ಪ್ರವಾಸಕ್ಕೆ ಹೋದವರು ಆಣೆ ಪ್ರಮಾಣ ಮಾಡುತ್ತಿರುದು  
ನ್ಯೂಸ್

ಬೆಂಬಲಿಗರನ್ನು ಪ್ರವಾಸಕ್ಕೆ ಕಳಿಸಿದರೂ ಸಿಗದ ಗ್ರಾ.ಪಂ ಅಧ್ಯಕ್ಷ ಪಟ್ಟ; ಹೋದದ್ದು 9 ಜನರು, ಸಿಕ್ಕಿದ್ದು 6 ಮತ!

ಮೈಸೂರು: ವಿಧಾನಸಭಾ ಚುನಾವಣೆ ಮಾತ್ರವೇ ಕದನ ಕಣ ಆಗಿರುತ್ತದೆ ಎಂದುಕೊಳ್ಳುವ ಅನೇಕರಿಗೆ, ಗ್ರಾಮ ಪಂಚಾಯಿತಿಗಳಲ್ಲೂ ತೀವ್ರ ತರ ಪೈಪೋಟಿ, ನೀರಿನಂತೆ ಹರಿಯುವ ಹಣ, ಎಲ್ಲವೂ ಇರುತ್ತದೆ ಎನ್ನುವುದು ತಿಳಿದಿರುವುದಿಲ್ಲ. ಅಂತಹವರಿಗೆ ಈ ವಿಚಿತ್ರ ಪ್ರಕರಣ ಉತ್ತಮ ಉದಾಹರಣೆಯಾಗಿ ಕೆಲಸ ಮಾಡುತ್ತದೆ.

ಮೈಸೂರು ಜಿಲ್ಲೆ ಕೆ.ಆರ್ ನಗರ ಕ್ಷೇತ್ರದ ಸಾಲಿಗ್ರಾಮ ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಚುನಾವಣೆ ನಡೆದಿದ್ದು, ಫಲಿತಾಂಶ ಆಶ್ಚರ್ಯಕರವಾಗಿ ಬಂದಿದೆ. ಅಧ್ಯಕ್ಷ ಗಾದಿಯ ಆಕಾಂಕ್ಷಿಯೊಬ್ಬರು, ತಮ್ಮ ಬೆಂಬಲಿಗರನ್ನ ಪ್ರವಾಸಕ್ಕೆ ಕಳುಹಿಸಿಯೂ ಕೈ ಸುಟ್ಟುಕೊಂಡಿದ್ದಾರೆ.

ಇವರು, ಒಟ್ಟು 9 ಮಂದಿ‌ಯನ್ನು ಪ್ರವಾಸಕ್ಕೆಂದು ಕಳಿಸಿದ್ದಾರೆ. ಆದರೆ ಪ್ರವಾಸಕ್ಕೆ ಕಳುಹಿಸದವರ ಪರವಾಗಿ ಬಿದಿದ್ದು ಮಾತ್ರ ಕೇವಲ 6 ವೋಟ್. ಇದರಿಂದಾಗಿ ಮೋಸ ಮಾಡಿದ ಆ ಮೂವರು ಯಾರು ಎನ್ನುವ ಪ್ರಶ್ನೆ ಎದ್ದಿದ್ದು, ಪ್ರವಾಸಕ್ಕೆ ಹೋದ ಎಲ್ಲಾ 9 ಮಂದಿಯೂ ಕಪ್ಪಡಿ ರಾಜಪ್ಪಾಜಿ ಗದ್ದುಗೆಯಲ್ಲಿ ನಾವೆಲ್ಲಾ ನಿಮಗೆ ಓಟ್ ಹಾಕಿದ್ದೇವೆ ಎಂದು ಆಣೆ ಪ್ರಮಾಣ ಮಾಡಿದ್ದಾರೆ.

ಜೆಡಿಎಸ್ ಬೆಂಬಲಿತ ಅಭ್ಯರ್ಥಿ, ಭಾರತಿ ವಿಶ್ವನಾಥ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಇವರು, ತಮ್ಮ 9 ಜನ ಬೆಂಬಲಿಗರ ಜತೆ ಮಾತುಕತೆ ನಡೆಸಿ ಕೆ.ಆರ್. ಪೇಟೆ ತಾಲೂಕಿನ ಚಂದಗೋಳಮ್ಮ ದೇವಾಲಯದಲ್ಲಿ ತಮಗೇ ಮತ ಹಾಕುವಂತೆ ಆಣೆ ಪ್ರಮಾಣ ಮಾಡಿಸಿ ಮಹದೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆಂದು ಕಳಿಸಿದ್ದರು.

ಗ್ರಾ.ಪಂ ಸದಸ್ಯರಾದ ಗೌತಮ್, ಲೀಲಾವತಿ, ನರೇಂದ್ರ ಕುಮಾರ್, ಮಹದೇವಮ್ಮ, ದೀಪಿಕಾ, ವೆಂಕಟೇಶ್, ಪುಟ್ಟಸ್ವಾಮೀಗೌಡ, ಕುಳ್ಳಯ್ಯ ಕುಮಾರ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ನೇರವಾಗಿ ಮತಗಟ್ಟೆಗೆ ಬಂದ 9 ಜನ, ಗೌಪ್ಯವಾಗಿ ಮತದಾನ ಮಾಡಿದ್ದರು. ಆದರೆ ಆಕಾಂಕ್ಷಿ ಭಾರತಿ ಶಂಕರ್​ ಮಾತ್ರ ಫಲಿತಾಂಶ ಕಂಡು ಬೆಚ್ಚಿ ಬಿದ್ದಿದ್ದಾರೆ. ಮೂರು ಮತಗಳಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯಾ ರಾಮಕೃಷ್ಟೇಗೌಡ ಗೆಲುವು ಸಾಧಿಸಿದ್ದಾರೆ. ಅವರು ಒಟ್ಟು 9 ಮತಗಳನ್ನ ಪಡೆದಿದ್ದರು.

ಇದರಿಂದಾಗಿ ಭಾರತಿ ವಿಶ್ವನಾಥ್​ ಅವರಿಗೆ ಸಂಶಯಹುಟ್ಟಿದ್ದು, ಅದಕ್ಕೆ ಅವರ ಬೆಂಬಲಿಗರು, ಸತ್ಯಕ್ಕೆ ಹೆಸರುವಾಸಿಯಾಗಿರುವ ಕಪ್ಪಡಿ ರಾಜಪ್ಪಾಜಿ ಗದ್ದುಗೆ ಮುಂದೆ ನಿಂತು "ಕರ್ಪೂರ ನಾವ್ ಅಂತು ಭಾರತಿ ವಿಶ್ವನಾಥ್ ಗೆ ಮತ ಹಾಕಿದ್ದೇವೆ" ಎಂದು ಹಚ್ಚಿ ಆಣೆ ಪ್ರಮಾಣ.