ಕೃತಕ ಕಾಲಿನಲ್ಲೇ ಕಠಿಣವಾದ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನೇಹಾ ಭಟ್!
- ಕೃತಕ ಕಾಲಿನಲ್ಲೇ ಕಠಿಣವಾದ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನೇಹಾ ಭಟ್!
- ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಅಮರನಾಥ ಯಾತ್ರೆ ಮುಗಿಸಿದ ಯುವತಿ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಜಮ್ಮು-ಕಾಶ್ಮೀರ: ಜುಲೈ 3 ರಿಂದ ಹಿಂದೂಗಳ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದಾದ ಅಮರನಾಥ್ ಯಾತ್ರೆ ಆರಂಭವಾಗಿದೆ. ಈ ಯಾತ್ರೆಗೆ ಪ್ರತಿದಿನ ಸುಮಾರು ಹತ್ತು ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳು ಆಗಮಿಸುತ್ತಿದ್ದಾರೆ.
ಇದರಲ್ಲಿ ಕೆಲವು ಜನರು ಕುದುರೆ, ಪಿಟ್ಟು ಮೂಲಕ ಬಂದರೆ, ಧನವಂತರು ಹೆಲಿಕಾಪ್ಟರ್ ಮೂಲಕ ಯಾತ್ರೆಯನ್ನು ಪೂರೈಸುತ್ತಿದ್ದಾರೆ. ಅದರೆ ಹೆಚ್ಚಿನ ಸಂಖ್ಯೆಯ ಜನರು ಕಾಲ್ನಡಿಗೆ ಮೂಲಕವೇ ಯಾತ್ರೆಯನ್ನು ಪೂರ್ಣಗೊಳಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಒಬ್ಬ ಅಂಗವಿಕಲ ಮಹಿಳೆ (Neha Bhatt in Amarnath Yatra) ತನ್ನ ಕೃತಕ ಕಾಲುಗಳ ಮೂಲಕವೇ ಅಮರನಾಥ್ ಯಾತ್ರೆ ಪೂರ್ಣಗೊಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಯುವಕರನ್ನೇ ನಾಚಿಸಿದ ನೇಹಾ ಭಟ್!
ಈ ಸಾಹಸಿ ಯುವತಿಯನ್ನು ನೇಹಾ ಭಟ್ ಎಂದು ಗುರುತಿಸಲಾಗಿದೆ. ಇಕೆ 2021 ರಲ್ಲಿ ರಸ್ತೆ ಅಫಘಾತದಲ್ಲಿ ತನ್ನ ಎಡಗಾಲನ್ನು ಕಳೆದುಕೊಂಡಿದ್ದಳು. ಆದರೆ ಈಗ ತನ್ನ ಕೃತಕ ಕಾಲುಗಳ ಸಹಾಯದಿಂದಲೇ ಅಮರನಾಥ್ ಯಾತ್ರೆಯನ್ನು ಪೂರ್ಣಗೊಳಿಸಿದ್ದಾಳೆ.
ಜಮ್ಮು-ಕಾಶ್ಮೀರದಲ್ಲಿ ನಿಮಿಷಕ್ಕೊಮ್ಮೆ ಹವಾಮಾನ ಬದಲಾಗುತ್ತದೆ. ಅದೂ ಅಲ್ಲದೆ ಈ ಅಮರನಾಥ ಯಾತ್ರೆಯು ಕಠಿಣವಾದ 14 ಕಿ.ಮೀ ದಾರಿಯನ್ನು ಹೊಂದಿದೆ. ಹೀಗಾಗಿ ನಡಿಯಲು ಸಾಧ್ಯವಾಗದವರು ಹೆಚ್ಚಾಗಿ ಕುದುರೆ ಅಥವಾ ಪಿಟ್ಟು ಮೂಲಕ ಸಂಚರಿಸುತ್ತಾರೆ.
ಆದರೆ ಈ ನೇಹಾ ಭಟ್ ತನ್ನ ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಕಾಲ್ನಡಿಗೆ ಮೂಲಕ ಪ್ರಯಾಣ ಬೆಳೆಸಿರುವುದು ನವ ಯುವಕ-ಯುವತಿಯರು ನಾಚುವಂತೆ ಮಾಡಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ನೇಹಾ ಭಟ್, ಅಮರನಾಥ್ ಯಾತ್ರೆಯನ್ನು ಪ್ರಾರಂಭಿಸಿ, ಕೊನೆಗೊಳಿಸುವವರೆಗಿನ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳನ್ನು ನೋಡಿದ ನೆಟ್ಟಿಗರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಕೈ-ಕಾಲು ಸೇರಿ ಎಲ್ಲಾ ಅಂಗಾಂಗಗಳು ಸರಿಯಿರುವ ನಾವುಗಳು ಮನೆಯಲ್ಲಿ ಕುಳಿತ್ತಿದ್ದೆವೆ. ನೀವು ಅಮರನಾಥ ಯಾತ್ರೆಯನ್ನು ಪೂರ್ಣಗೊಳಿಸಿದ್ದಿರಿ ಎಂದರೆ ನಿಮ್ಮ ಧೈರ್ಯಕ್ಕೊಂದು ಸಲಾಂ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಕೃತಕ ಕಾಲುಗಳನ್ನು ಇಟ್ಟುಕೊಂಡು ಅಮರನಾಥ ಯಾತ್ರೆಯನ್ನು ಪೂರ್ಣಗೊಳಿಸುವುದು ಸುಲಭದ ಮಾತಲ್ಲ. ನೀವು ಇದನ್ನು ಪೂರ್ಣಗೊಳಿಸಿದ್ದಿರಿ, ನಿಮಗೆ ಅಭಿನಂಧನೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಅಂಗವೈಕಲ್ಯದ ನಡುವೆ ಈ ಮಹಿಳೆ ಕಾಲ್ನಡಿಗೆ ಮೂಲಕ ಬೆಟ್ಟ ಹತ್ತುತ್ತಿದ್ದರೆ, ಯುವಕರು ಕುದುರೆ ಏರಿ ಹೋಗುತ್ತಿರುವುದು ನಾಚಿಕೆಯ ಸಂಗತಿ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, (ಏಜನ್ಸೀಸ್).