ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಲು ಯಾರು ಆದೇಶ ನೀಡಿದ್ದಾರೆ ಎಂದು ಪ್ರಶ್ನಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಇಂದು ಪೆಲೆಟ್ ಗನ್ ದಾಳಿಗೊಳಗಾದ ಸಂತ್ರಸ್ತನೊಂದಿಗೆ ಪಾರ್ಲಿಮೆಂಟ್ ಸ್ಟ್ರೀಟ್‌ನ ಪೊಲೀಸ್ ಠಾಣೆಗೆ ತೆರಳಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವವರೆಗೆ ಅಲ್ಲಿಂದ ತೆರಳುವುದಿಲ್ಲ ಎಂದು ಧರಣಿ ಕುಳಿತಿದ್ದಾರೆ.
ರಾಹುಲ್ ಗಾಂಧಿ ಪೋಸ್ಟ್!
ರಾಹುಲ್ ಗಾಂಧಿಯವರು ಪೆಲೆಟ್ ಗನ್‌ನಿಂದ ಗಾಯಗೊಂಡ ಸಂತ್ರಸ್ತ ವಿದ್ಯಾರ್ಥಿಯೊಂದಿಗೆ ಮಾಧ್ಯಮಗಳ ಮುಂದೆ ಬಂದು, ನೀಲಿ ಮುಚ್ಚಳದ ಸಣ್ಣ ಪ್ಲಾಸ್ಟಿಕ್ ಡಬ್ಬಿಯಲ್ಲಿದ್ದ ಪೆಲೆಟ್ ಅಂಚುಗಳನ್ನು ತಮ್ಮ ಅಂಗೈಗೆ ಸುರಿದುಕೊಂಡು ಪ್ರದರ್ಶಿಸಿದರು. ಇವೇ ಆ ಪೆಲೆಟ್‌ಗಳು ಎಂದು ವರದಿಗಾರರಿಗೆ ತೋರಿಸಿದ ಅವರು, ಇವುಗಳನ್ನು ಹತ್ತಿರದಿಂದ ಗಮನಿಸುವಂತೆ ತಿಳಿಸಿ, ಇವುಗಳನ್ನು ವಿದ್ಯಾರ್ಥಿಯ ದೇಹದಿಂದ ಹೊರತೆಗೆಯಲಾಗಿದೆ ಎಂದು ಹೇಳಿದರು.
ಕಪ್ಪು ಕನ್ನಡಕ ಧರಿಸಿದ್ದ ಆ ವಿದ್ಯಾರ್ಥಿ ತನ್ನ ಟಿ-ಷರ್ಟ್ ತೋಳನ್ನು ಮೇಲಕ್ಕೆತ್ತಿ ಗಾಯಗಳನ್ನು ತೋರಿಸಿದನು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ವಿದ್ಯಾರ್ಥಿಯ ದೇಹದಲ್ಲಿ 200 ಪೆಲೆಟ್‌ಗಳು ಸಿಲುಕಿಕೊಂಡಿದ್ದು, ಮೂರು ಪೆಲೆಟ್‌ಗಳು ಕಣ್ಣಿನಲ್ಲೇ ಇವೆ ಎಂದು ತಿಳಿಸಿದರು. ಇದಕ್ಕೆ ಬೆಂಬಲವಾಗಿ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜು ಮತ್ತು ಏಮ್ಸ್ ವೈದ್ಯಕೀಯ ವರದಿಗಳನ್ನು ಪ್ರದರ್ಶಿಸಿದ ಅವರು, ಪೊಲೀಸರು ಈ ದಾಳಿ ನಡೆಸಿಲ್ಲ ಎಂದಾದರೆ ಇದನ್ನು ಹಾರಿಸಿದವರು ಯಾರು ಎಂದು ಪ್ರಶ್ನಿಸಿದರು. ಅಪರಾಧ ನಡೆದಿರುವುದು ಸ್ಪಷ್ಟವಾಗಿರುವುದರಿಂದ, ಸ್ಥಳದಲ್ಲೇ ಇರುವ ಸಂತ್ರಸ್ತನ ತಾಯಿ-ತಂದೆಗೆ ನ್ಯಾಯ ಒದಗಿಸಲು ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಏನಿದು ಪೆಲೆಟ್ ಗನ್..? ಬಳಕೆಯ ನಿಯಮಗಳೇನು..?
ರಾಹುಲ್ ವಿರುದ್ಧ ಬಿಜೆಪಿ ಕಿಡಿ!
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಮುಂದೆ ರಾಹುಲ್ ಗಾಂಧಿ ನಡೆಸುತ್ತಿರುವ ಧರಣಿಯನ್ನು ವಿರೋಧಿಸಿದ ಅವರು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿ ತನಿಖೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಪೊಲೀಸರು ತಿಳಿಸಿದರೂ ಅವರು ಕಾನೂನನ್ನು ಗೌರವಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು(ಏಜೆನ್ಸೀಸ್).