ನ್ಯೂಸ್

Naga Chaitanya & sobhita Dhulipala ಮದುವೆಗೆ ಕ್ಷಣಗಣನೆ.. ಅವರ ವಯಸ್ಸಿನ ಅಂತರವೆಷ್ಟು ಗೊತ್ತೆ!

ಹೈದರಾಬಾದ್​: ಹೈದರಾಬಾದ್​ನ ಐಕಾನಿಕ್​ ಎಂದೇ ಫೇಮಸ್​​ ಆಗಿರುವ ಅನ್ನಪೂರ್ಣ ಸ್ಟೂಡಿಯೋದಲ್ಲಿ ಸೌತ್​ ಸ್ಟಾರ್​ ಅಕ್ಕಿನೇನಿ ನಾಗಚೈತನ್ಯ- ಸೋಭಿತಾ ಧೂಳಿಪಾಳ(Naga Chaitanya & sobhita Dhulipala) ಇದೇ ಡಿ.4 ರಂದು ಮದುವೆ ನಡೆಯಲಿದೆ. ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲಿಡುವ ಈ ಇಬ್ಬರ ಬಹು ನಿರೀಕ್ಷಿತ ಮದುವೆಗೆ ಟಾಲಿವುಡ್​ ಅಂಗಳದಲ್ಲಿ ಕ್ಷಣಗಣನೆ ಶುರುವಾಗಿದೆ.

ಇದೆಲ್ಲದರ ನಡುವೆ ಇತ್ತೀಚಿಗಷ್ಟೇ ನಾಗಚೈತನ್ಯ ಅವರ ತಮ್ಮ ಅಖಿಲ್​ ಅಕ್ಕಿನೇನಿ ಮತ್ತು ಝೈನಬ್​ ರಾವಡ್ಜಿ ಜತೆ ಸದ್ದಿಲ್ಲದೆ ನಿಶ್ಚಿತಾರ್ಥ ನಡೆದಿದೆ. ಇವರಿಬ್ಬರ ನಡುವೆ 9 ವರ್ಷಗಳ ನಡುವೆ ಅಂತರವಿದ್ದು, ಇಷ್ಟು ಚಿಕ್ಕ ವಯಸ್ಸಿನ ಹುಡುಗಿಯನ್ನು ಅಖಿಲ್​ ಮದುವೆಯಾಗುತ್ತಿದ್ದರಾ? ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ನಾಗಚೈತನ್ಯ- ಸೋಭಿತಾ ವಯಸ್ಸಿನ ಅಂತರದ ಬಗ್ಗೆ ಕೂಡ ಬಿಸಿ ಬಿಸಿ ಚರ್ಚೆ ಮುನ್ನೆಲೆಗೆ ಬಂದಿದೆ.

ಚೈ-ಸೋಭಿತಾ ವಯಸ್ಸಿನ ಕುತೂಹಲ?

ನಾಗಚೈತನ್ಯ- ಸೋಭಿತಾ ಧೂಳಿಪಾಳ ಅವರ ವಯಸ್ಸಿನ ಅಂತರ ಅಜಗಜಾಂತರ ವ್ಯತ್ಯಾಸ ಇಲ್ಲ. ಇಬ್ಬರ ನಡುವೆ 6 ವರ್ಷಗಳ ಅಂತರವಿದೆ. 1986ರ ನ.23 ರಂದು ಜನಿಸಿದ ಚೈತನ್ಯ, 38 ವರ್ಷ ತುಂಬಿದೆ. ಅದರಂತೆ 1992ರ ಮೇ.23 ರಂದು ಹುಟ್ಟಿದ ಸೋಭಿತಾ 32 ವರ್ಷ ಆಗಿದೆ. ಇಬ್ಬರ ನಡುವೆ ಅಂತಹ ವಯಸ್ಸಿನ ವ್ಯತ್ಯಾಸ ಇರದಿದ್ದರೂ ನೆಟ್ಟಿಗರು ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ವಯಸ್ಸಿನ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದಾರೆ.

ಇನ್ನು ಈಗಾಗಲೇ ವಧು ವರ ಕುಟುಂಬಗಳು ಹೈದರಾಬಾದ್​ನಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು, ಸೋಭಿತಾ ತವರು ಮನೆ ವಿಶಾಖಪಟ್ಟಂನಲ್ಲಿ ತೆಲುಗು ಸಾಂಪ್ರದಾಯದಂತೆ 'ಪಸುಪು ದಂಚನಂ'(ಹರಿಶಿನಿ ಕಾರ್ಯ) ಮತ್ತು 'ಜಿಲಾಕರ್ರ ಬೆಲ್ಲಂ' ಸೇರಿದಂತೆ ಮದುವೆಯ ಮುನ್ನ ನಡೆಯುವ ವಿವಿಧ ಶಾಸ್ತ್ರಗಳು ನೆರವೇರಿವೆ. ಡಿ.4ರಂದು ಈ ಇಬ್ಬರ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ?

ಸೋಭಿತಾ ಅವರ ಕುಟುಂಬದ ಸದಸ್ಯರು ಸೇರಿದಂತೆ ಅಕ್ಕಿನೇನಿ ಮತ್ತು ದಗ್ಗುಬಾಟಿ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ. ಜತೆಗೆ ಸಿನಿ ರಂಗದ ಪ್ರಮುಖರು ಮಾತ್ರ ಪಾಲ್ಗೊಳಲಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್​)