Kill Wife 
ದೇಶ

ಪತ್ನಿಯನ್ನು ಕೊಲ್ಲಲು 3 ಬಾರಿ ವಿಫಲ ಯತ್ನ: 4ನೇ ಬಾರಿ ಪತಿ ಹೆಣೆದ ಪ್ಲ್ಯಾನ್​ ಕೇಳಿದ್ರೆ ಎದೆನಡುಗುತ್ತೆ! | Kill Wife

ಮಹಾರಾಷ್ಟ್ರ: ಮೇಲ್ನೋಟಕ್ಕೆ ಅದು ಒಂದು ಸಾಮಾನ್ಯ ರಸ್ತೆ ಅಪಘಾತದಂತೆ ಕಂಡಿತ್ತು. ಶಾಲಾ ಶಿಕ್ಷಕಿಯೊಬ್ಬರು ಕೆಲಸಕ್ಕೆ ಹೋಗುತ್ತಿದ್ದಾಗ ವಾಹನವೊಂದು ಡಿಕ್ಕಿಯಾಗಿ(Kill Wife) ಸಾವನ್ನಪ್ಪಿದ್ದರು. ಆದರೆ, ಜಳಗಾಂವ್ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ಹೊರಬಂದ ಸತ್ಯ ಇಡೀ ಮಹಾರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಇದು ಕೇವಲ ಅಪಘಾತವಲ್ಲ, ಸ್ವಂತ ಪತಿಯೇ ಲಕ್ಷ ರೂಪಾಯಿ ಸುಪಾರಿ ನೀಡಿ ಮಾಡಿಸಿದ ವ್ಯವಸ್ಥಿತ ಕೊಲೆ ಎಂಬ ಆಘಾತಕಾರಿ ವಿಷಯ ಬಯಲಾಗಿದೆ!
ಮಾರ್ಚ್ 2ರ ಬೆಳಿಗ್ಗೆ ಜಳಗಾಂವ್ ಜಾಮೋದ್ ತಾಲ್ಲೂಕಿನ ಕವಠಳ್ ಗ್ರಾಮದ ಹತ್ತಿರ ಶಿಕ್ಷಕಿ ವೃಷಾಲಿ ಪ್ರಕಾಶ್ ಗಾವಂಡೆ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಶಾಲೆಗೆ ಹೋಗುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಟಾಟಾ ಇಂಟ್ರಾ ವಾಹನವೊಂದು ಅವರಿಗೆ ಜೋರಾಗಿ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ವೃಷಾಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಅಪಘಾತ ಎಂದು ಪ್ರಕರಣ ದಾಖಲಿಸಲಾಗಿತ್ತು.

ಪೊಲೀಸರ ತನಿಖೆಯಲ್ಲಿ ಬಯಲಾದ ಭಯಾನಕ ಸತ್ಯ

ಘಟನಾ ಸ್ಥಳದ ಸಿಸಿಟಿವಿ ಫೂಟೇಜ್ ಮತ್ತು ತಾಂತ್ರಿಕ ಮಾಹಿತಿಯನ್ನು ಕಲೆಹಾಕಿದ ಪೊಲೀಸರಿಗೆ ವಾಹನ ಚಾಲಕ ಮನೀಶ್ ಸೂರ್ಯವಂಶಿ ಎಂಬಾತನ ಮೇಲೆ ಸಂಶಯ ಬಂದಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ಸಂಚು ಹೊರಬಿದ್ದಿದೆ. ಈ ಕೃತ್ಯದ ಮಾಸ್ಟರ್ ಮೈಂಡ್ ಬೇರೆ ಯಾರೂ ಅಲ್ಲ, ಮೃತ ವೃಷಾಲಿ ಅವರ ಪತಿ ಪ್ರಕಾಶ್ ಅನಂತ ಗಾವಂಡೆ!

3 ಬಾರಿ ಪಾರಾಗಿದ್ದ ಪತ್ನಿ, 4ನೇ ಬಾರಿ ಬಲಿಯಾದಳು!

ತನಿಖೆಯ ವೇಳೆ ತಿಳಿದುಬಂದ ಅತ್ಯಂತ ಕ್ರೂರ ವಿಷಯವೆಂದರೆ, ಪತಿ ಪ್ರಕಾಶ್ ಈ ಹಿಂದೆಯೂ ಮೂರು ಬಾರಿ ಪತ್ನಿಯನ್ನು ಕೊಲ್ಲಲು ಪ್ರಯತ್ನಿಸಿದ್ದ. ಆಹಾರದಲ್ಲಿ ವಿಷ ಬೆರೆಸಿ ಆಕೆಯನ್ನು ಮುಗಿಸಲು ಪ್ಲಾನ್ ಮಾಡಿದ್ದ, ಆದರೆ ಅದೃಷ್ಟವಶಾತ್ ವೃಷಾಲಿ ಆ ಮೂರೂ ಬಾರಿ ಸಾವಿನ ದವಡೆಯಿಂದ ಪಾರಾಗಿದ್ದರು. ಹೀಗಾಗಿ, ಈ ಬಾರಿ ಹೇಗಾದರೂ ಮಾಡಿ ಆಕೆಯನ್ನು ಕೊಲ್ಲಲೇಬೇಕೆಂದು ನಿರ್ಧರಿಸಿದ ಪತಿ, ಮನೀಶ್ ಎಂಬಾತನಿಗೆ 1 ಲಕ್ಷ ರೂಪಾಯಿ ಸುಪಾರಿ ನೀಡಿ ಅಪಘಾತದ ರೂಪದಲ್ಲಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದ.

ಅಪಘಾತದ ಸೋಗಿನಲ್ಲಿ ಹತ್ಯೆ

ಸಂಚಿನಂತೆ ಮಾರ್ಚ್ 2ರ ಬೆಳಿಗ್ಗೆ ಮನೀಶ್ ಟಾಟಾ ಇಂಟ್ರಾ ವಾಹನದಲ್ಲಿ ವೃಷಾಲಿ ಅವರನ್ನು ಹಿಂಬಾಲಿಸಿದ್ದಾನೆ. ನಿರ್ಜನ ಪ್ರದೇಶ ಸಿಗುತ್ತಿದ್ದಂತೆಯೇ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದು, ಅಪಘಾತದಂತೆ ಬಿಂಬಿಸಿ ಪರಾರಿಯಾಗಿದ್ದ. ಈ ಭೀಕರ ಕೃತ್ಯದಲ್ಲಿ ಪತಿ ಪ್ರಕಾಶ್ ಮತ್ತು ಮಧ್ಯವರ್ತಿ ಮಂಗೇಶ್ ಚುಲ್ಕರ್ ಶಾಮೀಲಾಗಿದ್ದಾರೆ.
ಸದ್ಯ ಪೊಲೀಸರು ಹಂತಕ ಪತಿ ಪ್ರಕಾಶ್ ಗಾವಂಡೆ, ಸುಪಾರಿ ಕಿಲ್ಲರ್ ಮನೀಶ್ ಮತ್ತು ಮಧ್ಯವರ್ತಿ ಮಂಗೇಶ್‌ನನ್ನು ಬಂಧಿಸಿದ್ದಾರೆ,(ಏಜೆನ್ಸೀಸ್​).