ನ್ಯೂಸ್

'ತನಿಷ್ಕ್​ ಜಾಹೀರಾತಿನಂತೆ ಇದೆ ನನ್ನ ಬದುಕು...' ಎಂದ ನಟಿ ರಿಚಾ

lakshmihegde

ತಾರಾ ಜೋಡಿ ರಿಚಾ ಚಾದಾ ಮತ್ತು ಅಲಿ ಫಜಲ್​ ತಮ್ಮ ಮದುವೆಯನ್ನು ಈಗಾಗಲೇ ಎರಡು ಬಾರಿ ಮುಂದೂಡಿದ್ದಾರೆ. ಏಪ್ರಿಲ್​ನಲ್ಲಿಯೇ ಇವರ ವಿವಾಹ ನಡೆಯುವುದಿತ್ತು. ಆದರೆ ಕೊವಿಡ್​-19ನಿಂದ ಆಗಸ್ಟ್​ಗೆ ಮುಂದೂಡಲಾಯಿತು. ಮದುವೆ ಕಾರ್ಡ್​ ಕೂಡ ಪ್ರಿಂಟ್ ಆಗಿತ್ತು. ಆದರೆ ಕರೊನಾ ಸೋಂಕು, ಲಾಕ್​ಡೌನ್​ಗಳಿಂದಾಗಿ ಮದುವೆಯನ್ನು 2021ಕ್ಕೆ ಮುಂದೂಡಿದ್ದಾರೆ.

ರಿಚಾ ಮತ್ತು ಅಲಿ ಅಂತರ್​ಧರ್ಮೀಯ ವಿವಾಹವಾಗುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ರಿಚಾ ಹೇಳಿಕೆಯೊಂದನ್ನು ನೀಡಿದ್ದಾರೆ. ಇತ್ತೀಚೆಗೆ ತನಿಷ್ಕ್​ ತನ್ನ ಚಿನ್ನಾಭರಣಗಳ ಪ್ರಮೋಶನ್​ಗಾಗಿ ನೀಡಿದ್ದ ಜಾಹೀರಾತನ್ನು ಉಲ್ಲೇಖಿಸಿ ರಿಚಾ ಮಾತನಾಡಿದ್ದಾರೆ. ಇದನ್ನೂ ಓದಿ: ‘ಆರ್​ಆರ್​ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅಲ್ಲ, ‘ಮನಿ’ರತ್ನ’

ಹಿಂದು ಯುವತಿ ಸೊಸೆಯಾಗಿ ಮುಸ್ಲಿಂ ಮನೆಗೆ ಬರುತ್ತಾಳೆ. ಅವಳ ಸೀಮಂತವನ್ನು ಪತಿಯ ಮನೆಯಲ್ಲಿ ಅತ್ತೆ, ಕುಟುಂಬದವರೆಲ್ಲ ಸೇರಿ, ತಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿ, ಅದ್ದೂರಿಯಾಗಿ, ಪ್ರೀತಿ, ಮಮತೆಯಿಂದ ಆಚರಿಸುವ ಅಂಶವನ್ನೊಳಗೊಂಡ ಜಾಹೀರಾತು ಮಾಡಿದ್ದ ತನಿಷ್ಕ್​ ಜ್ಯುವೆಲರಿ ವಿವಾದ ಸೃಷ್ಟಿಯಾಗುತ್ತಿದ್ದಂತೆ ಹಿಂಪಡೆದಿದೆ. ಈ ಜಾಹೀರಾತು ಒಂದು ಕೋಮಿನ ಜನರನ್ನು ಓಲೈಸುವಂತೆ ಇದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.

ಈಗ ರಿಚಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತ ಮಾತನಾಡಿ, ನನ್ನ ಜೀವನವೂ ತನಿಷ್ಕ್​ ಜಾಹೀರಾತಿನಂತೆ ಇದೆ ಎಂದಿದ್ದಾರೆ.  ಇದನ್ನೂ ಓದಿ: VIDEO: ಆಗಸದಲ್ಲಿ ವಿಚಿತ್ರ ವಿದ್ಯಮಾನ- ಒಂದೇ ಬಾರಿ ಮೂರು ಸೂರ್ಯನ ಉದಯ!

ಅಲಿ ಕುಟುಂಬದವರು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಹಾಗೇ ನಮ್ಮ ಕುಟುಂಬದಲ್ಲಿ ಅಲಿಯನ್ನು ಪ್ರೀತಿಸುತ್ತಾರೆ. ಆದರೆ ಬೇರೆಯವರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಾಗ ಅದರಿಂದ ಸಮಸ್ಯೆಗೆ ಒಳಗಾಗುವ, ಪ್ರೀತಿಯೇ ಇಲ್ಲದ, ಗೊತ್ತಿಲ್ಲದ ಜನರ ಬಗ್ಗೆ ನನಗೆ ವಿಷಾದ ಇದೆ ಎಂದು ರಿಚಾ ತಿಳಿಸಿದ್ದಾರೆ.

ಅಷ್ಟೇ ಅಲ್ಲ ರಿಚಾ ತಮ್ಮ ಟ್ವಿಟರ್​ನಲ್ಲಿ ತನಿಷ್ಕ್ ಆ್ಯಡ್​ನ್ನು ಶೇರ್ ಮಾಡಿಕೊಂಡು ಇದೊಂದು ಸುಂದರ ಜಾಹೀರಾತು ಎಂದೂ ಹೇಳಿದ್ದಾರೆ. (ಏಜೆನ್ಸೀಸ್​)