ಕೊಹಿಮಾ: ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಪೊಲೀಸರಿಗೆ ಅಗ್ರಸ್ಥಾನ. ಇದೀಗ ನಾಗಾಲ್ಯಾಂಡ್ನ ಪೊಲೀಸರ ತಂಡವೊಂದು ಬಿಡುವಿನ ವೇಳೆಯಲ್ಲಿ ನೊ ಲಾಫ್ (No-Laugh Challenge) ಚಾಲೆಂಜ್ ಮಾಡಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನಾಗಾಲ್ಯಾಂಡ್ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ 12 ಜನ ಪೊಲೀಸರ ತಂಡ 'ನೊ ಲಾಫ್' ಚಾಲೆಂಜ್ ಆಟ ಆಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. ಒಬ್ಬೊಬ್ಬರಾಗಿ ಕೈಲಾಶ್ ಖೇರ್ ಅವರ ಪ್ರಸಿದ್ಧ 'ಸೈಯಾನ್' ಹಾಡನ್ನು ಹಾಡಿದ್ದಾರೆ. ಈ ವೇಳೆ ಯಾರು ನಗುತ್ತಾರೋ ಅವರ ತಲೆಗೆ ಎಲ್ಲರೂ ಕಾಗದದ ಕೋಲಿನಿಂದ ಹೊಡಯಬೇಕು ಎಂಬುವುದು ಆಟದ ನಿಯಮ.
ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಈ ವಿಡಿಯೋ ನಿಮ್ಮಲ್ಲಿ ಖಂಡಿತವಾಗಿಯೂ ನಗು ತರಿಸುತ್ತದೆ. ಜೀವನದಲ್ಲಿ ಕೆಲಸದ ಕಾರಣದಿಂದ ಎಷ್ಟೇ ಒತ್ತಡ ನಿರ್ಮಾಣವಾದರೂ, ಮಾನಸಿಕವಾಗಿ ಶಕ್ತಿಯುತವಾಗಿರಲು ಪ್ರಯತ್ನಿಸಬೇಕು. ನಮ್ಮ ರಾಜ್ಯದ ಪೊಲೀಸರ ಈ ವಿಡಿಯೋ ನೋಡಲು ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.