ನ್ಯೂಸ್

ನನ್ನ ಮಕ್ಕಳು... ಮೋದಿ ತಾತನನ್ನು ಮಿಸ್​​ ಮಾಡಿಕೊಳ್ಳುತ್ತಿದ್ದಾರೆ: ಉಷಾ ವ್ಯಾನ್ಸ್ | Usha Vance​

Usha Vance:ನನ್ನ ಮಕ್ಕಳು ತಮ್ಮ ತಾತ(ಪ್ರಧಾನಿ ನರೇಂದ್ರ ಮೋದಿ) ನನ್ನು ತುಂಬಾ ಮಿಸ್​​ ಮಾಡಿಕೊಳ್ಳುತ್ತಿದ್ದಾರೆ ಎಂದು ಅಮೆರಿಕಾ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್​ ಪತ್ನಿ ಉಷಾ ವ್ಯಾನ್ಸ್​ ತಿಳಿಸಿದ್ದಾರೆ.

ಈ ವರ್ಷದ(2025)ಏಪ್ರಿಲ್‌ನಲ್ಲಿ ಜೆಡಿ ವ್ಯಾನ್ಸ್ ಮತ್ತು ಅವರ ಪತ್ನಿ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವೈಯಕ್ತಿಕವಾಗಿ ತೋರಿಸಿದ ಪ್ರೀತಿ ಮತ್ತು ವಾತ್ಸಲ್ಯವನ್ನು ತಾವು ಎಂದಿಗೂ ಮರೆಯುವುದಿಲ್ಲ ಎಂದು ಉಷಾ ವ್ಯಾನ್ಸ್ ಹೇಳಿದರು. ಭಾರತಕ್ಕೆ ಮತ್ತೆ ಭೇಟಿ ನೀಡಲು ಸಿದ್ಧರಿರುವುದಾಗಿ ಅವರು ಹೇಳಿದರು. ಆದರೆ, ಈ ಬಾರಿ ಅವರು ತಮ್ಮ ಬೇರುಗಳನ್ನು(ಕುಟಂಬ ಮೂಲ) ಹೊಂದಿರುವ ಸ್ಥಳಗಳಿಗೆ ಭೇಟಿ ನೀಡಲು ಬಯಸುತ್ತಿದ್ದಾರೆ ಎಂದು ಎಎನ್​​ಐ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.

"ನನ್ನ ಮಕ್ಕಳು ಭಾರತಕ್ಕೆ ಭೇಟಿ ನೀಡಿದಾಗ ಪ್ರಧಾನಿ ಮೋದಿಯವರನ್ನು ತಮ್ಮ ಅಜ್ಜನಂತೆ ಪರಿಗಣಿಸಿದ್ದರು. ನನ್ನ ಮಗ ವಿಶೇಷವಾಗಿ ಮೋದಿ ಅವರ ನಿವಾಸದಿಂದ ಎಲ್ಲಾ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಹೋದನು. ಅವನು ಅಲ್ಲಿಯೇ ಇರಲು ಬಯಸಿದ್ದನು" ಎಂದು ಅವರು ಬಹಿರಂಗಪಡಿಸಿದರು.

ತಮ್ಮ ಐದು ವರ್ಷದ ಮಗಳು ಮಿರಾಬೆಲ್‌ಗೆ ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯನ್ನು ನೀಡಿದ ನರೇಂದ್ರ ಮೋದಿ ಅವರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಭಾರತಕ್ಕೆ ಮತ್ತೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು. ಆದರೆ ಈ ಬಾರಿ, ಅವರು ತಮ್ಮ ಕುಟುಂಬದ ಮೂಲ ಇರುವ ಸ್ಥಳಗಳಿಗೂ ಭೇಟಿ ನೀಡಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​​)