Nandini Rai: ಮಾಡೆಲ್ ಆಗಿ ಗುರುತಿಸಿಕೊಂಡ ತೆಲುಗು ನಟಿ ನಂದಿನಿ ರೈ, ಮಿಸ್ ಆಂಧ್ರಪ್ರದೇಶ ಆದ ಬಳಿಕ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಚೆಲುವೆ. ಬಿಗ್ ಬಾಸ್‌ನಿಂದ ತನ್ನ ಖ್ಯಾತಿಯನ್ನು ದುಪ್ಪಟ್ಟಾಗಿಸಿಕೊಂಡ ಈಕೆ, ಹಲವು ಸಿನಿಮಾಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸುತ್ತಿರುವ ಕಲಾವಿದೆ. ತಮ್ಮ ಬಿಜಿ ಶೆಡ್ಯೂಲ್ ನಡುವೆ ಇತ್ತೀಚೆಗಷ್ಟೇ ಯೂಟ್ಯೂಬ್ ಸಂದರ್ಶನದಲ್ಲಿ ಭಾಗಿಯಾಗಿ ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡ ನಂದಿನಿ, ಬಹುಭಾಷಾ ತಾರೆ, ದಿವಂಗತ ನಟಿ ಸೌಂದರ್ಯರನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭೂಮಿಯಿಂದ ಹೊರಬರಲು ಮಹಾಬಲಿ ರೆಡಿ: ವರ್ಷಕ್ಕೊಮ್ಮೆ ಆಚೆ ಬರುವ ಈ ಕಪ್ಪೆಯ ವಿಶೇಷತೆ ನಿಮ್ಮ ಹುಬ್ಬೇರಿಸುತ್ತೆ! Maahabali frog
"ಆಗ ನಾನು 7ನೇ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ಜಾಹಿರಾತಿನ ಚಿತ್ರೀಕರಣಕ್ಕಾಗಿ ಸೌಂದರ್ಯ ಅವರು ನಮ್ಮ ಶಾಲೆಗೆ ಬಂದಿದ್ದರು. ಅದೊಂದು ಗ್ಯಾಸ್ ಸಿಲಿಂಡರ್ ಜಾಹೀರಾತಿನ ಚಿತ್ರೀಕರಣವಾಗಿತ್ತು. ಈ ಆ್ಯಡ್ನಲ್ಲಿ ಸೌಂದರ್ಯ ಅವರ ಮಗಳಾಗಿ ನಟಿಸಲು ನನ್ನನ್ನು ಆಯ್ಕೆ ಮಾಡಲಾಗಿತ್ತು. ಕಾರಣ, ಆ ಸಮಯದಲ್ಲಿ ನಾನು ಗುಂಡು ಗುಂಡಾಗಿ ಮುದ್ದಾಗಿದ್ದೆ. ಸೌಂದರ್ಯ ಅವರೊಂದಿಗೆ ಆ ಒಂದು ಜಾಹೀರಾತಿನಲ್ಲಿ ನಾನು ಅಭಿನಯಿಸಿದೆ" ಎಂದರು.
"ಚಿತ್ರೀಕರಣದ ಸುಲವಾಗಿ ಅವರು ನಮ್ಮ ಶಾಲೆಗೆ ಬಂದಾಗ, ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಅವರ ಆಟೋಗ್ರಾಫ್‌ಗಾಗಿ ಮುಗಿಬೀಳುತ್ತಿದ್ದರು. ಕೆಲವರು ಅವರಿಗೆ ಸೀರೆ, ಸಿಹಿತಿಂಡಿ ಸೇರಿದಂತೆ ಇನ್ನಿತರ ಉಡುಗೊರೆಗಳನ್ನು ತಂದುಕೊಟ್ಟರು. ಒಬ್ಬ ನಾಯಕಿಗೆ ಎಷ್ಟೆಲ್ಲ ಪ್ರೀತಿ, ಅಭಿಮಾನ ಸಿಗುತ್ತಿದೆ ಎಂಬುದನ್ನು ನೇರವಾಗಿ ಕಂಡ ನಾನು, ಆಗಲೇ ನಾಯಕಿಯಾಗಲು ನಿರ್ಧರಿಸಿದ್ದೆ. ಈ ವಿಷಯವನ್ನು ನನ್ನ ತಂದೆ ಬಳಿ ಹೇಳಿದಾಗ, ಇದಕ್ಕೆ ಅವರು ಒಪ್ಪಲಿಲ್ಲ" ಎಂದರು.
"ನಾನು ಎಂಬಿಎ ಮುಗಿಸುವವರೆಗೂ ನನ್ನ ತಂದೆ ನಟನಾ ವೃತ್ತಿಗೆ ಪ್ರವೇಶಿಸಲು ಬಿಡಲಿಲ್ಲ. ಒಮ್ಮೆ ನನ್ನ ತಾಯಿ ನನ್ನ ಹೆಸರಿನಲ್ಲಿ ಮಿಸ್ ಹೈದರಾಬಾದ್‌ಗೆ ಅರ್ಜಿ ಸಲ್ಲಿಸಿದರು. ಆಗ ಸ್ಪರ್ಧಿಸಲು ಅವಕಾಶ ಸಿಕ್ಕಿತು. ನಂತರ ನಾನು ಮಿಸ್ ಹೈದರಾಬಾದ್ ಗೆದ್ದೆ. ಅದಾದ ಬಳಿಕ 2010ರಲ್ಲಿ ಮಿಸ್ ಆಂಧ್ರಪ್ರದೇಶ ಪ್ರಶಸ್ತಿಯನ್ನೂ ಸ್ವೀಕರಿಸಿದೆ. ನಂತರ, ನಾನು ಮಿಸ್ ಇಂಡಿಯಾಕ್ಕೆ ಹೋಗಬೇಕಿತ್ತು. ಆದರೆ, ನನ್ನ ಎತ್ತರ ಕಡಿಮೆ ಇದ್ದ ಕಾರಣ ಆಯ್ಕೆಯಾಗಲಿಲ್ಲ. ಮಿಸ್ ಆಂಧ್ರ ಮತ್ತು ಹೈದರಾಬಾದ್ ಗೆದ್ದ ಬಳಿಕ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡೆ. ಅದಾದ ನಂತರ ಸಿನಿಮಾ ಅವಕಾಶ" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).