ನಿತೇಶ್ ರಾಣೆ ಮತ್ತು ಅಮಿರ್ ಖಾನ್ ದಂಪತಿ 
ದೇಶ

ಅಮಿರ್ ಖಾನ್ ಮೂರನೇ ಮದುವೆ ಲವ್ ಜಿಹಾದ್; ವಿವಾದಾತ್ಮಕ ಹೇಳಿಕೆ ನೀಡಿದ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ | Nitesh Rane

ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ಅವರು ತಮ್ಮ ಗೆಳತಿ ಗೌರಿ ಸ್ಪ್ರಾಟ್ ಜೊತೆ ಮೂರನೇ ಮದುವೆಯಾಗಿರುವುದನ್ನು ಲವ್ ಜಿಹಾದ್ ಎಂದು ಕರೆದಿರುವ ಮಹಾರಾಷ್ಟ್ರ ಬಿಜೆಪಿ ಸಚಿವ ನಿತೇಶ್ ರಾಣೆ(Nitesh Rane), ಅಮಿರ್ ಖಾನ್ ಲವ್ ಜಿಹಾದ್​ನ ಬ್ರಾಂಡ್ ರಾಯಭಾರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಂಬೈನಲ್ಲಿ ಮಾತನಾಡಿರುವ ಅವರು, ಅಮೀರ್ ಖಾನ್ ಅವರ ವೈಯಕ್ತಿಕ ನಿರ್ಧಾರಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಹಿಂದೂ ಸಮಾಜ, ವಿಶೇಷವಾಗಿ ಯುವಕರು ಅಂತಹ ಜನರನ್ನು ಮಾದರಿಗಳಾಗಿ ತೆಗೆದುಕೊಳ್ಳಬಾರದು. ಯುವಕರು ಅವರ ಚಿತ್ರಗಳನ್ನು ನೋಡಬೇಕೇ? ಅಥವಾ ಬೇಡವೇ ಎಂಬುದನ್ನು ಯೋಚಿಸಬೇಕು ಎಂದಿದ್ದಾರೆ.
ಲವ್ ಜಿಹಾದ್‌ನ ಪ್ರವರ್ತಕ ಯಾರು? ಅಮೀರ್ ಖಾನ್ ಅವರಲ್ಲಿ ಒಬ್ಬರೇ? ಅಂತಹ ನಟರ ಚಲನಚಿತ್ರಗಳನ್ನು ನೋಡಬೇಕೆ ಅಥವಾ ಬೇಡವೇ ಎಂಬುದನ್ನು ಹಿಂದೂ ಸಮಾಜ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.
ನಟ ಅಮಿರ್ ಖಾನ್ ಈ ಹಿಂದೆ ರೀನಾ ದತ್ತ ಮತ್ತು ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಇಬ್ಬರ ಜೊತೆ ತಲಾ 16 ವರ್ಷ ಸಂಸಾರ ಮಾಡಿದ ಬಳಿಕ ವಿಚ್ಚೇದನ ಪಡೆದುಕೊಂಡಿದ್ದರು. ಇತ್ತೀಚೆಗೆ ಗೌರಿ ಸ್ಪ್ರಾಟ್ ಜೊತೆ ಮೂರನೇ ಮದುವೆಯಾಗಿದ್ದಾರೆ. ಇನ್ನೂ ರಾಣೆ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಆಗುತ್ತಿದೆ (ಏಜೆನ್ಸೀಸ್).