ನ್ಯೂಸ್

ನರೇಂದ್ರ ಮೋದಿ ಸುಳ್ಳು ಹೇಳ್ತಿದ್ದಾರೆ, ಅವರಿಗೆ ಏನೂ ಅರ್ಥವಾಗುತ್ತಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

lakshmihegde

ರಾಮನಗರ: ಲಾಕ್​ಡೌನ್​ ಸಮಯದಲ್ಲಿ ನಾವು ಹೈಕಮಾಂಡ್​ ನಿರ್ದೇಶನದಂತೆ ಬಡವರಿಗೆ ಕಿಟ್​ ವಿತರಣೆ ಮಾಡುತ್ತಿದ್ದೇವೆ. ಈ ಮೂಲಕ ಅವರ ಸಹಾಯಕ್ಕೆ ನಿಂತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಾಗಡಿಯ ಕುದೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವುದು ಬೋಗಸ್ ಪ್ಯಾಕೇಜ್​ಗಳು. ಇನ್ನು ನರೇಂದ್ರ ಮೋದಿಯವರು ಪ್ರಧಾನಿ ಆದಾಗಿನಿಂದಲೂ ಸುಳ್ಳು ಹೇಳುತ್ತಿದ್ದಾರೆ. ಈಗಲೂ ಅದನ್ನೇ ಮಾಡ್ತಿದ್ದಾರೆ. ಆರ್ಥಿಕವಾಗಿ ಸುಧಾರಣೆ ಆಗಬೇಕಾದರೆ ಬಡವರ ಜೇಬಿನಲ್ಲಿ ಹಣ ಇರಬೇಕು ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.

ಈ ಸರ್ಕಾರ ಬೇಜವಾಬ್ದಾರಿಯುತ ಸರ್ಕಾರ, ಜನವಿರೋಧಿ. ಇದೀಗ ಆರ್ಥಿಕ ಚೇತರಿಕೆಗೋಸ್ಕರ ಲಾಕ್​ಡೌನ್​ ಸಡಿಲಿಕೆ ಮಾಡಿದ್ದಾರೆ. ಕಷ್ಟದ ಪರಿಸ್ಥಿತಿ ಇದೆ. ಇಷ್ಟಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.(ಏಜೆನ್ಸೀಸ್​)