ಆರ್‌ಪಿಎಫ್ ಸಿಬ್ಬಂದಿ ಮೇಲೆ ರೇಜರ್‌ನಿಂದ ದಾಳಿ ನಡೆಸಿದ ನಟಿ ಅಂತಾರಾ ಬ್ಯಾನರ್ಜಿ 
ದೇಶ

ರೈಲಿನಲ್ಲಿ ನಟಿ ರಂಪಾಟ: ಸೀಟ್​ ಬಿಟ್ಟುಕೊಡಲು ಹೇಳಿದಕ್ಕೆ RPF ಮೇಲೆ ರೇಜರ್​ ದಾಳಿ; ಅಂತಾರಾ ಬ್ಯಾನರ್ಜಿ ವಿರುದ್ಧ FIR! Antara Banerjee

ಪ್ರಮುಖ ಮುಖ್ಯಾಂಶಗಳು

  • ರೈಲಿನಲ್ಲಿ ಸೀಟ್ ವಿಚಾರಕ್ಕೆ ನಟಿ ಹೈಡ್ರಾಮಾ
  • ಆರ್‌ಪಿಎಫ್ ಸಿಬ್ಬಂದಿ ಮೇಲೆ ರೇಜರ್‌ನಿಂದ ದಾಳಿ ನಡೆಸಿದ ನಟಿ ಅಂತಾರಾ ಬ್ಯಾನರ್ಜಿ
  • ಅಂತಾರಾ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲು
ಮುಂಬೈ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಮೇಲೆ ರೇಜರ್​ ಮೂಲಕ ದಾಳಿ ನಡೆಸಿದ ಆರೋಪದಲ್ಲಿ ನಟಿ, ಮಾಡೆಲ್​ ಅಂತಾರಾ ಬ್ಯಾನರ್ಜಿ (Antara Banerjee) ವಿರುದ್ಧ ಪ್ರಕರಣ ದಾಖಲಾಗಿದೆ.
ಆಗಸ್ಟ್​ 12 ರಂದು ಅರಾವಳಿ ಎಕ್ಸ್​​ಪ್ರೆಸ್ ಮೂಲಕ, ಸೂರತ್​ಗೆ ಪ್ರಯಾಣ ಬೆಳೆಸಿದ್ದ ನಟಿ, ಸ್ಲೀಪರ್​ ಕೋಚ್​ನ ಟಿಕೆಟ್​ ಹೊಂದಿದ್ದು, ಎಸಿ ಬೋಗಿಯಲ್ಲಿ ಪ್ರಯಾಣಕ್ಕೆ ಮುಂದಾಗಿದ್ದಾಳೆ. ಆಗ ಆಕೆಯನ್ನು ತಡೆಯಲು ಮುಂದಾದ ರೈಲ್ವೆ ಪೊಲೀಸರ ಮೇಲೆ ರೇಜರ್​ ಮೂಲಕ ನಟಿ ದಾಳಿ ನಡೆಸಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಪ್ರಕರಣ?

ಮಾಹಿತಿ ಪ್ರಕಾರ, ಈ ಘಟನೆಯು ಬೋರಿವಲಿ ಮತ್ತು ಧಾಹಾನು ನಿಲ್ದಾಣದ ನಡುವೆ ರಾತ್ರಿ ಸುಮಾರು 9.30 ರಿಂದ 10 ಗಂಟೆಗೆ ನಡೆದಿದೆ. ಕೇವಲ ಸ್ಲೀಪರ್​ ಟಿಕೆಟ್​ ಹೊಂದಿದ್ದ ನಟಿ ಅಂತಾರಾ ಬ್ಯಾನರ್ಜಿ, ಎಸಿ ಬೋಗಿಯಲ್ಲಿ ಪ್ರಯಾಣ ಆರಂಭಿಸಿದ್ದಾರೆ.
ಆದರೆ, ಆ ಎಸಿ ಸೀಟ್​ ಬುಕ್​ ಮಾಡಿದ್ದ ಪ್ರಯಾಣಿಕರು ಅಲ್ಲಿಗೆ ಬಂದು, ಅಂತಾರಾಗೆ ಸೀಟ್​ ಬಿಟ್ಟುಕೊಡುವಂತೆ ಕೇಳಿದ್ದಾರೆ. ಇದಕ್ಕೆ ಆಕೆ ಒಪ್ಪದೆ ಜಗಳ ಮಾಡಿದಾಗ, ಅವರು ಟಿಕೆಟ್​ ಕಲೆಕ್ಟರ್​​ ಹಾಗೂ ಆರ್​​ಪಿಎಫ್​​ಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಈ ಕುರಿತು ವಿಚಾರಣೆ ನಡೆಸಿದ ಟಿಸಿ ಹರಿಕೇಶ್ ತ್ರಿಪಾಠಿ, ಹಾಗೂ ಆರ್​ಪಿಎಫ್​ ಸಬ್​-ಇನ್ಸ್​ಪೆಕ್ಟರ್​​ ಯಾಮಿನಿಕಾಂತ್ ಮಿಶ್ರಾ ಮತ್ತು ಕಾನ್ ಸ್ಟೇಬಲ್ ರಾಜೇಶ್ ಕುಮಾರ್ ಅಂತಾರಾಳಿಗೆ ಸೀಟ್​ ಬಿಟ್ಟುಕೊಟ್ಟು, ತಮ್ಮ ಸ್ಲೀಪರ್​ ಬೋಗಿಗೆ ಹೊರಡಲು ಹೇಳಿದ್ದಾರೆ.


ಅದರೆ, ಇದರಿಂದ ಕುಪಿತಗೊಂಡ ನಟಿ, ಟಿಸಿ ಮತ್ತು ಆರ್​ಪಿಎಫ್​ ಅಧಿಕಾರಿಗಳಿಗೆ ಅವಾಚ್ಯ ಪದಗಳಲ್ಲಿ ನಿಂದಿಸಿದ್ದಾಳೆ. ನಂತರ ತನ್ನ ಬಟ್ಟೆ ಬಿಚ್ಚಲು ಶುರುವಿಟ್ಟಾಗ, ಆಕೆಯನ್ನು ತಡೆಯಲು ಮುಂದಾದ ಯಾಮಿನಿಕಾಂತ್ ಮಿಶ್ರಾ ಅವರ ಮೇಲೆ ರೇಜರ್ ಮೂಲಕ ಹಲ್ಲೆ ನಡೆಸಿದ್ದು, ಅವರ ಮೊಬೈಲ್​ನ್ನು ಆಕೆ ಒಡೆದಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಎಸ್ಕೇಪ್ ಆಗಲು ವಿಫಲ ಯತ್ನ!

ರೇಜರ್​ ದಾಳಿ ನಡೆಸಿ ನಟಿ ಓಡಿಹೋಗಲು ಯತ್ನಿಸಿದಾಗ, ಎಸಿ ಕೋಚ್​​ನ ಎಲ್ಲಾ ಬಾಗಿಲನ್ನು ಲಾಕ್​ ಮಾಡಲಾಗಿದೆ. ನಂತರ ನಟಿಯನ್ನು ಬಂಧಿಸಿ ಬೋರಿವಲಿ ಠಾಣೆಗೆ ಕರೆದೊಯ್ದು ಎಫ್​ಐಆರ್​ ದಾಖಲಿಸಲಾಗಿದೆ. ಆದರೆ ಇಂದು (ಸೋಮವಾರ, ಆ.16) ನಟಿ ಜಾಮೀನು ಪಡೆದಿದ್ದಾರೆಂದು ತಿಳಿದುಬಂದಿದೆ, (ಏಜನ್ಸೀಸ್​).