Aamir Khan to produce documentary on President Droupadi Murmu
- ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಕ್ಷ್ಯ ಚಿತ್ರ ನಿರ್ಮಿಸಲು ಅಮೀರ್ ಖಾನ್ ಸಜ್ಜು
- ಚಲನಚಿತ್ರ ನಿರ್ಮಾಪಕಿ-ಲೇಖಕಿ ಸ್ವಾತಿ ಚಕ್ರವರ್ತಿ ಭಟ್ಕಳ್ ನಿರ್ದೇಶನ
- ಬುಡಕಟ್ಟು ಸಮುದಾಯದ ರಾಷ್ಟ್ರಪತಿ ಮುರ್ಮು ಅವರ ಜೀವನ ಚರಿತ್ರೆ ನಿರ್ಮಿಸಲು ಮುಂದು
Aamir Khan to produce documentary on President Droupadi Murmu: ಲಗಾನ್, ದಂಗಲ್, ತಾರೆ ಜಮೀನ್ ಪರ್, ಲಾಪತಾ ಲೇಡೀಸ್ ಸಿನಿಮಾಗಳನ್ನು ನಿರ್ದೇಶಿಸಿ ಬ್ಲಾಕ್ ಬಸ್ಟರ್ ಹಿಟ್ ಕಂಡುಕೊಂಡಿದ್ದ ಅಮೀರ್ ಖಾನ್ ಪ್ರೊಡಕ್ಷನ್ ಸದ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಾಕ್ಷ್ಯ ಚಿತ್ರವನ್ನು ನಿರ್ಮಿಸಲು ಸಜ್ಜಾಗುತ್ತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನ ಕೇವಲ ರಾಜಕೀಯ ಕತೆಯಲ್ಲ. ಇದರ ಹಿಂದೆ ಪರಿಶ್ರಮ, ಸಾಧನೆ, ಸಮಸ್ಯೆಗಳ ಸರಮಾಲೆಯುಂಟು. ಒಬ್ಬ ಬುಡಕಟ್ಟು ಸಮುದಾಯದ ಮಹಿಳೆ ಮೊದಲ ಬಾರಿ ದೇಶದ ಉನ್ನತಮಟ್ಟದ ಸ್ಥಾನಕ್ಕೆ ಏರುವುದು. ಜೊತೆಗೆ ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ಹೊರಹೊಮ್ಮಿರುವುದು, ಸುಲಭದ ಹಾದಿಯಲ್ಲ ಎನ್ನುವುದನ್ನು ಈ ಸಾಕ್ಷ್ಯ ಚಿತ್ರದಲ್ಲಿ ಕಟ್ಟಿಕೊಡಲಾಗುತ್ತದೆ ಎನ್ನುವುದಾಗಿ ವರದಿ ಮಾಡಲಾಗಿದೆ.
ಹೇಗಿರಲಿದೆ ಡಾಕ್ಯುಮೆಂಟರಿ
ದ್ರೌಪತಿ ಮುರ್ಮು ಅವರು ಹುಟ್ಟಿದ್ದು ಒಡಿಶಾದ ಒಂದು ಸಣ್ಣ ಹಳ್ಳಿಯಲ್ಲಿನ ಬುಡಕಟ್ಟು ಸಮುದಾಯದ ಮಹಿಳೆ ಮೊದಲ ಬಾರಿಗೆ ರಾಷ್ಟ್ರಪತಿಯಾದದ್ದು, ಹಾಗೇಯೇ ಎರಡನೇ ಮಹಿಳಾ ರಾಷ್ಟ್ರಪತಿ ಹುದ್ದೆಗೇರಿದ ಸ್ಥಾನದ ಕತೆಯು ಕೇವಲ ರಾಜಕೀಯ ಸಾಧನೆಯಲ್ಲ. ಉನ್ನತ ಹುದ್ದೆಗೇರಿದರ ಹಿಂದೆ ಅವರ ದೀರ್ಘಕಾಲದ ಪರಿಶ್ರಮ, ಆತ್ಮವಿಶ್ವಾಸ, ಬುಡಕಟ್ಟು ಸಮುದಾಯಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಿಂಬಿಸುತ್ತದೆ.
ಇಷ್ಟೇ ಅಲ್ಲದೆ, ಅವರ ಈ ಸಾಧನೆ ಸಮಾಜದಲ್ಲಿರುವ ಹಿಂದುಳಿದ ಕುಟುಂಬಗಳಿಗೆ ನೀಡುವ ಸ್ಥೈರ್ಯ ಹಾಗೂ ಬುಡಕಟ್ಟು ಸಮುದಾಯದ ಜನರಿಗೆ ನೀಡುವ ಹೊಸ ಭರವಸೆ ಸಂಕೇತವಾಗಿದೆ. ಇವೆಲ್ಲವು ಜನರ ಕಣ್ಣಿಗೆ ಕಟ್ಟುವಂತೆ ನಿರ್ಮಿಸುವುದು..ಕಾಲ ಕಾಲಕ್ಕೂ ನೆನಪಿಟ್ಟುಕೊಳ್ಳುವಂತೆ ಮಾಡುವುದು ಸಾಕ್ಷ್ಯ ಚಿತ್ರದ ನಿರ್ಮಾಣದ ಉದ್ದೇಶವಾಗಿದೆ ಎನ್ನಲಾಗಿದೆ.
ನಿರ್ದೇಶನ ಯಾರದ್ದು?
2019ರಲ್ಲಿ ಚಲನಚಿತ್ರ ನಿರ್ಮಾಪಕಿ-ಲೇಖಕಿ ಸ್ವಾತಿ ಚಕ್ರವರ್ತಿ ಭಟ್ಕಳ್ ಅವರು ರುಬಾರು ರೋಶ್ನಿ ಹಿಂದಿ ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸಿದ್ದರು. ಸೂಪರ್ ಹಿಟ್ ಆಗಿತ್ತು, ಇದು ಅಪರಾಧದ ಕತೆಗಳು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಜನರು ಹೇಗೆ ಅಪರಾಧಿಗಳನ್ನು ಕ್ಷಮಿಸಿ ಮುನ್ನಡೆಯುತ್ತಾರೆ ಎನ್ನುವುದು ಚಿತ್ರದಲ್ಲಿ ಇದೆ, ಈ ಸಿನಿಮಾವನ್ನು ಅಮೀರ್ ಖಾನ್ ಮತ್ತು ಕಿರಣ್ ರಾವ್ ನಿರ್ಮಿಸಿದ್ದರು. ಸದ್ಯ ದ್ರೌಪದಿ ಅವರ ಸಾಕ್ಷ್ಯ ಚಿತ್ರವನ್ನು ಸಹ ಸ್ವಾತಿ ಅವರೇ ನಿರ್ದೇಶಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಸಾಕ್ಷ್ಯಚಿತ್ರವು ಅಧ್ಯಕ್ಷ ಮುರ್ಮು ಅವರ ಜೀವನದ ಖಾಸಗಿ, ರಾಜಕೀಯ, ಶಿಕ್ಷಣ ಸೇರಿದಂತೆ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುವ ಎರಡನೇ ಮಹಿಳೆಯಾಗುವ ಮೊದಲು ಅವರು ಎದುರಿಸಿದ ಸವಾಲುಗಳನ್ನು, ವೈಯಕ್ತಿಕ ತೊಳಲಾಟ, ಬದುಕಿನ ಕಷ್ಟದ ಹಾದಿ, ನಷ್ಟ, ಹಿನ್ನಡೆ ಸೇರಿದಂತೆ ವಿವಿಧ ಆಯಾಮದಲ್ಲಿ ಸಿನಿಮಾದಲ್ಲಿ ಚಿತ್ರೀಕರಿಸಲಾಗುತ್ತದೆ ಎನ್ನಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ವಿಚಾರಕ್ಕೆ ಹೆಸರುವಾಸಿ. ಅವರನ್ನು ಬುಡಕಟ್ಟು ಜನಾಂಗದವರ ಸ್ಪೂರ್ತಿಯ ಸೆಲೆಯಾಗಿ ನೋಡಲಾಗುತ್ತದೆ.
ಅಮೀರ್ ಪ್ರೊಡಕ್ಷನ್ನ ಇತ್ತೀಚಿನ ಸಿನಿಮಾ
ಇತ್ತೀಚೆಗೆ ಮೇನಲ್ಲಿ ರಿಲೀಸ್ ಆದ ಏಕ್ ದಿನ್ ಸಿನಿಮಾವನ್ನು ಅಮೀರ್ ಖಾನ್ ನಿರ್ಮಿಸುದ್ದರು. ಜುನೈದ್ ಖಾನ್ ಅಮೀರ್ ಖಾನ್ರ ಪುತ್ರ ಮತ್ತು ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.ಸಾಯಿ ಪಲ್ಲವಿ ಅವರ ಹಿಂದಿ ಚಿತ್ರರಂಗದ ಪದಾರ್ಪಣೆಗೆ ಸಾಕ್ಷಿಯಾಗಿದ್ದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದು ಕೇವಲ 5.1 ಕೋಟಿ ಎನ್ನಲಾಗಿದೆ.