ನ್ಯೂಸ್

ಮುಸ್ಲಿಮರ ದುಡ್ಡು ಮುಸ್ಲಿಮರಿಗಷ್ಟೇ, ಕರೊನಾ ನಿಧಿಗೆ ಅಲ್ಲ ಎಂದ ಶಾಸಕ ಜಮೀರ್​ ಅಹ್ಮದ್​- ಹಣ ಕೊಡುವವರಿಗೂ ಅಡ್ಡಗಾಲು!

ಬೆಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ಮುಸ್ಲಿಂ ಸಮುಯದಾಯದವರು ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿರುವ ಹಲ್ಲೆಯನ್ನು ಸಮರ್ಥಿಸಿಕೊಂಡು ಆರೋಗ್ಯ ಕಾರ್ಯಕರ್ತರನ್ನೇ ಬೈದು ಇತ್ತೀಚೆಗಷ್ಟೇ ವಿವಾದ ಸೃಷ್ಟಿಸಿರುವ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ಮತ್ತೊಮ್ಮೆ ತಮ್ಮ ವರಸೆ ತೋರಿಸಿದ್ದಾರೆ.

ಮುಸ್ಲಿಮರ ದುಡ್ಡನ್ನು ಕರೊನಾ ಸೇವೆಗೆ ಬಳಸುವುದು ಬೇಡ, ಇದು ಮುಸ್ಲಿಮರಿಗಷ್ಟೇ ಸೀಮಿತ ಎನ್ನುವ ಮೂಲಕ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ!

ಕರೊನಾ ಸೋಂಕಿತರಿಗಾಗಿ ಜಾತಿ-ಧರ್ಮದ ಭೇದವಿಲ್ಲದೇ ವೈದ್ಯಕೀಯ ಸಿಬ್ಬಂದಿ ಎಲ್ಲರಿಗೂ ಚಿಕಿತ್ಸೆ ನೀಡುತ್ತಿರುವ ಈ ಸಂದರ್ಭದಲ್ಲಿ, ಎಲ್ಲಾ ಜಾತಿ-ಧರ್ಮದವರು ತಮ್ಮ ಕೈಲಾದ ಮಟ್ಟಿಗೆ ಧನಸಹಾಯ ಮಾಡುತ್ತಿರುವ ಈ ಹೊತ್ತಿನಲ್ಲಿ ಮುಸ್ಲಿಮರ ದುಡ್ಡನ್ನು ಈ ಸೇವೆಗೆ ಕೊಡುವುದು ಏಕೆ ಎನ್ನುವ ಈ ಮಾತು ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ವಕ್ಫ್​ ಬೋರ್ಡ್​ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಲು ಮುಂದಾದ ಸಂದರ್ಭದಲ್ಲಿ, ಅಡ್ಡಗಾಲು ಹಾಕಿರುವ ಜಮೀರ್​, ಈ ಹಣವನ್ನು ನೀಡದಂತೆ ಸಲಹೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ, ಮುಖ್ಯಮಂತ್ರಿ ಪರಿಹಾರ ನಿಧಿಗಳಿಗೆ ಶಾಸಕ ತನ್ವೀರ್ ಸೇಠ್​ 20 ಲಕ್ಷ ಕೊಟ್ಟಿರುವುದಕ್ಕೂ ಹಾಗೂ ವಕ್ಫ್​ ಬೋರ್ಡ್​ ಧನ ಸಹಾಯಕ್ಕೆ ಮುಂದಾಗಿರುವುದಕ್ಕೂ ಜಮೀರ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತನ್ವೀರ್ ಸೇಠ್​ ಅವರು ಅಧ್ಯಕ್ಷರಾಗಿರುವ ಟಿಪ್ಪು ಸುಲ್ತಾನ್​ ಎಸ್ಟೇಟ್​ ಬೋರ್ಡ್​ ವತಿಯಿಂದ 20 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಲಾಗಿದೆ. ಜತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ವಕ್ಫ್​ ಬೋರ್ಡ್​ ತನ್ನ ಅಧೀನದ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಇದರಿಂದ ಜಮೀರ್​ ಕೆಂಡಾಮಂಡಲವಾಗಿದ್ದು, ಮುಸ್ಲಿಮರ ಹಣವನ್ನು ಮುಸ್ಲಿಮರ ಅಭಿವೃದ್ಧಿಗಷ್ಟೇ ಉಪಯೋಗಿಸಿ, ಅದು ಮುಸ್ಲಿಮರ ಹಣ. ಈ ರೀತಿ ಕರೊನಾ ನಿಧಿಗೆ ಕೊಡುವುದು ಸರಿಯಲ್ಲ ಎಂದಿದ್ದಾರೆ!

ಜಮೀರ್​ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಬಾಲಿಶವಾಗಿದೆ. ಇಂಥ ಮಾತುಗಳು ಜನಪ್ರತಿನಿಧಿಗಳಿಗೆ ಶೋಭೆ ತರುವಂಥದ್ದಲ್ಲ. ಸರ್ಕಾರಕ್ಕೆ ದೇಣಿಗೆ ನೀಡಬಾರದು ಎಂದು ಹೇಳುತ್ತಿರುವ ಶಾಶಕರು, ಸರ್ಕಾರ ವರ್ಷಕ್ಕೆ ವಕ್ಫ್​ ಮಂಡಳಿಗೆ 200 ಕೋಟಿ ರೂಒಪಾಯಿ ದೇಣಿಗೆ ನೀಡುವುದನ್ನು ಮರೆತರೆ ಹೇಗೆ? ಅವರು ಮಾತನಾಡುವುದಿದ್ದರೆ ವಕ್ಫ್​ ಆಸ್ತಿಯನ್ನು ತಿಂದು ತೇಗಿದವರ ಬಗ್ಗೆ ಮಾತನಾಡಲಿ, ಇಂಥ ಕೆಟ್ಟ ಮನಸ್ಥಿತಿ ಒಳ್ಳೆಯದಲ್ಲ ಎಂದಿದ್ದಾರೆ.