ನ್ಯೂಸ್

ನಾಗರ ಪಂಚಮಿಯಂದು ನಿಜವಾದ ನಾಗಪ್ಪನಿಗೆ ಪೂಜೆ..

ಉತ್ತರಕನ್ನಡ: ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾಗಪ್ಪನಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಿದ್ದಾರೆ. ಹಬ್ಬದ ದಿನ ಎಲ್ಲರೂ ನಾಗನ ಮೂರ್ತಿಗೆ ಹಾಲೆರದು ಪೂಜೆ ಮಾಡಿದ್ರೆ, ಇಲ್ಲೊಂದು ಕುಟುಂಬ ನಾಗಪಂಚಮಿಯಂದು ನಿಜ ನಾಗರಹಾವಿಗೆ ಪೂಜೆ ಮಾಡಿದೆ.

ಹಿಂದೂ ಧರ್ಮದ ಪ್ರಕಾರ ನಾಗರಹಾವವನ್ನು ದೇವರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಾಗರ ಪಂಚಮಿಯ ದಿನ ನಾಗದೇವತೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.  ಉತ್ತರಕನ್ನಡ ಜಿಲ್ಲೆಯ ಶಿರಸಿಯ ಹುಲೇಕಲ್​ನಲ್ಲಿ ಕುಟುಂಬವೊಂದು ಪ್ರತಿ ವರ್ಷ ನಿಜ ನಾಗರಹಾವಿಗೆ ಪೂಜೆ ಮಾಡುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಶಾಂತ್ ಹುಲೇಕಲ್ ಹಾವುಗಳ ರಕ್ಷಣೆಯಲ್ಲಿ ಹೆಸರುವಾಸಿಯಾದವರು. ಅವರ ಮಗ ಧೀರಜ್ ಹುಲೇಕಲ್ ಸಹ ಹಾವುಗಳನ್ನ ರಕ್ಷಿಸುವುದುನ್ನು ಕಲಿತಿದ್ದಾರೆ. ಇದೀಗ ಇಬ್ರೂ ಸೇರಿ ನಾಗರ ಪಂಚಮಿಯಂದು ನಿಜದ ಹಾವಿಗೆ ಪೂಜೆ ಮಾಡಿದ್ದಾರೆ.

ಹಾವಿಗೆ ಪೂಜೆ ಮಾಡಿದ ನಂತರ ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ. ಪ್ರತೀವರ್ಷ ಈ ಆಚರಣೆಯನ್ನು ಕಣ್ತುಂಬಿಕೊಳ್ಳಲು ಶಿರಸಿಯ ಹಲವರು ಪ್ರಶಾಂತ್ ಹುಲೇಕಲ್ ಅವರ ಮನೆಗೆ ಬರುತ್ತಾರೆ.