ನ್ಯೂಸ್

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಹಿಂದೂ–ಮುಸ್ಲಿಂ ಸೌಹಾರ್ದ ಮೆರೆದ ಮುಸ್ಲಿಂ ಯುವಕ | Muslim

ರಾಯಚೂರು: ಜಿಲ್ಲೆಯು ದೇವದುರ್ಗ ಪಟ್ಟಣದ ಮುಸ್ಲಿಂ(Muslim) ಸಮುದಾಯದ ಬಾಬು ಗೌರಂಪೇಟ ಎಂಬ ಯುವಕ ಗುರುವಾರ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿಸುವ ಮೂಲಕ ಹಿಂದೂ–ಮುಸ್ಲಿಂ ನಡುವೆ ಸೌಹಾರ್ದ ಮೆರೆದಿದ್ದಾರೆ.

ಬಾಬು ಅವರು ತಮ್ಮ ವಾರ್ಡ್‌ನ ಗೆಳೆಯರ ಬಳಗದವರೊಂದಿಗೆ 2014ರಿಂದ ಅಯ್ಯಪ್ಪಸ್ವಾಮಿ ಮಾಲೆ ಧರಿಸುತ್ತಿದ್ದಾರೆ. ಈ ಮೂಲಕ ‘ದೇವನೊಬ್ಬ ನಾಮ ಹಲವು’ ಎಂಬ ಸಂದೇಶ ಸಾರುತ್ತಿದ್ದಾರೆ. ಬಾಬು ಅವರು ಪ್ರತಿ ವರ್ಷ ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ಎಲ್ಲರೊಡನೆ ಕೂಡಿ ಪಾದಯಾತ್ರೆ ನಡೆಸಿ ಸರದಿಯಲ್ಲಿ ನಿಂತು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ.

ಕಳೆದ 10 ವರ್ಷಗಳಿಂದ ಮಾಲೆ ಧರಿಸಿ ಅಯ್ಯಪ್ಪನಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಇವರ ಈ ಭಕ್ತಿ ಭಾವದ ಕಾರ್ಯಕ್ಕೆ ಸ್ಥಳೀಯರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.