹೈ ಅಲರ್ಟ್​

ಕೆಂಪು ಕೋಟೆ ಪ್ರದೇಶದ ಬಳಿ ಸಂಭಾವ್ಯ ಭಯೋತ್ಪಾದಕ ಬೆದರಿಕೆಯ ಬಗ್ಗೆ ಗುಪ್ತಚರ ವರದಿ ದೊರೆತ ನಂತರ ದೆಹಲಿಯಾದ್ಯಂತ ಹೈ ಅಲರ್ಟ್​ನ್ನು ಘೋಷಿಸಲಾಗಿದ್ದು, ಕೆಂಪು ಕೋಟೆ, ಚಾಂದನಿ ಚೌಕ್ ರಸ್ತೆ ಹಾಗೂ ದೆಹಲಿಯಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ.
ಈ ಮೊದಲು ರಾಷ್ಟ್ರ ರಾಜಧಾನಿಯಲ್ಲಿ ಐಇಡಿ ದಾಳಿಯನ್ನು ನಡೆಸಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಯೋಜನೆಯನ್ನು ರೂಪಿಸುತ್ತಿದೆ ಎಂಬ ಗುಪ್ತಚರ ಮಾಹಿತಿ ದೊರೆತಿತ್ತು, ಈಗ ಖಲಿಸ್ತಾನಿಗಳಿಂದ ಸಹ ಬೆದರಿಕೆ ಬಂದ ಹಿನ್ನಲೆ ಎರಡೂ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದರೆ.
ಈ ಬೆದರಿಕೆಗಳಿಗೆ ಪ್ರತಿಕ್ರಿಯೆ ಎಂಬತ್ತೆ ದೆಹಲಿಯಾದ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಸಾರ್ವಜನಿಕರು ಸದಾ ಕಾಲ ಜಾಗರೂಕರಾಗಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸರಲ್ಲಿ ವರದಿ ಮಾಡುವಂತೆ ತಿಳಿಸಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ನಿರ್ಣಾಯಕ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

8 ಶಂಕಿತ ಭಯೋತ್ಪಾದಕರ ಬಂಧನ

ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸೆಗಲು ಯೋಜನೆ ರೂಪಿಸುತ್ತಿದ್ದ ಶಂಕೆಯ ಮೇಲೆ 8 ಜನ ಭಯೋತ್ಪಾದಕರನ್ನು ದೆಹಲಿ ಪೊಲೀಸರು ಭಾನುವಾರ (ಫೆ.22) ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಪಾಕಿಸ್ತಾನದ ಲಷ್ಕರ್​-ಎ-ತೊಯ್ಬಾ ಮತ್ತು ಬಾಂಗ್ಲಾದೇಶದ ಉಗ್ರಗಾಮಿ ಗುಂಪಿನೊಂದಿಗೆ ಸಂಪರ್ಕ ಹೊಂದಿರುವುದಾಗಿ ಮಾಹಿತಿ ದೊರೆತಿದೆ. ಬಂಧಿತರಿಂದ 8 ಮೊಬೈಲ್​ ಫೋನ್​, 16 ಸಿಮ್​ ಕಾರ್ಡ್​ ಮತ್ತು ಧಾರ್ಮಿಕ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆಂಪು ಕೋಟೆ ಸ್ಫೋಟ ಘಟನೆ

ನವೆಂಬರ್ 10 ರ ಸಂಜೆ, ಲಾಲ್ ಕ್ವಿಲಾ ಮೆಟ್ರೋ ನಿಲ್ದಾಣದ ಬಳಿ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ i20 ಕಾರಿನಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ 15 ಜನರು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು ಹಲವಾರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ,(ಏಜನ್ಸೀಸ್​).