ವೃದ್ಧ ತಾಯಿಯನ್ನು ಬೆನ್ನಿಗೆ ಕಟ್ಟಿಕೊಂಡು ಹೋಗುವ ದೃಶ್ಯ
- ವೃದ್ಧ ತಾಯಿಯನ್ನು ಸೈಕಲ್‌ನಲ್ಲಿ ಬೆನ್ನಿಗೆ ಕಟ್ಟಿಕೊಂಡ ಮಗನ ವಿಡಿಯೊ ವೈರಲ್
- 'ಹೆತ್ತವರ ಸೇವೆಗೆ ಹಣವಲ್ಲ, ಪ್ರೀತಿ ಸಾಕು' ಎಂಬ ಸಂದೇಶ ಸಾರಿದ ದೃಶ್ಯ
- ಕಲಿಯುಗದ 'ಶ್ರವಣಕುಮಾರ' ಎಂದು ಕೊಂಡಾಡಿದ ನೆಟ್ಟಿಗರು
Son ties mother to bicycle:
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊವೊಂದು ನೆಟ್ಟಿಗರ ಮನಸ್ಸು ಮುಟ್ಟಿದೆ. ವ್ಯಕ್ತಿಯೊಬ್ಬ ವಯಸ್ಸಾದ ತಾಯಿಯನ್ನು ಸೈಕಲ್‌ನಲ್ಲಿ ಕರೆದೊಯ್ಯುವಾಗ, ಆಕೆ ಕೆಳಗೆ ಬೀಳದಂತೆ ಬಟ್ಟೆಯಿಂದ ತನ್ನ ಬೆನ್ನಿಗೆ ಕಟ್ಟಿಕೊಂಡು ಹೋಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದೆ.
ಎನ್ನುವ ಎರಡಕ್ಷರದ ಶಕ್ತಿಯೇ ಅಂಥದ್ದು. ಇಂದು ನಾವು ಏನಾಗಿದ್ದೆವೋ ಎಲ್ಲದ ಹಿಂದೆಯೂ ಅಮ್ಮನ ನೆರಳು ಇದ್ದೆ ಇದೆ. ಕನ್ನಡದ ಖ್ಯಾತ ಸಾಹಿತಿ ಪಿ.ಲಂಕೇಶರು ಬರೆಯುತ್ತಾರೆ; ಬನದ ಕರಡಿಯ ಹಾಗೆ ಚಿಕ್ಕ ಮಕ್ಕಳ ಹೊತ್ತು ಗಂಡನ್ನ ಸಾಕಿದಳು. ಕಾಸು ಗಂಟಿಕ್ಕಿದಳು ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು; ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ: ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ! ಎನ್ನುವಂತೆ. ಏನೇಲ್ಲಾ ಬಡತನ-ಬೇಗೆಗಳಿದ್ದರೂ ಯಾವುದನ್ನು ತೋರಗೊಡದೆ ಮಕ್ಕಳನ್ನು ಕಂಕುಳಲ್ಲಿ ಹೊತ್ತು ಬದುಕು ಸವೆಸುವಳು ಅಮ್ಮ.
ಏನೇ ಕಷ್ಟಗಳಿದ್ದರೂ ತಾನೆತ್ತ ಕೂಸುಗಳನ್ನು ಕೈ ಬೀಡದ ಅಮ್ಮನನ್ನು, ಮಕ್ಕಳು ದೊಡ್ಡವರಾದ ಬಳಿಕ ಕಾರಣ ಹೇಳದೆ ಮುಪ್ಪಿನ ಕಾಲದಲ್ಲಿ ಆಕೆಯನ್ನು ಜೋಪಾನ ಮಾಡುವುದು ನಿಜಕ್ಕೂ ಮನುಷ್ಯತ್ವ. ಅದರಂತೆಯೇ ಬಾಲ್ಯದಲ್ಲಿ ತಾಯಿ ತನ್ನ ಮಗನ ಬೆರಳು ಹಿಡಿದು ನಡೆಯಲು ಕಲಿಸಿದ್ದಳು. ಇಂದು ಅದೇ ಮಗ, ವಯಸ್ಸಾದ ತಾಯಿಯನ್ನು ತನ್ನ ಸೈಕಲ್‌ನಲ್ಲಿ ಕರೆದೊಯ್ದು ಬದುಕಿನ ಇಳಿಸಂಜೆಯಲ್ಲಿ ಆಕೆಗೆ ಆಸರೆಯಾಗಿದ್ದಾನೆ.
ತಾಯಿಯನ್ನು ತನ್ನ ಬೆನ್ನಿಗೆ ಕಟ್ಟಿಕೊಂಡ ಮಗ
ಹೆತ್ತವರ ಸೇವೆ ಮಾಡಲು ಆಸ್ತಿ-ಅಂತಸ್ತು ಬೇಕಾಗಿಲ್ಲ
ಈ ವಿಡಿಯೊ ಮತ್ತೊಂದು ಮಹತ್ವದ ಮೆಸೇಜ್ ಹೇಳುತ್ತೆ, ಹೆತ್ತವರ ಸೇವೆ ಮಾಡಲು ಆಸ್ತಿ-ಅಂತಸ್ತು ಬೇಕಾಗಿಲ್ಲ, ನಿಜವಾದ ಪ್ರೀತಿ, ಗೌರವ ಮತ್ತು ಅಕ್ಕರೆಯಿಂದ ನೋಡಿಕೊಳ್ಳುವ ಮನಸ್ಸಿದ್ದರೆ ಸಾಕು. ಅಂತಹ ಮಕ್ಕಳೇ ಅಮ್ಮನ ನಿಜವಾದ ಸಂಪತ್ತು.
ಕಲಿಯುಗದ 'ಶ್ರವಣಕುಮಾರ'
ಈ ವಿಡಿಯೊ ನೋಡಿದ ಅನೇಕರು ಆ ಮಗನ್ನು ಕಲಿಯುಗದ 'ಶ್ರವಣಕುಮಾರ' ಅಂತ ಕೊಂಡಾಡಿದ್ದಾರೆ. ಇಂತಹ ಮಕ್ಕಳಿಗೆ ನೂರಾರು ನಮಸ್ಕಾರಗಳು, ತಾಯಿಯ ಸೇವೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಎಂಬ ಸಾವಿರಾರು ಕಾಮೇಂಟ್ಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದುಬಂದಿವೆ.