ಇಂಫಾಲ್; ಕಳೆದ ಕೆಲವು ವರ್ಷಗಳಿಂದ ಸಂಘರ್ಷಕ್ಕೀಡಾಗಿ, ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿರು ಮಣಿಪುರದ ಇಂಫಾಲ್(Imphal) ಪೂರ್ವ ಜಿಲ್ಲೆಯಲ್ಲಿ ಗುರುವಾರ(ಜ. 01) ಭದ್ರತಾ ಪಡೆಗಳು 27 ಬಾಂಬ್ಗಳನ್ನು ವಶಪಡಿಸಿಕೊಂಡು ನಿಷ್ಕ್ರೀಯಗೊಳಿಸಿವೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 27 ದೇಶಿಯ ನಿರ್ಮಿತ ಬಾಂಗ್ಗಳು ಪತ್ತೆಯಾಗಿದ್ದು, ಅವುಗಳನ್ನು ಮೊಂಗ್ಲ್‌ಹಾಮ್ ಗ್ರಾಮದ ಬಳಿ ನಿಷ್ಕ್ರಿಯಗೊಳಿಸಲಾಗಿದೆ. ಬುಧವಾರ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಜಿಲ್ಲೆಯ ಲ್ಯಾಂಗ್ಡಮ್ ನುಂಗ್ಜೆಂಗ್ಬಿ ಪ್ರದೇಶದಿಂದ ಮೂರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
2023 ಮೇ ತಿಂಗಳಲ್ಲಿ ಮೀಸಲಾತಿ ಸಂಬಂಧ ಮೈತೈಯಿ & ಕುಕಿ ಸಮುದಾಯಗಳ ನಡುವೆ ನಡೆದ ಜನಾಂಗೀಯ ಹಿಂಸಾಚಾರ ಭುಗಿಲೆದ್ದು, ಘಟನೆಯಲ್ಲಿ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಆಗಿನಿಂದಲೂ ಮಣಿಪುರದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಇನ್ನೂ ರಾಜ್ಯ ಸರ್ಕಾರವನ್ನು ನಿಷ್ಕ್ರೀಯಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿದೆ (ಏಜೆನ್ಸೀಸ್).