ಕೇವಲ 4 ತಿಂಗಳಲ್ಲಿ 22 ಜನರಿಗೆ ಮರಣದಂಡನೆ ವಿಧಿಸಿ ತೀರ್ಪು
- ಕೇವಲ 4 ತಿಂಗಳಲ್ಲಿ 22 ಜನರಿಗೆ ಮರಣದಂಡನೆ ವಿಧಿಸಿ ತೀರ್ಪು
- ಉತ್ತರ ಪ್ರದೇಶದ ಮುಝಫರ್‌ನಗರದ ನ್ಯಾಯಾಧೀಶ ರವಿ ದಿವಾಕರ್ ವೈರಲ್
- ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನಡುಕ ಹುಟ್ಟಿಸುತ್ತಿರುವ ನ್ಯಾಯಾಧೀಶ
ಉತ್ತರ ಪ್ರದೇಶ: ನ್ಯಾಯಾಲಯದ ಪ್ರಕರಣಗಳ ಇತ್ಯರ್ಥವಾಗಲು ವರ್ಷಗಳೇ ಹಿಡಿಯುತ್ತವೆ, ತೀರ್ಪು ಪ್ರಕಟವಾದರೂ ಕಠಿಣ ಶಿಕ್ಷೆಗಳನ್ನು ನೀಡಲಾಗುವುದಿಲ್ಲ, ಎಂಬ ಗುಮಾನಿ ಜನ ಸಾಮಾನ್ಯರಾಗಿದೆ.
ಆದರೆ, ಉತ್ತರ ಪ್ರದೇಶದ ಈ ನ್ಯಾಯಾಧೀಶಯೊಬ್ಬರು ಕೇವಲ ನಾಲ್ಕು ತಿಂಗಳುಗಳಲ್ಲಿ ಹತ್ತು ಪ್ರಕರಣಗಳಲ್ಲಿ 22 ಅಪರಾಧಿಗಳಿಗೆ ಗಲ್ಲು ಎಂದರೆ ಮರಣದಂಡನೆ ಶಿಕ್ಷೆ ನೀಡುವ ಮೂಲಕ ದೇಶದೆಲ್ಲಡೆ ವೈರಲ್ ಆಗುತ್ತಿದ್ದಾರೆ.
ಯಾರು ಈ ರವಿ ಕುಮಾರ್ ದಿವಾಕರ್?
ಪ್ರಸ್ತುತ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿರುವ ರವಿ ಕುಮಾರ್ ದಿವಾಕರ್ (Judge Ravi Diwakar) ಅವರೇ ಈ ವೈರಲ್ ನ್ಯಾಯಾಧೀಶರಾಗಿದ್ದಾರೆ. ಬಿಕಾಂ ಜೊತೆಗೆ ಕಾನೂನು ಪದವಿ ಪಡೆದಿರುವ ರವಿ ಕುಮಾರ್ ಅವರು 2009 ರಲ್ಲಿ ಅಜಂಘಡ ನ್ಯಾಯಾಲಯದ ನ್ಯಯಾಧೀಶರಾಗಿ ನೇಮಕವಾಗಿದ್ದರು.
2025 ರಿಂದ ಮುಜಫರ್ನಗರದ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಕುಮಾರ್ ಕೇವಲ ನಾಲ್ಕೇ ನಾಲ್ಕು ತಿಂಗಳಲ್ಲಿ 22 ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮುನ್ನಲೆಗೆ ಬಂದಿದ್ದಾರೆ. ಇದಕ್ಕೂ ಮೊದಲು ವಾರಾಣಸಿಯ ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋ ಚಿತ್ರಿಕರಣಕ್ಕೆ ಅನುಮತಿ ನೀಡುವ ಮೂಲಕ ದೇಶದ ಜನರ ಗಮನವನ್ನು ತಮ್ಮತ್ತ ಸೆಳೆದಿದ್ದರು.
12 ವರ್ಷದ ಮಗು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 4 , 2011 ರ ರೈತನ ಕೊಲೆ ಪ್ರಕರಣದಲ್ಲಿ 4, 2010 ರ ಗ್ರಾಮ ಪಂಚಾಯಿತಿ ಅಧ್ಯಕ್ಷನ ಕೊಲೆಗೆ ಸಂಬಂಧಿಸಿದಂತೆ 3, 2019 ರಲ್ಲಿ ತಾಯಿಯನ್ನು ಕೊಂದ ಪ್ರಕರಣದಲ್ಲಿ 3, 2019 ರ ವಕೀಲನ ಕೊಲೆ ಪ್ರಕರಣದಲ್ಲಿ 3 ಹಾಗೂ ಹೋಂ ಗಾರ್ಡ ಇನ್ನೊಂದು ಕೊಲೆ ಪ್ರಕಣದಲ್ಲಿ ತಲಾ ಇಬ್ಬರಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ಒಟ್ಟು 22 ಜನರಿಗೆ ಮರಣದಂಡನೆ ಶಿಕ್ಷೆ ನೀಡುವ ಮೂಲಕ ದಾಖಲೆ ಬರೆದಿದ್ದಾರೆ, (ಏಜನ್ಸೀಸ್).