ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿಜಯ್ 
ದೇಶ

ತಮಿಳುನಾಡು ಚುನಾವಣೆ ಮೇಲೆ ನಟ ದಳಪತಿ ವಿಜಯ್ ಪ್ರಭಾವ ಬೀರುತ್ತಾರೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ | Nirmala Sitharaman

ಪ್ರಮುಖ ಮುಖ್ಯಾಂಶಗಳು

  • ಹೊಸ ಪಕ್ಷ ಕಟ್ಟಿ ರಾಜಕೀಯಕ್ಕೆ ಧುಮುಕಿರುವ ನಟ ದಳಪತಿ ವಿಜಯ್
  • ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಪ್ರಭಾವ ಬೀರುತ್ತಾರೆ
  • ಯಾವ ಪಕ್ಷದ ಮತಗಳಿಸಿ ಹಾನಿ ಮಾಡ್ತಾರೋ ಕಾದು ನೋಡಬೇಕು
ನವದೆಹಲಿ: ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಹೊಸದಾಗಿ ಪಕ್ಷ ಕಟ್ಟಿ ರಾಜಕೀಯಕ್ಕೆ ಧುಮುಕಿರುವ ಸೂಪರ್ ಸ್ಟಾರ್ ದಳಪತಿ ವಿಜಯ್, ಚುನಾವಣೆಯಲ್ಲಿ ಪ್ರಭಾವ ಬೀರುತ್ತಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಎನ್‌ಡಿಟಿವಿ ಪ್ರಾಫಿಟ್ ಕಾನ್ಕ್ಲೇವ್‌ನಲ್ಲಿ ಮಾತನಾಡಿರುವ ಅವರು, ದಳಪತಿ ವಿಜಯ್ ಖಂಡಿತವಾಗಿ ಚುನಾವಣೆ ಮೇಲೆ ಪ್ರಭಾವ ಬೀರುತ್ತಾರೆ. ಆದರೆ ಎಷ್ಟರ ಮಟ್ಟಿಗೆ ಯಾವ ಪಕ್ಷಗಳ ಮತಗಳನ್ನು ಕಸಿದುಕೊಂದು ಹಾನಿ ಮಾಡುತ್ತಾರೋ, ಮಹಿಳಾ ಮತಗಳನ್ನು ಕಸಿದುಕೊಳ್ಳುತ್ತಾರೋ ಇಲ್ಲವೋ ಮುಂದೆ ನೋಡೋಣ ಎಂದಿದ್ದಾರೆ.
ವಿಶೇಷವಾಗಿ ಡಿಎಂಕೆ ಎಲ್ಲಾ ಬೆಂಬಲಿಗರ ಜೊತೆ ಮಹಿಳೆಯರ ಮತಗಳನ್ನು ಪಡೆಯುತ್ತಾರಾ?,  ತಮಿಳುನಾಡು ರಾಜಕೀಯದಲ್ಲಿ ಮಹಿಳೆಯರು ತುಂಬಾ ಶಕ್ತಿಶಾಲಿ ಧ್ವನಿಯನ್ನು ಹೊಂದಿದ್ದಾರೆ. ಪ್ರಬಲ ನಿರ್ಧಾರ ತೆಗೆದುಕೊಳ್ಳುವ ಪಾತ್ರದಲ್ಲಿದ್ದಾರೆ. ಹಾಗಾಗಿ ಮುಂದಿನ ಚುನಾವಣೆ ತುಂಬಾ ಆಸಕ್ತಿದಾಯಕ ಎಂದು ನಾನು ಭಾವಿಸುತ್ತೇನೆ ಎಂದ ತಿಳಿಸಿದ್ದಾರೆ.
ಹಾಗೆಯೇ ಮುಂದುವರೆದು ಡಿಎಂಕೆಗೆ ಈ ಬಾರಿಗೆ ಎನ್​ಡಿಎ ಮೈತ್ರಿಕೂಟ ಪ್ರಬಲ ಪೈಪೋಟಿ ನೀಡಲಿದೆ. ಬೃಹತ್ ಎನ್​ಡಿಎ ಒಕ್ಕೂಟವನ್ನು ನೋಡಿ ಆಡಳಿತಾರೂಢ ಡಿಎಂಕೆಗೆ ಗೆಲುವಿನ ಬಗ್ಗೆ ಆತ್ಮವಿಶ್ವಾಸದಿಂದಿರಲು ಸಾಧ್ಯವಿಲ್ಲ. ಕಳೆದ ಒಂದು ವರ್ಷದಲ್ಲಿ ಅವರ ನಡವಳಿಕೆ ಅವರು ಸಂಪೂರ್ಣವಾಗಿ ನರಗಳಾಗಿರುವುದನ್ನು ತೋರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಡಿಎಂಕೆ ಮಂತ್ರಿಗಳಿಂದ ಬಂದಿರುವ ಕಮೆಂಟ್​ಗಳು, ಉಚಿತ ಕೊಡುಗೆ, ದೇವಾಲಯ ಬೇಟಿ ಇತ್ಯಾದಿಗಳನ್ನು ಎದುರಿಸಲು ಸಿಎಂ ಸ್ಟಾಲಿನ್ ನೇತೃತ್ವದ ಡಿಎಂಕೆ ಹೆದರುತ್ತಿದೆ. ತಮಿಳುನಾಡು ಮತ್ತು ಅದರ ಅಭಿವೃದ್ಧಿಯ ಬಗ್ಗೆ ಮಾತನಾಡುವುದರಿಂದ ಮಾತ್ರ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ಅದು ಡಿಎಂಕೆಯ ಮಿತಿಗಳಲ್ಲಿ ಒಂದು. ಅದರ ಅರಿವು ಡಿಎಂಕೆ ಪಕ್ಷಕ್ಕೆ ಇದೆ ಎಂದಿದ್ದಾರೆ (ಏಜೆನ್ಸೀಸ್).