Jaipur Shops : ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿದೆ, ಈ ನಡುವೆ ಸಿಹಿ ತಿಂಡಿಗಳಿಗೆ ಫೇಮಸ್ ಆದ ರಾಜಸ್ಥಾನ ಜೈಪುರದ ಸಿಹಿ ತಿಂಡಿ ಅಂಗಡಿಗಳಲ್ಲಿ 'ಮೈಸೂರು ಪಾಕ್ ' ಸೇರಿದಂತೆ ವಿವಿಧ ಸಿಹಿತಿಂಡಿಗಳ ಹೆಸರನ್ನು ಬದಲಾಯಿಸಿವೆ. ಅಂಗಡಿಯ ಮಾಲೀಕರೊಬ್ಬರು ತಮ್ಮ ಎಲ್ಲಾ ಸಿಹಿತಿಂಡಿಗಳ ಹೆಸರುಗಳಿಂದ 'ಪಾಕ್' ಪದವನ್ನು ತೆಗೆದುಹಾಕಿ 'ಶ್ರೀ' ಎಂದು ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ.
"ನಮ್ಮ ಸಿಹಿತಿಂಡಿಗಳ ಹೆಸರಿನಿಂದ 'ಪಾಕ್' ಪದವನ್ನು ತೆಗೆದುಹಾಕಿದ್ದೇವೆ. ನಾವು 'ಮೋತಿ ಪಾಕ್' ಅನ್ನು 'ಮೋತಿ ಶ್ರೀ' ಎಂದು, 'ಗೊಂಡ್ ಪಾಕ್' ಅನ್ನು 'ಗೊಂಡ್ ಶ್ರೀ' ಎಂದು, 'ಮೈಸೂರು ಪಾಕ್' ಅನ್ನು 'ಮೈಸೂರು ಶ್ರೀ' ಎಂದು ಮರುನಾಮಕರಣ ಮಾಡಿದ್ದೇವೆ" ಎಂದು ಅಂಗಡಿಯೊಬ್ಬರು ತಿಳಿಸಿದ್ದಾರೆ.
ಆದರೆ ಸಿಹಿತಿಂಡಿಗಳಲ್ಲಿ 'ಪಾಕ್' ಎಂಬ ಪದವು ಪಾಕಿಸ್ತಾನವನ್ನು ಉಲ್ಲೇಖಿಸುವುದಿಲ್ಲ, ಕನ್ನಡದಲ್ಲಿ ಸಿಹಿ ಎಂದರ್ಥ.
ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಂಗಡಿ ಮಾಲೀಕರ ಈ ಕ್ರಮಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಜನರ ಪ್ರವಾಸಿಗರ ಹತ್ಯೆಯ ನಂತರ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಲು ಆಪರೇಷನ್ ಸಿಂಧೂರ ನಡೆಸಿ 100 ಕ್ಕೂ ಅಧಿಕ ಉಗ್ರರ ಹತ್ಯೆ ಮಾಡಿದೆ.
ನಂತರ ಪಾಕಿಸ್ತಾನವು ಬೃಹತ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ನಡೆಸಿತು ಆದರೆ ಭಾರತ ಅವರ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿತು. ಮೇ 10 ರಂದು ನಡೆದ ಕದನ ವಿರಾಮವು ಯುದ್ಧವನ್ನು ಕೊನೆಗೊಳಿಸಿದೆ.(ಏಜೆನ್ಸೀಸ್)