ನವದೆಹಲಿ: ಯುವಜನರು ಉತ್ತಮ ನಾಗರಿಕರಾಗುವತ್ತ ಗಮನಹರಿಸಬೇಕೆಂದು ಕರೆ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು, ಒಬ್ಬರು ಉತ್ತಮ ಎಂಜಿನಿಯರ್ ಅಥವಾ ವೈದ್ಯರಾಗಬಹುದು, ಆದರೆ ಉತ್ತಮ ನಾಗರಿಕರಾಗುವುದು ಹೆಚ್ಚು ಮುಖ್ಯ ಎಂದು ಹೇಳಿದ್ದಾರೆ.
ಜೈಪುರದ ಬಿರ್ಲಾ ಸಭಾಂಗಣದಲ್ಲಿ ನಡೆದ 'ಯುವ ಸಂವಾದ' ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಯುವಕರು ವೈಫಲ್ಯಕ್ಕೆ ಹೆದರಬಾರದು ಮತ್ತು ಜೀವನದಲ್ಲಿ ಶಾರ್ಟ್‌ಕಟ್‌ಗಳನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಜೀವನವು ಅಮೂಲ್ಯವಾದುದು. ವೈಫಲ್ಯ ಎದುರಾದಾಗ ತಕ್ಷಣವೇ ತಪ್ಪು ದಾರಿಯನ್ನು ಹಿಡಿಯಬಾರದು ಅಥವಾ ಜೀವವನ್ನು ಪಣಕ್ಕಿಡಬಾರದು. ನಮಗೆ ಈ ಜೀವನ ದೊರೆತಿದೆ ಎಂದ ಮೇಲೆ, ನಮ್ಮ ಪೋಷಕರಿಗಾಗಿ ಹಾಗೂ ಈ ನಾಡಿಗಾಗಿ ನಾವು ಅರ್ಥಪೂರ್ಣವಾದದ್ದನ್ನು ಮಾಡಬೇಕು ಎಂದಿದ್ದಾರೆ.
ರಾಜಕೀಯದಲ್ಲಿ ಯುವಜನರ ಹೆಚ್ಚಿನ ಭಾಗವಹಿಸುವಿಕೆಗೆ ಕರೆ ನೀಡಿದ ಅವರು, ಇದು ದೇಶಕ್ಕೆ ದಿಕ್ಕು ತೋರಿಸುತ್ತದೆ. ಅಲ್ಲದೆ, ನಾಯಕತ್ವವೆಂದರೆ ಕೇವಲ ನೀತಿಗಳನ್ನು ರೂಪಿಸುವುದಲ್ಲ, ಬದಲಾಗಿ ಜನರನ್ನು ಒಗ್ಗೂಡಿಸುವುದೂ ಹೌದು ಎಂದು ಪ್ರತಿಪಾದಿಸಿದ್ದಾರೆ.
ಜುಲೈನಲ್ಲಿ ಆಗಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ಯುವಕರ ಪ್ರತಿಭಟನೆ ಬಳಿಕ ರಾಜಕೀಯ ಪಕ್ಷಗಳು ಯುವಜನರನ್ನು, ವಿಶೇಷವಾಗಿ ಝೆನ್ ಜಿ ಸಮುದಾಯವನ್ನು ತಲುಪುವ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಇಂದು ಯುವಕರ ಜೊತೆ ಸಂವಾದ ನಡೆಸಿದರು (ಏಜೆನ್ಸೀಸ್).