ನ್ಯೂಸ್

ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಪಡಿಸಿ ಆದೇಶ ಹೊರಡಿಸಿದ ಹೈ ಕೋರ್ಟ್​

ಮೈಸೂರು: ನಗರದ ಮೇಯರ್ ಆಗಿರುವ ರುಕ್ಮಿಣಿ ಮಾದೇಗೌಡ ಅವರ ಮಹಾನಗರ ಪಾಲಿಕೆ ಸದಸ್ಯತ್ವ ರದ್ದು ಮಾಡಿ ಹೈ ಕೋರ್ಟ್​ ಆದೇಶ ನೀಡಿದೆ. ಈ ಮೂಲಕ ಹೈ ಕೋರ್ಟ್​ ಜಿಲ್ಲಾ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದಿದೆ.

ರುಕ್ಮಿಣಿ ಮಾದೇಗೌಡ ಚುನಾವಣೆ ವೇಳೆ ಸೂಕ್ತ ಆದಾಯ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ. ಈ ಕುರಿಯಾಗಿ ಪ್ರತಿಕ್ರಿಯಿಸಿರುವ ಅವರ ಪತಿ ಮಾದೇಗೌಡ, ತೀರ್ಪು ಸಮಾಧಾನ ತಂದಿಲ್ಲ ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ತಾವು ಸುಪ್ರೀಂ ಕೋರ್ಟ್​ ಮೊರೆ ಹೋಗುವುದಾಗಿಯೂ ಅವರು ತಿಳಿಸಿದ್ದಾರೆ.

ಪಾಲಿಕೆ ಸದಸ್ಯತ್ವ ರದ್ದಾಗಿರುವ ಹಿನ್ನೆಲೆಯಲ್ಲಿ ಮೇಯರ್​ ಸ್ಥಾನಕ್ಕೂ ಕಂಟಕ ಬಂದೊದಗಿದೆ. ರುಕ್ಮಿಣಿ ಅವರು ಹೈ ಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸುವವರೆಗೂ ಅವರಿಗೆ ಮೇಯರ್​ ಅಧಿಕಾರವಿರುವುದಿಲ್ಲ. ರುಕ್ಮಿಣಿ ಅವರ ಪತಿ ಮೈಸೂರು ಜಿಪಂ ಸದಸ್ಯರಾಗಿದ್ದಾರೆ.