ನ್ಯೂಸ್

ನಟ ಸುದೀಪ್ ವಿರುದ್ಧ ಎನ್​. ಕುಮಾರ್ ತೀವ್ರ ಬೇಸರ; ಶಿವಣ್ಣ ಅವರನ್ನು ಭೇಟಿ ಮಾಡದೆ ಹೋಗುವುದಿಲ್ಲ ಎಂದ ನಿರ್ಮಾಪಕರ ತಂಡ

ಬೆಂಗಳೂರು: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ನಟ ಕಿಚ್ಚ ಸುದೀಪ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಎನ್​. ಕುಮಾರ್​, ನಿರ್ಮಾಪಕರ ತಂಡದೊಂದಿಗೆ ಫಿಲ್ಮ್ ಚೇಂಬರ್ ಕಛೇರಿ ಬಳಿ ಕುಳಿತು ಧರಣಿ ನಡೆಸುತ್ತಿದ್ದಾರೆ.

ಫಿಲ್ಮ್ ಚೇಂಬರ್ ಮುಂದೆ‌ ಬೀಡು ಬಿಟ್ಟ ನಿರ್ಮಾಪಕರ ತಂಡ, ನಾವು ಡಾ. ಶಿವರಾಜ್​​ಕುಮಾರ್​ ಅವರನ್ನು ಇಂದು ಭೇಟಿ ಮಾಡದೆ ಸ್ಥಳದಿಂದ ಕದಲುವುದಿಲ್ಲ. ಒಂದು ವೇಳೆ ಶಿವಣ್ಣ ಬರಲು ವಿಫಲವಾದರೆ, ಚಾಪೆ, ದಿಂಬು ತಂದು ನಾಳೆಯಿಂದ ವಾಣಿಜ್ಯ ಮಂಡಳಿಯಲ್ಲೇ ವಾಸ್ತವ್ಯ ಹೂಡುತ್ತೇವೆ ಎಂದು ನಿರ್ಮಾಪಕ ಎನ್​. ಕುಮಾರ್ ಹೇಳಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಕಛೇರಿ ಮುಂದೆ ಹಲವು ನಿರ್ಮಾಪಕರು ಹಾಜರಾಗುತ್ತಿದ್ದು, ನಟ ಶಿವರಾಜ್​ಕುಮಾರ್​ ಅವರ ಆಗಮನಕ್ಕೆ ಕಾದು ಕುಳಿತ್ತಿದ್ದಾರೆ. ಸದ್ಯ ಮೈಸೂರಿನಲ್ಲಿರುವ ಶಿವಣ್ಣ, ಸ್ಥಳಕ್ಕೆ ಭೇಟಿ ನೀಡಲಿದ್ದಾರ ಎಂಬುದು ಇನ್ನೂ ತಿಳಿದುಬಂದಿಲ್ಲ.