ವಾಷಿಂಗ್ಟನ್ ಪೋಸ್ಟ್, ಕಾಂಗ್ರೆಸ್ ಸಂಸದ ಶಶಿ ತರೂರ್, ಇಶಾನ್ ತರೂರ್
- ವಾಷಿಂಗ್ಟನ್ ಪೋಸ್ಟ್‌ನಲ್ಲಿ 300 ಪತ್ರಕರ್ತರ ವಜಾ
- ಕಾಂಗ್ರೆಸ್ ಸಂಸದ ಶಶಿ ತರೂರ್ ಪುತ್ರ ಇಶಾನ್ ತರೂರ್ ಸಹ ಕೆಲಸದಿಂದ ವಜಾ
- ತಮ್ಮ ವರ್ಲ್ಡ್‌ವ್ಯೂ ಎಂಬ ಅಂಕಣದ ಮೂಲಕ ಅಪಾರ ಓದುಗ ಬಳಗವನ್ನು ಪಡೆದಿದ್ದ ಇಶಾನ್
ಅಮೆರಿಕ: ಅಮೆರಿಕದ ಅತ್ಯಂತ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಒಂದಾದ ವಾಷಿಂಗ್ಟನ್ ಪೋಸ್ಟ್ (Washington Post) ಬುಧವಾರ (ಫೆ.4) ಮಾಧ್ಯಮ ಇತಿಹಾಸದಲ್ಲಿ ಅತ್ಯಂತ ವ್ಯಾಪಕವಾದ ಸುದ್ದಿ ಮನೆ ಶುದ್ಧೀಕರಣವನ್ನು ನಡೆಸಿದೆ. ಇದರ ಪರಿಣಾಮವಾಗಿ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂರನೇ ಒಂದು ಭಾಗದಷ್ಟು ಪತ್ರಕರ್ತರು ಕೆಲಸವನ್ನು ಕಳೆದುಕೊಂಡಿದ್ದಾರೆ.
ಈ ವಿದ್ಯಮಾನದಿಂದ ಕೇವಲ ಕೆಳಹಂತದ ಪತ್ರಕರ್ತರಷ್ಟೇ ಅಲ್ಲದೇ, ವಾಷಿಂಗ್ಟನ್ ಪೋಸ್ಟ್‌ನ ಹಿರಿಯ ಅಂತರರಾಷ್ಟ್ರೀಯ ವ್ಯವಹಾರಗಳ ಅಂಕಣಕಾರರಾಗಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪುತ್ರ ಇಶಾನ್ ತರೂರ್ ಕೂಡ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಸುದ್ದಿಯನ್ನು ಖಾತರಿ ಪಡಿಸಿರುವ ಇಶಾನ್, ವಾಂಷಿಂಗ್ಟನ್ ಪೋಸ್ಟ್‌ನ ಅಂತರರಾಷ್ಟ್ರೀಯ ತಂಡದ ಹಲವಾರು ಪತ್ರಕರ್ತರ ಜತೆ ತಮ್ಮನ್ನು ಸಹ ವಜಾ ಮಾಡಲಾಗಿದೆ ಎಂದು ಹಂಚಿಕೊಂಡಿದ್ದಾರೆ.
ಸುದ್ದಿ ಸಂಸ್ಥೆಯು ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿದ್ದ ಹಿನ್ನಲೆ ಇಂದು ಸುಮಾರು ಶೇ. 30 ರಷ್ಟು ಕೆಲಸಗಾರರನ್ನು ವಜಾ ಮಾಡಲಾಗಿದೆ ಎಂದು ತರೂರ್ ಹೇಳಿದ್ದಾರೆ. ಈ ನಿರ್ಧಾರದಿಂದ ಸುಮಾರು 800 ಜನ ಕೆಲಗಾರರನ್ನು ಹೊಂದಿದ್ದ ವಾಷಿಂಗ್ಟನ್ ಪೋಸ್ಟ್‌ನ ಸುಮಾರು 300 ಉದ್ಯೋಗಿಗಳು ಇದೀಗ ನಿರುದ್ಯೋಗಿಗಳಾಗಿದ್ದಾರೆ ಎಂದು ಇಶಾನ್ ತರೂರ್ ತಿಳಿಸಿದ್ದಾರೆ.
ಈ ಸಂಸ್ಥೆಯೊಂದಿಗೆ 12 ವರ್ಷಗಳ ಸಂಬಂಧ
ಕೆಸಲದಿಂದ ವಜಾಗೊಂಡ ನಂತರ ಟ್ವಿಟರ್ನಲ್ಲಿ ಸುದೀರ್ಘವಾದ ಟ್ವಿಟ್ ಮಾಡಿರುವ ಇಶಾನ್ ತರೂರ್, ಸುಮಾರು 12 ವರ್ಷಗಳಿಂದ ಈ ಪತ್ರಿಕೆಯೊಂದಿಗಿನ ಸಂಬಂಧ ನನಗೆ ಅದ್ಭುತ ಸಹೋದ್ಯೋಗಿಗಳನ್ನು ನೀಡಿದೆ ಎಂದು ಬರೆದುಕೊಂಡಿದ್ದಾರೆ.
ಸುಮಾರು 12 ವರ್ಷಗಳಿಂದ ನಾನು ಈ ಸುದ್ದಿ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಡೆಸ್ಕ್ನಲ್ಲಿ ಕೆಲಸ ಮಾಡುತ್ತಿದೆ. ನನಗೆ ಸಮಾನ ಮನಸ್ಕ ಗೆಳೆಯರು ಮತ್ತು ಸಹದ್ಯೋಗಿಗಳು ದೊರೆತದ್ದು ನನ್ನ ಭಾಗ್ಯ, ಈಗ ಇಲ್ಲಿಂದ ನನ್ನನ್ನು ವಜಾ ಮಾಡಿದ್ದಾರೆ, ಖಂಡಿತವಾಗಿ ಈ ನಿರ್ಧಾರದಿಂದ ನಾನು ಹೃದಯವಿದ್ರಾವಕನಾಗಿದ್ದೇನೆ ಎಂದು ಇಶಾನ್ ತರೂರ್ ಬರೆದುಕೊಂಡಿದ್ದಾರೆ.
2017 ರಲ್ಲಿ ನನಗೆ ವರ್ಲ್ಡ್‌ವ್ಯೂ ಎಂಬ ಅಂಕಣವನ್ನು ಬರೆಯಲು ಅವಕಾಶ ನೀಡಲಾಯಿತು ಮತ್ತು ಈ ಅಂಕಣದಿಂದಾಗಿ ನನಗೆ ಸುಮಾರು ಐವತ್ತು ಸಾವಿರ ಓದುಗರು ದೊರೆಯುವಂತಾಯಿತು. ಜಗತ್ತಿನಲ್ಲಿ ಅಮೆರಿಕದ ಸ್ಥಾನದ ಕುರಿತು ಬರೆಯಲು ನನಗೆ ದೊರೆತ ಅವಕಾಶಕ್ಕೆ ನಾನು ಧನ್ಯನಾಗಿದ್ದೇನೆ ಹಾಗೂ ಈ ಅಂಕಣ ಹಲವಾರು ಭಾರಿ ವರ್ಷದ ಅಂಕಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಗ್ಗೆ ಹೆಮ್ಮೆಯಿದೆ ಎಂದು ತರೂರ್ ಹೇಳಿದ್ದಾರೆ,(ಏಜನ್ಸೀಸ್).