ನ್ಯೂಸ್

ತ್ಯಾಜ್ಯ ನಿರ್ವಹಣೆಯಲ್ಲಿ ಸಾಂಸ್ಕೃತಿಕ ನಗರ ಮೈಸೂರಿಗೆ ಪಂಚತಾರಾ ಗ್ರೇಡ್​

ನವದೆಹಲಿ: ರಾಜ್ಯದ ಸಾಂಸ್ಕೃತಿಕ ಹಾಗೂ ಅರಮನೆ ನಗರ ಎಂದೇ ಖ್ಯಾತಿಯಾಗಿರುವ ಮೈಸೂರಿಗೆ ತ್ಯಾಜ್ಯ ನಿರ್ವಹಣೆಗೆ ಕೇಂದ್ರ ಸರ್ಕಾರ 5 ಸ್ಟಾರ್​ ಗ್ರೇಡ್​ ನೀಡಿದೆ.

ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಉತ್ತಮವಾಗಿ ಘನತ್ಯಾಜ್ಯ ನಿರ್ವಹಣೆ ಮಾಡಿದ ರಾಷ್ಟ್ರದ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮೈಸೂರಿಗೆ ಪಂಚತಾರಾ ದರ್ಜೆ ದೊರೆತಿದೆ ಎಂದು ಸಂಸದ ಪ್ರತಾಪ್​ಸಿಂಹ ಟ್ವೀಟ್​ ಮಾಡಿದ್ದಾರೆ.

ಮನೆ ಬಾಗಿಲಿಗೆ ತೆರಳಿ ಕಸ ಸಂಗ್ರಹಿಸುವುದು, ಘನ ತ್ಯಾಜ್ಯ ನಿರ್ವಹಣೆ ಹಾಗೂ ನಗರವನ್ನು ಸ್ವಚ್ಛಗೊಳಿಸಿ ತ್ಯಾಜ್ಯ ಮುಕ್ತವಾಗಿಸಿರುವ ಹಿನ್ನೆಲೆಯಲ್ಲಿ ಮೈಸೂರಿಗೆ ಗ್ರೇಡ್​ ದೊರೆತಿದೆ.

ಈಗಾಗಲೇ ಮೈಸೂರು ಹಲವು ಸ್ವಚ್ಛತೆಯಲ್ಲಿ ಹಲವು ಬಾರಿ ಪ್ರಥಮ ಸ್ಥಾನ ಪಡೆದಿದೆ. ಈಗ ಪಂಚತಾರಾ ದರ್ಜೆ ದೊರೆತು ಮತ್ತೊಂದು ಗರಿ ಮೂಡಿದೆ.