ನ್ಯೂಸ್

‘ತಾಂಡವ್​​‘ ಸೆಟ್​ನಲ್ಲಿ ಮೀನುಗಾರರಿಗಾಗಿ ಮೀನಿನ ಸಾರು ಮಾಡಿದ ನಾಗ ಚೈತನ್ಯ; ರುಚಿ ನೋಡಿ ವಾವ್​ ಎಂದ ಸ್ಥಳೀಯರು | Naga Chaitanya

ಹೈದರಾಬಾದ್​​: ಅಕ್ಕಿನೇನಿ ನಾಗ ಚೈತನ್ಯ(Naga Chaitanya) ಮತ್ತು ಸಾಯಿ ಪಲ್ಲವಿ ಅಭಿನಯಿಸುತ್ತಿರುವ ‘ತಾಂಡೇಲ್’ ಸಿನಿಮಾವನ್ನು ಚಂದೂ ಮೊಂಡೇಟಿ ನಿರ್ದೇಶಿಸುತ್ತಿದ್ದಾರೆ. ಈ ರೊಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ಸಂಕ್ರಾಂತಿಯಂದು ಬಿಡುಗಡೆ ಮಾಡಲು ಚಿತ್ರತಂಡದಿಂದ ಸಾಕಷ್ಟು ಪ್ರಯತ್ನವಾಯಿತಾದ್ರೂ ಸಾಧ್ಯವಾಗಲಿಲ್ಲ. ಆದರೆ ಈ ಸಿನಿಮಾವು ಫೆಬ್ರವರಿ 7 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ.

ಚಿತ್ರದ ಬಹುಪಾಲು ಚಿತ್ರೀಕರಣ ವಿಶಾಖಪಟ್ಟಣಂ ಮತ್ತು ಶ್ರೀಕಾಕುಳಂನಲ್ಲಿ ನಡೆದಿದೆ. ಈಗಾಗಲೇ ಬಿಡುಗಡೆಯಾಗಿರುವ 'ತಾಂಡೇಲ್' ಹಾಡುಗಳು ಮತ್ತು ಇತರ ವಿಡಿಯೋಗಳು ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸುತ್ತಿವೆ. ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರತಂಡ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ಇದು ಸಿನಿಮಾಗೆ ಸಂಬಂಧಿಸಿದ್ದಲ್ಲ.

ತಾಂಡೇಲ್​​​ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನ ನಾಗ ಚೈತನ್ಯ ಒಮ್ಮೆ ಮೀನುಗಾರರಿಗೆ ಮೀನಿನ ಸಾರು ಮಾಡಿ ನಿಮ್ಮೆಲ್ಲರಿಗೂ ಬಡಿಸುತ್ತೇನೆ ಎಂದು ಹೇಳಿದ್ದರಂತೆ, ಹೇಳಿದ ಮಾತಿನಂತೆ ನಾಗ ಚೈತನ್ಯ ಮೀನಿನ ಸಾರು ಮಾಡಿ ಸ್ಥಳೀಯರಿಗೆ ಬಡಿಸಿದ್ದಾರೆ. ಫನ್ನಿ ವಾಯ್ಸ್ ಓವರ್ ಮೂಲಕ ಈ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

ವಿಡಿಯೋದಲ್ಲಿ ಸ್ವತಃ ನಾಗ ಚೈತನ್ಯ ಮಾಡಿದ ಮೀನಿನ ಸಾರನ್ನು ತಯಾರಿಸುವುದನ್ನು ನೋಡಬಹುದು. ಅದು ಸ್ಥಳಿಯರು ಹೇಳಿದ ರೀತಿಯಲ್ಲೇ ತಯಾರಿಸಿದ್ದಾರೆ. ಬಳಿಕ ರುಚಿ ನೋಡಿ ಚೆನ್ನಾಗಿದೆ ಎಂದ ಹೇಳುತ್ತಾರೆ. ಪಕ್ಕದಲ್ಲಿ ನಿಂತಿದ್ದ ಮಹಿಳೆಗೂ ಸಾರಿನ ರುಚಿ ಹೇಳುವಂತೆ ಕೊಡುತ್ತಾರೆ. ಅವರು ಕೂಡ ಸೂಪರ್​ ಎಂದು ಹೇಳುವುದನ್ನು ಕಾಣಬಹುದು. ಅಲ್ಲಿ ನೆರೆದಿದ್ದ ಎಲ್ಲರಿಗೂ ಮೀನಿನ ಸಾರಿನ ಜತೆಗೆ ಅನ್ನವನ್ನು ತಮ್ಮ ಕೈಯಿಂದಲೇ ಬಡಿಸುತ್ತಾರೆ.

ಬಡಿಸಿದ ನಂತರ ಹೇಗಿದೆ ಎಂದು ಕೇಳುತ್ತಾರೆ. ಚೆನ್ನಾಗಿಲ್ಲದಿದ್ದರೆ ಏನು ಅಂದುಕೊಳ್ಳಬೇಡಿ. ನಾನು ಮೊದಲ ಬಾರಿಗೆ ಪ್ರಯತ್ನಿಸಿದ್ದೇನೆ ಎಂದು ಹೇಳುತ್ತಾರೆ. ನಮ್ಮ ರೀತಿ ಆಗಲು ಆ ವ್ಯಕ್ತಿ ಎಷ್ಟು ಕಷ್ಟಪಡುತ್ತಿದ್ದಾರೆ, ಅದಕ್ಕೂ ಹೆಚ್ಚು ಫಲಿತಾಂಶ ಸಿಗಲಿ ಎಂದು ದಿನವೂ ಆ ದುರ್ಘಾ ಭವಾನಿ ತಾಯಿಗೆ ಬೇಡಿಕೊಳ್ಳುತ್ತಿದ್ದೇನೆ ಎಂದು ಹೇಳುವ ಮೂಲಕ ವಿಡಿಯೋ ಮುಗಿಯುತ್ತದೆ.

ತಾಂಡೇಲ್​ ಸಿನಿಮಾದಲ್ಲಿ ಶ್ರೀಕಾಕುಳಂ ಕರಾವಳಿ ಪ್ರದೇಶದ ಮೀನುಗಾರನ ಪಾತ್ರದಲ್ಲಿ ನಾಗ ಚೈತನ್ಯ ನಟಿಸುತ್ತಿದ್ದಾರೆ. ಚೈತನ್ಯ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್​​ನಲ್ಲಿ ಈ ಹಿಂದೆ ಲವ್ ಸ್ಟೋರಿ ಸಿನಿಮಾ ತೆರೆಕಂಡಿತ್ತು. ಸಿನಿಮಾ ಉತ್ತಮ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಇಬ್ಬರೂ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಬುಜ್ಜಿ ತತ್ಲಿ ಹಾಡಿನಲ್ಲಿ ಸಾಯಿ ಪಲ್ಲವಿ ಅಭಿನಯ ನೋಡಿದ ಹಲವರು ತಾಂಡೇಲ್ ಸಿನಿಮಾದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಗೆ ಅರ್ಹರು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಾಗ ಚೈತನ್ಯ ಅವರಿಗೆ ಸದ್ಯ ಹಿಟ್​ ಸಿನಿಮಾವೊಂದರ ಅಗತ್ಯವಿದೆ. ಈ ಸಿನಿಮಾ ಅವರಿಗೆ ಎಷ್ಟರ ಮಟ್ಟಿಗೆ ಯಶಸ್ಸು ತಂದುಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.(ಏಜೆನ್ಸೀಸ್​​)